ಅತ್ಯಾಚಾರ (ಸಂಗ್ರಹ ಚಿತ್ರ)
ರಾಜ್ಯ
ಪ್ರೇಮಿ, ಆತನ ಸ್ನೇಹಿತರಿಂದ ಅತ್ಯಾಚಾರ: ನಗರ ಪೊಲೀಸರಿಗೆ ದೂರು ನೀಡಿದ ಅಸ್ಸಾಂ ಮಹಿಳೆ
ತನ್ನ ಪ್ರೇಮಿಯೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಸ್ಸಾಂ ಮಹಿಳೆ ಅಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ತನ್ನ ಪ್ರೇಮಿಯೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಸ್ಸಾಂ ಮಹಿಳೆ ಅಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನ್ನ ಪ್ರೇಮಿಯ ಚಿತಾವಣೆ ಮೇರೆಗೆ ಆತನ ಇತರ ನಾಲ್ವರು ಸ್ನೇಹಿತರೂ ಸಹ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನ ಪ್ರೇಮಿ ತನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ತಾನು ಬೆಂಗಳೂರಿಗೆ ಬಂದಿದ್ದಾಗಿ ಆಕೆ ಹೇಳಿದ್ದಾಳೆ. ದೊಡ್ಡನಾಗಮಂಗಲದಲ್ಲಿನ ರೂಮ್ ನಲ್ಲಿ ಆರೋಪಿ ಈ ಕೃತ್ಯ ಎಸಗಿರುವುದಾಗಿ ಸಂತ್ರಸ್ತೆ ಹೇಳಿದ್ದು, ತನ್ನ ಮೇಲೆ ಅತ್ಯಾಚಾರವೆಸಗಲು ಇನ್ನೂ ನಾಲ್ವರು ವ್ಯಕ್ತಿಗಳನ್ನು ಕಳಿಸಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ಪ್ರಕರಣದ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ