ಖಾಸಗಿ ಫೋಟೋಗಳ ಸೋರಿಕೆ ಮಾಡುವುದಾಗಿ ಬಾಯ್ ಫ್ರೆಂಡ್ ಬ್ಲ್ಯಾಕ್ ಮೇಲ್: ಯುವತಿ ಆತ್ಮಹತ್ಯೆ

ಖಾಸಗಿ ಫೋಟೋಗಳ ಸೋರಿಕೆ ಮಾಡುವುದಾಗಿ ಪ್ರಿಯಕರ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಫೋಟೋಗಳ ಸೋರಿಕೆ ಮಾಡುವುದಾಗಿ ಪ್ರಿಯಕರ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ.

ಆಶಾ (21) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನವಳಾಗಿದ್ದು, ಬಾಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ವಾಸವಿದ್ದರು.

ಆಶಾ ಓದು ಮುಗಿಸಿ ಮಂತ್ರಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಐದು ವರ್ಷಗಳಿಂದ ಅವಿನಾಶ್ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಮಂತ್ರಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಆಶಾ, ತನ್ನ ಪ್ರಿಯಕರ ಅವಿನಾಶ್ ಜೊತೆಗೆ ಪಾರ್ಕ್, ಸಿನಿಮಾ ಎಂದು ಸುತ್ತಾಡುತ್ತಿದ್ದಳು ಎನ್ನಲಾಗಿದೆ. ಪ್ರೀತಿಯ ವಿಷಯವನ್ನು ಮನೆಯವರಿಗೂ ತಿಳಿಸಿದ್ದಳು ಎಂದು ತಿಳಿದುಬಂದಿದೆ. ಪ್ರೀತಿ ಎಲ್ಲ ನಮಗೆ ಬೇಡಮ್ಮ ಎಂದು ಪೋಷಕರು ಬುದ್ಧಿ ಮಾತು ಹೇಳಿದ್ದರು.

ಆಶಾ ತನ್ನ ಪ್ರಿಯಕರನಿಗೆ ಮನೆಯವರ ವಿರೋಧದ ವಿಷಯ ತಿಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಅವಿನಾಶ್, ನೀನು ನನಗೆ ಮೋಸ ಮಾಡುತ್ತಿದ್ದೀಯಾ. ಇದೆಲ್ಲ ಪ್ರೀತಿ ಮಾಡೋಕು ಮುಂಚೆನೇ ಯೋಚನೆ ಮಾಡಬೇಕಿತ್ತು. ನೀನು ನನ್ನನ್ನು ಬಿಟ್ಟು ಹೋಗಬೇಡ. ಒಂದು ವೇಳೆ ಬಿಟ್ಟು ಹೋದರೆ, ನಾನು ನಮ್ಮಿಬ್ಬರ ಫೋಟೋ ವೈರಲ್ ಮಾಡುತ್ತೇನೆಂದು ಬೆದರಿಸಿದ್ದ. ಇದರಿಂದ ಬೆಸತ್ತ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com