ಬಳ್ಳಾರಿಯಲ್ಲಿ ಹುಚ್ಚು ನಾಯಿ ಕಡಿತದಿಂದ ಮತ್ತೊಂದು ಮಗು ಸಾವು

ಕೌಲ್ ಬಜಾರ್ ಪ್ರದೇಶದ ವಟ್ಟಪ್ಪಗೇರಿಯಲ್ಲಿ ಹುಚ್ಚು ನಾಯಿಯಿಂದ ಕಡಿತಕ್ಕೊಳಗಾಗಿದ್ದ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಳ್ಳಾರಿ: ಕೌಲ್ ಬಜಾರ್ ಪ್ರದೇಶದ ವಟ್ಟಪ್ಪಗೇರಿಯಲ್ಲಿ ಹುಚ್ಚು ನಾಯಿಯಿಂದ ಕಡಿತಕ್ಕೊಳಗಾಗಿದ್ದ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. 

ಫೆಬ್ರವರಿ 6ರ ಮಧ್ಯ ರಾತ್ರಿ ಹುಚ್ಚು ನಾಯಿಯೊಂದು ಸುಮಾರು 21 ಮಂದಿಯನ್ನು ಕಚ್ಚಿ ಗಾಯಗೊಳಿಸಿತ್ತು. ಈ ವೇಳೆ ಮೂರು ವರ್ಷದ ತೊಯ್ಬಾಳ ಮುಖವನ್ನು ನಾಯಿ ಕಚ್ಚಿತ್ತು. ಹೀಗಾಗಿ ಬಾಲಕಿಗೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಆದರೆ ಮಗುವಿನ ಆರೋಗ್ಯ ಸುಧಾರಿಸದ ಕಾರಣ ಮಗುವನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆತರಲಾಗಿತ್ತು. ಅಲ್ಲಿ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಮಗು ಬದುಕುವುದಿಲ್ಲ ಎಂದು ಹೇಳಿದ್ದರಿಂದ ಬಳ್ಳಾರಿಗೆ ವಾಪಸ್ ಕರೆ ತರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com