ಪ್ರಯಾಣಿಕರ ಸೇವೆಗೆ ಸಿದ್ದವಾದ ಕೆಐಎ ಟರ್ಮಿನಲ್ 2: ಜನವರಿ 15ಕ್ಕೆ ಮೊದಲ ವಿಮಾನ ಕಲಬುರಗಿಗೆ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2 ಪ್ರಯಾಣಿಕರ ಸೇವೆಗೆ ಸಿದ್ದವಾಗಿದ್ದು, ಇದರ ಮೊದಲ ವಿಮಾನ ಜನವರಿ 15ಕ್ಕೆ ಕಲಬುರಗಿಗೆ ಹಾರಾಟ ನಡೆಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2 ಪ್ರಯಾಣಿಕರ ಸೇವೆಗೆ ಸಿದ್ದವಾಗಿದ್ದು, ಇದರ ಮೊದಲ ವಿಮಾನ ಜನವರಿ 15ಕ್ಕೆ ಕಲಬುರಗಿಗೆ ಹಾರಾಟ ನಡೆಸಲಿದೆ.

ಸ್ಟಾರ್ ಏರ್ ಟರ್ಮಿನಲ್ 2ನಲ್ಲಿ ಮೊದಲ ವಿಮಾನಯಾನ ಆರಂಭಿಸುತ್ತಿರುವ ಸಂಸ್ಥೆಯಾಗಿದೆ. ವಿಮಾನವು ಬೆಂಗಳೂರಿನಿಂದ ಕಲಬುರಗಿಗೆ ಬೆಳಿಗ್ಗೆ 8.40 ಕ್ಕೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದು, 9.45 ಕ್ಕೆ ವಿಮಾನವು ತನ್ನ ಗಮ್ಯಸ್ಥಾನವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ವಿಮಾನವು ಕಲಬುರಗಿಯಿಂದ ಬೆಳಿಗ್ಗೆ 10.20 ಕ್ಕೆ ಹೊರಟು 11.25 ಕ್ಕೆ ಕೆಂಪೇಗೌಂಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ಕೆಐಎ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ದಿನ ಹುಬ್ಬಳ್ಳಿಗೂ ವಿಮಾನ ಹಾರಾಟ ನಡೆಸಲಿದೆ. ವಿಮಾನವು ಬೆಳಿಗ್ಗೆ 11.55 ಕ್ಕೆ ಹೊರಟು ಮಧ್ಯಾಹ್ನ 12.55 ಕ್ಕೆ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ ರಾತ್ರಿ 7.25ಕ್ಕೆ ಹೊರಟು ರಾತ್ರಿ 8.25ಕ್ಕೆ ಬೆಂಗಳೂರನ್ನು ತಲುಪಲಿದೆ ಎಂದು ತಿಳಿಸಿದೆ.

ಸ್ಟಾರ್ ಏರ್‌ನ ಸಿಇಒ ಸಿಮ್ರಾನ್ ಸಿಂಗ್ ತಿವಾನಾ ಪ್ರತಿಕ್ರಿಯೆ ನೀಡಿ, ಟರ್ಮಿನಲ್ 2ನಲ್ಲಿ ನಮ್ಮ ವಿಮಾನ ಮೊದಲ ಹಾರಾಟ ನಡೆಸುತ್ತಿರುವುದಕ್ಕೆ ಬಹಳ ಉತ್ಸುಕರಾಗಿದ್ದೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com