ಮಂಗಳೂರು: ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 10  ವೈದ್ಯ-ವೈದ್ಯಕೀಯ ವಿದ್ಯಾರ್ಥಿಗಳ ಬಂಧನ

ಮಂಗಳೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿರುವ ಪೊಲೀಸರು ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿದ್ದಾರೆ. 
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)

ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿರುವ ಪೊಲೀಸರು ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿದ್ದಾರೆ. 

ವೈದ್ಯರು ಹಾಗೂ ಪ್ರತಿಷ್ಠಿತ ಖಾಸಗಿ ಕಾಲೇಜುಗಳ ವೈದ್ಯಕೀಯ ವಿದ್ಯಾರ್ಥಿಗಳು ಬಂಧನಕ್ಕೊಳಗಾದವರ ಪೈಕಿ ಇದ್ದು,  ನೀಲ್ ಕಿಶೋರಿಲಾಲ್ ರಾಮ್ ಜೀ ಶಾ (38) ಎನ್ಆರ್ ಐ ಬಿಡಿಎಸ್ ವಿದ್ಯಾರ್ಥಿ, ಡಾ. ಸಮೀರ್ (32), ಡಾ. ಮನಿಮಾರನ್ ಮುತ್ತು (28) , ಡಾ. ನಾದಿಯಾ ಸಿರಾಜ್ (24) ಡಾ. ವರ್ಷಿಣಿ ಪ್ರಾಥಿ (26)  ಡಾ. ರಿಯಾ ಚಡ್ಡಾ (22) ಡಾ ಭಾನು ದಹಿಯಾ (27)  ಡಾ. ಕ್ಷಿತಿಜ್ ಗುಪ್ತ (25)  ಇರಾ ಬಸಿನ್ (23) ಹಾಗೂ ಮುಹಮ್ಮದ್ ರೌಫ್ ಬಂಧಿತ ವ್ಯಕ್ತಿಗಳಾಗಿದ್ದಾರೆ.
 
ಆರೋಪಿಗಳು ನಗರದ ಬಂಟ್ಸ್ ಹೊಟೆಲ್ ಬಳಿ ಇದ್ದ ಫ್ಲಾಟ್ ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಜನರಿಗೆ ಗಾಂಜಾ ಮಾರಾಟ ಮಾಡ್ತುತಿದ್ದರು ಎಂದು ಮಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ಎಂ ಹೇಳಿದ್ದಾರೆ. 
 
ಈ ತಂಡದ ಬಗ್ಗೆ ಮಾಹಿತಿ ಪಡೆದು ಫ್ಲಾಟ್ ಮೇಲೆ ದಾಳಿ ನಡೆಸಲಾಯಿತು, ನೀಲ್ ಕಿಶೋರಿಲಾಲ್ ರಾಮ್ ಜಿ ಷಾ ಎಂಬ ವ್ಯಕ್ತಿಯನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಯಿತು.  
ದಾಳಿ ವೇಳೆ ಪೊಲೀಸರು 2 ಕೆ.ಜಿ (50,000 ರೂಪಾಯಿ ಮೌಲ್ಯದ) ಗಾಂಜಾ, 2 ಮೊಬೈಲ್ ಫೋನ್, 7,000 ಮೌಲ್ಯದ ನಗದು, ಡಿಜಿಟಲ್ ಉಪಕರಣಗಳು, ಟಾಯ್ ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ. 

ಪ್ರಕರಣದಲ್ಲಿನ ಇತರ ಆರೋಪಿಗಳನ್ನು ಬೇರೆ ಬೇರೆ ಹೊಟೆಲ್. ಪಿಜಿಗಳು, ಖಾಸಗಿ ನಿವಾಸಗಳಿಂದ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ, ಮಂಗಳೂರು ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com