ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ: ಸಿಎಂ ಬೊಮ್ಮಾಯಿ

14ನೇ ಆವೃತ್ತಿಯ ಏರೋ ಇಂಡಿಯಾ ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.
ಏರೋ ಇಂಡಿಯಾ 2023 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಿಎಂ ಬೊಮ್ಮಾಯಿ.
ಏರೋ ಇಂಡಿಯಾ 2023 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಿಎಂ ಬೊಮ್ಮಾಯಿ.

ಬೆಂಗಳೂರು: 14ನೇ ಆವೃತ್ತಿಯ ಏರೋ ಇಂಡಿಯಾ ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.

ಭಾನುವಾರ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರೋ ಇಂಡಿಯಾ 2023 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮುಖ್ಯಮಂತ್ರಿಗಳು ಮಾತನಾಡಿದರು.

ಕೋವಿಡ್ ಸಮಯದಲ್ಲಿಯೂ ಕಾರ್ಯಕ್ರಮಗಳು ರದ್ದಾದರೂ ನಾವು ಎರಡು ವರ್ಷಗಳ ಹಿಂದೆ ಏರ್ ಶೋವನ್ನು ಯಶಸ್ವಿಯಾಗಿ ನಡೆಸಿದೆವು. ಅದು ನಮ್ಮ ಆತ್ಮವಿಶ್ವಾಸವನ್ಬು ಹೆಚ್ಚಿಸಿದೆ ಎಂದು ಹೇಳಿದರು.

ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ ಹಾಗೂ ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ. ಏರೋ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತ. ಇದರ ಆಯೋಜಿಸುವುದು ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ. ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿ ಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು. ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೊ ನಡೆಸಲು ಅತ್ಯಂತ ಸೂಕ್ತ ಸ್ಥಳ. ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ ಎಂದು ತಿಳಿಸಿದರು.

1960 ರಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. ಪ್ರತಿ ದಶಕದಲ್ಲಿ ಏರೊ ಸ್ಪೇಸ್ ಅಭಿವೃದ್ಧಿಯಾಗಿದೆ. ಸ್ಥಳ , ಸಾಮರ್ಥ್ಯ, ವೃದ್ಧಿಯಾಯಿತು. 1960 ಆರ್ಯಭಟ ಉಪಗ್ರಹ ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ 67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಿಂದ ಉತ್ಪಾದನೆಯಾಗುತ್ತದೆ ಎಂದರು.

ವಿಮಾನದ ವಿವಿಧ ಭಾಗಗಳನ್ನು ಬೆಂಗಳೂರಿನಲ್ಲಿ ತಯಾರಿಸುತ್ತಿರುವ ಕುರಿತು ಮಾತನಾಡಿ, “ನಮ್ಮ ದೇಶದಲ್ಲಿ ನಮ್ಮದೇ ಆದ ವಿಮಾನವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು ಎಂಬುದು ನನ್ನ ಕನಸು”. “ಏರೋಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಏರೋಸ್ಪೇಸ್ ಉತ್ಪಾದನಾ ಕೇಂದ್ರವನ್ನು ಹೊಂದಿರುವ ಅತ್ಯಂತ ಹಳೆಯ ರಾಜ್ಯ ನಮ್ಮದಾಗಿದೆ. ಈ ಉದ್ಯಮಕ್ಕೆ ಅಗತ್ಯವಿರುವ ವಿವಿಧ ತಂತ್ರಜ್ಞಾನಗಳನ್ನು ಒದಗಿಸಲು ನಾವು ಸಮರ್ಥರಾಗಿದ್ದೇವೆ.

ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗಲೂ ನಾವು ಏರೋ ಇಂಡಿಯಾವನ್ನು ರದ್ದುಪಡಿಸಲಿಲ್ಲ. ಏರೋ ಇಂಡಿಯಾದ 13 ನೇ ಆವೃತ್ತಿಯನ್ನು 2021 ರಲ್ಲಿ ಕೆಲವು ಅಗತ್ಯ ಬದಲಾವಣೆಗಳೊಂದಿಗೆ ನಡೆಸಲಾಯಿತು ಎಂದರು.

ಪ್ರತಿ ಬಾರಿಯೂ ನಾವು ನಮ್ಮ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಸಾಮರ್ಥ್ಯಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದೇವೆ. ವೈಮಾನಿಕ ಪ್ರದರ್ಶನವನ್ನು ಆಯೋಜಿಸುವ ಭಾರತದ ಸಾಮರ್ಥ್ಯವು ಕೋವಿಡ್ ಸಮಯದಲ್ಲಿ ಸವಾಲಾಗಿತ್ತು; ಪ್ಯಾರಿಸ್ ಏರ್ ಶೋ ಕೂಡ ರದ್ದುಗೊಂಡಿತು. ಆದರೆ. ನಾವು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋದೆವು. ಅದು ನಮ್ಮ ರಕ್ಷಣಾ ಮತ್ತು ಏರೋಸ್ಪೇಸ್ ಕೈಗಾರಿಕೆಗಳ ಸಾಮರ್ಥ್ಯವನ್ನು ಹೇಳುತ್ತದೆ. ಆ ಅನುಭವ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

“ಕರ್ನಾಟಕ ಮತ್ತು ಬೆಂಗಳೂರು ಎರಡಕ್ಕೂ ಕಾರ್ಯಕ್ರಮವನ್ನು ಆಯೋಜಿಸುವುದು ಅಭ್ಯಾಸವಾಗಿದೆ. ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ನಮ್ಮ ಪೂರ್ವಜರಿಗೆ ಧನ್ಯವಾದಗಳು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com