ಪ್ರಯೋಗಾತ್ಮಕ ಸೇವೆ ಯಶಸ್ಸಿನ ಬೆನ್ನಲ್ಲೇ ಅಂಚೆ ಕಚೇರಿಯಿಂದ ನಿಯಮಿತ ಎಕ್ಸ್‌ಪ್ರೆಸ್ ಕಾರ್ಗೋ ಸೇವೆ!

ಕರ್ನಾಟಕ ಅಂಚೆ ಇಲಾಖೆಯು ಭಾರತೀಯ ರೈಲ್ವೆಯ ಸಹಭಾಗಿತ್ವದಲ್ಲಿ ನಿಯಮಿತ ಎಕ್ಸ್‌ಪ್ರೆಸ್ ಕಾರ್ಗೋ ಪಾರ್ಸೆಲ್‌ ಸೇವೆಗಳನ್ನು ನಿರ್ವಹಿಸಲು ಸಿದ್ಧವಾಗಿದೆ. 
ಅಂಚೆ ಇಲಾಖೆ ಕಾರ್ಗೋ ಸೇವೆ
ಅಂಚೆ ಇಲಾಖೆ ಕಾರ್ಗೋ ಸೇವೆ
Updated on

ಬೆಂಗಳೂರು:  ಕರ್ನಾಟಕ ಅಂಚೆ ಇಲಾಖೆಯು ಭಾರತೀಯ ರೈಲ್ವೆಯ ಸಹಭಾಗಿತ್ವದಲ್ಲಿ ನಿಯಮಿತ ಎಕ್ಸ್‌ಪ್ರೆಸ್ ಕಾರ್ಗೋ ಪಾರ್ಸೆಲ್‌ ಸೇವೆಗಳನ್ನು ನಿರ್ವಹಿಸಲು ಸಿದ್ಧವಾಗಿದೆ. 

ಹೌದು.. ಈ ಹಿಂದೆ ರಾಜ್ಯದಿಂದ ಎರಡು ಪ್ರಾಯೋಗಿಕವಾಗಿ ನಡೆದ ಕಾರ್ಗೋ ಸೇವೆಯ ಯಶಸ್ಸಿನ ನಂತರ, ಇದು ಈಗ ಶಾಶ್ವತ ವೈಶಿಷ್ಟ್ಯವನ್ನು ಮಾಡಲು ಅಂಚೆ ಇಲಾಖೆ ಸಿದ್ಧವಾಗಿದ್ದು, ಇದು ಇಲ್ಲಿನ ವ್ಯವಹಾರಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎನ್ನಲಾಗಿದೆ. ಅಂಚೆ ಇಲಾಖೆಗೆ ನಿರ್ದಿಷ್ಟವಾಗಿ ನಿಗದಿಪಡಿಸಿದ ಒಂದು ಬೋಗಿಯಲ್ಲಿ ಮೂರು ಟನ್ ಪಾರ್ಸೆಲ್‌ಗಳನ್ನು ಹೊತ್ತ ಬೆಂಗಳೂರಿನಿಂದ ಗುವಾಹಟಿಗೆ ರೈಲು ಗುರುವಾರ (ಫೆ 16) ಹೊರಡಲಿದೆ. ಇದಕ್ಕೆ ಕೇಂದ್ರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಔಪಚಾರಿಕವಾಗಿ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಪೋಸ್ಟಲ್ ಸರ್ಕಲ್‌ನ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ (ಸಿಪಿಎಂಜಿ) ರಾಜೇಂದ್ರ ಎಸ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಈ ಬಗ್ಗೆ ಮಾಹಿತಿ ನೀಡಿದ್ದು, “ಈ ಎಕ್ಸ್‌ಪ್ರೆಸ್ ಕಾರ್ಗೋ ಪಾರ್ಸೆಲ್ ಸೇವೆಗಾಗಿ ಇಂಡಿಯಾ ಪೋಸ್ಟ್ ರೈಲ್ವೇಯೊಂದಿಗೆ ಪಾಲುದಾರಿಕೆ ಹೊಂದಿದೆ. ತನ್ನ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಇಂಡಿಯಾ ಪೋಸ್ಟ್ ಗ್ರಾಹಕರಿಂದ ವಸ್ತುಗಳನ್ನು ಆರಿಸಿ ಮತ್ತು ಅವುಗಳನ್ನು ಗಮ್ಯಸ್ಥಾನಕ್ಕೆ ತಲುಪಿಸುವ ಮೂಲಕ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುತ್ತದೆ. ಟ್ಯಾಂಪರ್ ಪ್ರೂಫ್ ಕಂಟೈನರ್‌ನಲ್ಲಿ ರೈಲ್ವೇ ಮಧ್ಯದ ಮೈಲಿ ಪ್ರಸರಣವನ್ನು ಒದಗಿಸುತ್ತದೆ. ಗುರುತಿಸಲಾದ ರೈಲ್ವೆ ನಿಲ್ದಾಣಗಳಲ್ಲಿ ಮೀಸಲಾದ ಒಟ್ಟುಗೂಡಿಸುವ ಕೇಂದ್ರಗಳಲ್ಲಿ ಪಾರ್ಸೆಲ್‌ಗಳನ್ನು ನಿರ್ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯ ರೈಲಿನ ಒಂದು ಕೋಚ್ ಅನ್ನು ಈ ವಿಶೇಷ ಸೇವೆಗೆ ಮೀಸಲಿಡಲಾಗುವುದು. ಸಾಮಾನ್ಯ ಸೇವೆಗಿಂತ ಭಿನ್ನವಾಗಿ, ಗರಿಷ್ಠ 35 ಕೆಜಿ ತೂಕದ ಪಾರ್ಸೆಲ್ ಅನ್ನು ಸ್ವೀಕರಿಸಲಾಗುತ್ತದೆ, ಎಕ್ಸ್‌ಪ್ರೆಸ್ ಕಾರ್ಗೋ ಸೇವೆಯು 100 ಕೆಜಿ ವರೆಗಿನ ಪಾರ್ಸೆಲ್‌ಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದ ವ್ಯಾಪಾರಿಗಳು ಮತ್ತು ಕೈಗಾರಿಕೆಗಳು ಅಗಾಧ ಲಾಭವನ್ನು ಪಡೆಯುತ್ತವೆ. ಭವಿಷ್ಯದಲ್ಲಿ ಕರ್ನಾಟಕದ ಹೆಚ್ಚಿನ ನಗರಗಳಿಂದ ಇದನ್ನು ನಿಯಮಿತ ಸೇವೆಯನ್ನಾಗಿ ಮಾಡಲು ನಾವು ಯೋಜಿಸಿದ್ದೇವೆ ಎಂದು ಸಿಪಿಎಂಜಿ ಹೇಳಿದೆ.

ಪಿಕ್ ಅಪ್ ನಿಂದ ಡೆಲಿವರಿ ತನಕ ಎಂಡ್ ಟು ಎಂಡ್ ಟ್ರ್ಯಾಕಿಂಗ್, ಜಗಳ ಮುಕ್ತ ಕ್ಲೈಮ್ ಪ್ರಕ್ರಿಯೆಗಳೊಂದಿಗೆ ಕೈಗೆಟುಕುವ ಪ್ರೀಮಿಯಂನಲ್ಲಿ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಇದರ ವಿಶೇಷ ಲಕ್ಷಣಗಳಾಗಿವೆ ಎಂದು ರಾಜೇಂದ್ರ ಕುಮಾರ್ ಅವರು ಹೇಳಿದ್ದಾರೆ. ರಸ್ತೆ ಸಾರಿಗೆಗೆ ಹೋಲಿಸಿದರೆ ಸ್ಪರ್ಧಾತ್ಮಕ ದರಗಳನ್ನು ರೂಪಿಸಲಾಗುತ್ತಿದೆ. ಕರ್ನಾಟಕ ಪೋಸ್ಟಲ್ ಸರ್ಕಲ್ ಈಗಾಗಲೇ ಎರಡು ಪ್ರೂಫ್ ಆಫ್ ಕಾನ್ಸೆಪ್ಟ್ ಮಾಡಿದ್ದು, ಎರಡಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಸೇವೆಯನ್ನು ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಮತ್ತು ಇನ್ನೊಂದು ಬಾಗಲಕೋಟೆಯಿಂದ ಮುಂಬೈಗೆ ಓಡಿಸಲಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com