ಬೆಂಗಳೂರು: ನಮ್ಮ ಕ್ಲಿನಿಕ್‌ಗಳಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಿಗಿಸುವಂತೆ ವೈದ್ಯರ ಒತ್ತಾಯ

ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭಿಸಲಾದ ನಮ್ಮ  ಕ್ಲಿನಿಕ್‌ಗಳಿಗೆ ಸಂಬಂಧಿಸಿದ ವೈದ್ಯಕೀಯ ಅಧಿಕಾರಿಗಳು ಲಸಿಕೆಗಳು ಸುಲಭವಾಗಿ ಲಭ್ಯವಾಗುವಂತೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಕೋರಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭಿಸಲಾದ ನಮ್ಮ  ಕ್ಲಿನಿಕ್‌ಗಳಿಗೆ ಸಂಬಂಧಿಸಿದ ವೈದ್ಯಕೀಯ ಅಧಿಕಾರಿಗಳು ಲಸಿಕೆಗಳು ಸುಲಭವಾಗಿ ಲಭ್ಯವಾಗುವಂತೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಕೋರಿದ್ದಾರೆ.

ವಿಕ್ಟೋರಿಯಾ ಲೇಔಟ್‌ನ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ. ಶಹಜೈಬ್ ಅಹಮದ್ ಸಾದಿಕ್ ಮಾತನಾಡಿ, ಸದ್ಯ ಕೋಲ್ಡ್ ಸ್ಟೋರೇಜ್ ಸೌಲಭ್ಯವಿಲ್ಲ. ಬೇಡಿಕೆ ಇದ್ದಾಗಲೆಲ್ಲಾ ನಾವು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆಗಳನ್ನು ಸಂಗ್ರಹ ಪೆಟ್ಟಿಗೆಯಲ್ಲಿ ಪಡೆಯಬೇಕಾಗುತ್ತಿದೆ. ವ್ಯಾಕ್ಸಿನೇಷನ್‌ಗಾಗಿ ಕ್ಲಿನಿಕ್‌ಗೆ ರೋಗಿಗಳು ಬಂದಾಗ ಪ್ರಯಾಣಿಸಲು ಕಷ್ಟವಾಗುತ್ತದೆ' ಎಂದರು.

ಇತ್ತೀಚೆಗಷ್ಟೇ ನಮ್ಮ ಕ್ಲಿನಿಕ್‌ಗಳು ತೆರೆದಿರುವುದರಿಂದ ಒಂದೆರಡು ವಾರಗಳ ಕಾಲ ಬೇಡಿಕೆಯನ್ನು ಗಮನಿಸಿ ನಂತರ ನಿರ್ಧರಿಸಲಾಗುವುದು. ಒಂದು ವೇಳೆ ಹಲವು ಅಧಿಕಾರಿಗಳಿಂದ ಬೇಡಿಕೆ ಬಂದರೆ ಅದನ್ನು ಪರಿಗಣಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ ಹೇಳಿದ್ದಾರೆ. 

ಸಾಮಾನ್ಯ ಸಮಾಲೋಚನೆಗಳು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಅನೀಮಿಯಾ ತಪಾಸಣೆಗಳಂತಹ ಮತ್ತು ಇತರೆ ಆರೋಗ್ಯ ಸೌಲಭ್ಯಗಳಿಗಾಗಿ ಮತ್ತು ಅಗತ್ಯವಿದ್ದರೆ ಉತ್ತಮ ಸೌಲಭ್ಯಗಳಿಗೆ ಅವರನ್ನು ಶಿಫಾರಸು ಮಾಡಲು ನಗರದ ಪ್ರತಿ ವಾರ್ಡ್‌ನಲ್ಲಿ ಕ್ಲಿನಿಕ್ ಅನ್ನು ಸ್ಥಾಪಿಸುವ ಉದ್ದೇಶದಿಂದ ಹೊಸದಿಲ್ಲಿಯ ಮೊಹಲ್ಲಾ ಕ್ಲಿನಿಕ್‌ಗಳ ಮಾದರಿಯಲ್ಲಿ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಪಿಎಚ್‌ಸಿಗಳಿಗಿಂತ ಭಿನ್ನವಾಗಿ, ನಮ್ಮ ಕ್ಲಿನಿಕ್‌ಗಳು ಸುಮಾರು 6,000 ಜನರ ಸಣ್ಣ ಜನಸಂಖ್ಯೆಯನ್ನು ಒಳಗೊಂಡಿವೆ.

ವೈದ್ಯಾಧಿಕಾರಿ ಮುಜಸ್ಮಾ ಬಾನು ಮಾತನಾಡಿ, ವೈದ್ಯಕೀಯ ಸಮಾಲೋಚನೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿರುವುದರಿಂದ ಹೆಚ್ಚಿನ ಜನರು ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಜನರು ಸೇವೆಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com