ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ: ನಗರದಲ್ಲಿ “ರೋಹಿಣಿ ನಿಲೇಕಣಿ ಸೆಂಟರ್‌ ಫಾರ್‌ ಬ್ರೈನ್‌ ಆಂಡ್‌ ಮೈಂಡ್‌ ರೀಸರ್ಚ್” ಆರಂಭ

ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS) ವತಿಯಿಂದ ನಗರದ ಎನ್‌ಸಿಬಿಎಸ್ ಕ್ಯಾಂಪಸ್‌ನಲ್ಲಿ 'ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್'ನ್ನು ಮಂಗಳವಾರ ಉದ್ಘಾಟಿಸಲಾಯಿತು.
ರೋಹಿಣಿ ನಿಲೇಕಣಿ
ರೋಹಿಣಿ ನಿಲೇಕಣಿ

ಬೆಂಗಳೂರು: ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS) ವತಿಯಿಂದ ನಗರದ ಎನ್‌ಸಿಬಿಎಸ್ ಕ್ಯಾಂಪಸ್‌ನಲ್ಲಿ 'ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್'ನ್ನು ಮಂಗಳವಾರ ಉದ್ಘಾಟಿಸಲಾಯಿತು.

ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್‌ಸಿಬಿಎಸ್‌) ಆವರಣದಲ್ಲಿ ಈ ಕೇಂದ್ರವನ್ನು ‘ರೋಹಿಣಿ ನಿಲೇಕಣಿ ಲೋಕೋಪಕಾರಿ’ ಸಂಸ್ಥೆ ಅಧ್ಯಕ್ಷೆ ರೋಹಿಣಿ ನಿಲೇಕಣಿ ಅವರು ಉದ್ಘಾಟಿಸಿದರು.

ಈ ಕೇಂದ್ರವು ಮನುಷ್ಯನ ನರಗಳ ಬೆಳವಣಿಗೆಯ ಅಸ್ವಸ್ಥತೆ ಮತ್ತು ಮಾನಸಿಕ ಆರೋಗ್ಯಕ್ಕೆ (Mental Health) ಸಂಬಂಧಿಸಿದ ಭಾರತೀಯ ಸಂಶೋಧನೆ ಮತ್ತು ಅಭ್ಯಾಸವನ್ನು ಮುಂದುವರಿಸಲು ಮೀಸಲಾಗಿರುವ ಕೇಂದ್ರವಾಗಿದೆ. ಜೊತೆಗೆ, ಮೆದುಳಿನ ಬೆಳವಣಿಗೆಯ ಕುಂಟಿತದಿಂದ ಉಂಟಾಗುವ ಮಾನಸಿಕ ಕಾಯಿಲೆಗಳು ಹಾಗೂ ಅನುವಂಶಿಕವಾಗಿ ಮೆದುಳಿನ ಮೇಲೆ ಪರಿಣಾಮ ಬೀರುವ ಕಾಯಿಲೆಗಳ ಬಗ್ಗೆಯೂ ಸಂಶೋಧನೆ ನಡೆಸಲಿದೆ.

ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್, ವ್ಯಸನ, ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಮತ್ತು ಬುದ್ಧಿಮಾಂದ್ಯತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಮತ್ತು ಎನ್‌ಸಿಬಿಎಸ್‌ನ ಚಿಕಿತ್ಸಕ ಅಭ್ಯಾಸಗಳ ಸಹಭಾಗಿತ್ವದ ಮೂಲಕ ಕೇಂದ್ರವು ಸಂಶೋಧನೆಯನ್ನು ಬೆಂಬಲಿಸುತ್ತದೆ. ಮೂಲದಲ್ಲಿ ನ್ಯೂರೋ ಡೆವಲಪ್ಮೆಂಟಲ್ ಎಂದು ಪರಿಗಣಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com