ಧಾರವಾಡ: ಸರ್ಕಾರಿ ಆಸ್ಪತ್ರೆ ರೋಗಿಗಳ ಕಂಬಳಿಗಳ ಮೇಲೆ ಹಂದಿ, ನಾಯಿಗಳ ಓಡಾಟ!

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಬಳಸುವ ಕಂಬಿಳ ಅಥವಾ ಹಾಸಿಗೆ ಹೊದಿಕೆಗಳನ್ನು ಹಂದಿ ಮತ್ತು ನಾಯಿಗಳು ತುಳಿದು ಹಾಕಿರುವ ಘಟನೆ ನಡೆದಿದೆ.
ಕಂಬಳಿಗಳನ್ನು ತುಳಿದು ಹಾಕಿದ ಹಂದಿ, ನಾಯಿಗಳು
ಕಂಬಳಿಗಳನ್ನು ತುಳಿದು ಹಾಕಿದ ಹಂದಿ, ನಾಯಿಗಳು

ಧಾರವಾಡ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಬಳಸುವ ಕಂಬಿಳ ಅಥವಾ ಹಾಸಿಗೆ ಹೊದಿಕೆಗಳನ್ನು ಹಂದಿ ಮತ್ತು ನಾಯಿಗಳು ತುಳಿದು ಹಾಕಿರುವ ಘಟನೆ ನಡೆದಿದೆ.

ಹಂದಿಗಳು, ನಾಯಿಗಳು ಹಾಗೂ ಇತರೆ ಬಿಡಾಡಿ ಪ್ರಾಣಿಗಳು ಓಡಾಡುವ ತೆರೆದ ಮೈದಾನದಲ್ಲಿ ರೋಗಿಗಳ ಹಾಸಿಗೆಗೆ ಹಾಕಲಾಗಿದ್ದ ಕಂಬಳಿ, ಏಪ್ರನ್‌ಗಳನ್ನು ಒಗೆದು ಒಣಗಿಸಿ ಹಾಕಲಾಗಿತ್ತು. ಆದರೆ ಈ ಕಂಬಳಿ, ಹೊದಿಕೆಗಳ ಮೇಲೆ ಪ್ರಾಣಿಗಳು ಓಡಾಡಿರುವ ಘಟನೆ ಧಾರವಾಡದಲ್ಲಿ ಜಿಲ್ಲಾ ಆಸ್ಪತ್ರೆಲ್ಲಿ ನಡೆದಿದೆ. ಅದಾಗ್ಯೂ ಅಧಿಕಾರಿಗಳ ನಿರ್ಲಕ್ಷ್ಯ ಅಂತಹ ಸ್ಥಳಗಳಲ್ಲಿ ಒಣಗಿಸಿದ ಬಟ್ಟೆಗಳನ್ನು ಸುಮಾರು 200 ರೋಗಿಗಳಿಗೆ ಧರಿಸಲು ನೀಡಲಾಗುತ್ತಿದೆ. ಇದರಿಂದ ರೋಗಿಗಳು ಯಾವುದೇ ತಪ್ಪಿಲ್ಲದೆ ಸೋಂಕುಗಳಿಗೆ ಒಳಗಾಗುತ್ತಾರೆ. ಆಸ್ಪತ್ರೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಿಬ್ಬಂದಿಯ ಮೇಲಿನ ಹಿಡಿತದ ಕೊರತೆಯನ್ನು ತೋರಿಸುತ್ತದೆ.

ಇಂತಹ ಆಸ್ಪತ್ರೆಗಳಲ್ಲಿ ನೈರ್ಮಲ್ಯ ಎಂಬು ಕನಸಾಗಿದ್ದು, ರಾಜಕೀಯ ಮುಖಂಡರು ಅಥವಾ ಅಧಿಕಾರಿಗಳು ಬಂದಾಗ ಮಾತ್ರ ಸಿಬ್ಬಂದಿ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸುತ್ತಾರೆ ಎಂದು ರೋಗಿಗಳ ಸಂಬಂಧಿಕರೂ ದೂರಿದ್ದಾರೆ.

"ನಾವು ಹಲವಾರು ಬಾರಿ ಹೊಲಸು ಸ್ಥಳಗಳಲ್ಲಿ ಬಟ್ಟೆಗಳನ್ನು ಒಣಗಿಸುವುದನ್ನು ನೋಡಿದ್ದೇವೆ. ಈ ಬಗ್ಗೆ ದೂರು ನೀಡಲು ಹೋದರೆ ಅವರು ನಮ್ಮವರ ಚಿಕಿತ್ಸೆಗೆ ನಿರಾಕರಿಸುತ್ತಾರೆ ಎಂಬ ಭಯದಿಂದಾಗಿ ನಾವು ಸಮ್ಮನಾಗುತ್ತೇವೆ. ಭಯದ ಕಾರಣ ಅಧಿಕಾರಿಗಳಿಗೆ ಈ ಮಾಹಿತಿ ತಿಳಿಯುವುದೇ ಇಲ್ಲ... ಎಂದು ಅಳಲು ತೋಡಿಕೊಂಡಿದ್ದಾರೆ. 

ಆಸ್ಪತ್ರೆಗೆ ಭೇಟಿ ನೀಡುವ ಹೆಚ್ಚಿನ ರೋಗಿಗಳು ಗ್ರಾಮೀಣ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಬರುವ ಬಡ ಆರ್ಥಿಕ ಹಿನ್ನೆಲೆಯಿಂದ ಬಂದವರಾಗಿದ್ದು,. ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಕೆಲ ದಿನಗಳ ಹಿಂದೆ ಈ ಆಸ್ಪತ್ರೆ ಲಂಚ ಹಗರಣದಲ್ಲಿ ಸುದ್ದಿಯಾಗಿತ್ತು. “ಆಸ್ಪತ್ರೆಗೆ ಅಪಾರ ಅನುದಾನ ಬರುತ್ತಿದ್ದು, ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು. 

ಇನ್ನಾದರೂ ಆಸ್ಪತ್ರೆಯೇ ಉತ್ತಮ ಎಂದು ಹೇಳುವ ಚುನಾಯಿತ ಪ್ರತಿನಿಧಿಗಳಿಗೆ ಇಲ್ಲೇ ಚಿಕಿತ್ಸೆ ಸಿಗುವಂತೆ ಮಾಡಬೇಕು. ಅಲ್ಲಿಯವರೆಗೆ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com