ಮೋದಿ ಮಣಿಸಲು 'ಮಹಾ' ತಂತ್ರ: ಬೆಂಗಳೂರಿನಲ್ಲಿ ಇಂದಿನಿಂದ 2 ದಿನ ವಿಪಕ್ಷಗಳ ಸಭೆ, ರಣಕಹಳೆಗೆ ವೇದಿಕೆ ಸಜ್ಜು
2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಮಹಾಘಟ್ ಬಂಧನ್ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ಕೇಂದ್ರ ಎನ್ ಡಿಎಗೆ ಸೆಡ್ಡು ಹೊಡೆದು ಅಧಿಕಾರಕ್ಕೆ ಬರಲು ತಂತ್ರ ರೂಪಿಸುತ್ತಿದ್ದು ಅದರ ಭಾಗವಾಗಿ ಇಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸಭೆ ಸೇರುತ್ತಿವೆ.
Published: 17th July 2023 08:53 AM | Last Updated: 17th July 2023 01:57 PM | A+A A-

ಎರಡು ದಿನಗಳ ವಿಪಕ್ಷಗಳ ಸಮಾವೇಶ ಅಂಗವಾಗಿ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಚಿತ್ರಗಳಿರುವ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. 26 ಪಕ್ಷಗಳ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ
ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಮಹಾಘಟ್ ಬಂಧನ್ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ಕೇಂದ್ರ ಎನ್ ಡಿಎಗೆ ಸೆಡ್ಡು ಹೊಡೆದು ಅಧಿಕಾರಕ್ಕೆ ಬರಲು ತಂತ್ರ ರೂಪಿಸುತ್ತಿದ್ದು ಅದರ ಭಾಗವಾಗಿ ಇಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸಭೆ ಸೇರುತ್ತಿವೆ.
ಕಳೆದ ಬಾರಿ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಅದರ ಮುಂದುವರಿದ ಭಾಗ ಎರಡನೇ ಸಭೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಇಂದು ಮತ್ತು ನಾಳೆ(ಜುಲೈ 17-18ರಂದು) ನಡೆಯುತ್ತಿದೆ.
ಕಾಂಗ್ರೆಸ್, ಸ್ಥಳೀಯ ಪಕ್ಷಗಳು ಸೇರಿದಂತೆ ಕನಿಷ್ಠ 25 ವಿಪಕ್ಷಗಳ ನಾಯಕರು ಸಭೆ ಸೇರುತ್ತಿದ್ದಾರೆ. ಸಭೆಯ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ನಾಯಕರಿಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಸಂವಹನ ಘಟಕದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಜಂಟಿಯಾಗಿ ಸಭೆ ನಡೆಸಲಿದ್ದಾರೆ. ಅಪರಾಹ್ನ ಎಲ್ಲಾ ವಿಪಕ್ಷ ನಾಯಕರು ಒಬ್ಬೊಬ್ಬರಾಗಿ ಬಂದು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ ಅನೌಪಚಾರಿಕ ಸಭೆ, ಔತಣಕೂಟ: ಇಂದು ಸಂಜೆ 6 ಗಂಟೆಗೆ ಅನೌಪಚಾರಿಕ ಸಭೆಯೊಂದು ನಡೆಯಲಿದ್ದು ಅದು ಮುಗಿದ ನಂತರ ಎಲ್ಲಾ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ಔತಣಕೂಟ ಏರ್ಪಡಿಸಿದ್ದಾರೆ. ನಾಳೆ ಜುಲೈ 18ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಭೆ ಸಾಯಂಕಾಲ 4 ಗಂಟೆಯವರೆಗೆ ಮುಂದುವರಿಯಲಿದೆ.
ಸಭೆ ಮುಗಿದ ಬಳಿಕ ಪತ್ರಿಕಾ ಗೋಷ್ಠಿ ಏರ್ಪಡಲಿದ್ದು ಅದರಲ್ಲಿ 2024ರ ಚುನಾವಣೆಗೆ ಪ್ರಚಾರ ಕಾರ್ಯತಂತ್ರ ಹೇಗೆ ನಡೆಸಲಾಗುವುದು ಎಂಬ ಬಗ್ಗೆ ಎಲ್ಲಾ ಪಕ್ಷಗಳ ನಾಯಕರು ಒಟ್ಟಾಗಿ ಘೋಷಿಸುವ ಸಾಧ್ಯತೆಯಿದೆ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ವಿರೋಧ ಪಕ್ಷಗಳ ಮೈತ್ರಿಯ ಹೆಸರನ್ನು ಘೋಷಿಸಿ ಮುಂದಿನ ಚುನಾವಣೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ.
#WATCH | The second join opposition meeting to begin in Bengaluru, Karnataka today. Posters of Opposition leaders, including AAP's national convener and Delhi CM Arvind Kejriwal, put up at the venue. pic.twitter.com/Vb0PWiRcCf
— ANI (@ANI) July 17, 2023
ವೇದಿಕೆ ಸಿದ್ಧ: 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೋಲಿಸುವ ಸಾಮಾನ್ಯ ಅಜೆಂಡಾದೊಂದಿಗೆ ಈ ಸಭೆ ನಡೆಯುತ್ತಿದೆ.
#WATCH | Karnataka: Big posters and banners put up on Race Course Road welcoming leaders of various opposition parties for the joint opposition meeting
— ANI (@ANI) July 17, 2023
Meeting to take place today and tomorrow at Taj West End Hotel in Bengaluru pic.twitter.com/TFYXp1LG5C
ಕಳೆದ ಜೂನ್ 23ರಂದು ಪಾಟ್ನಾ ಸಭೆಯಲ್ಲಿ 16 ಪಕ್ಷಗಳ ನಾಯಕರು ಭಾಗವಹಿಸಿದ್ದು ಅದು ಈ ಬಾರಿ 24ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಭಾಗವಹಿಸಲಿರುವುದರಿಂದ ಸಭೆ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ (ಬಿಹಾರ), ಎಂಕೆ ಸ್ಟಾಲಿನ್ (ತಮಿಳುನಾಡು), ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಅರವಿಂದ್ ಕೇಜ್ರಿವಾಲ್ (ದೆಹಲಿ) ಮತ್ತು ಇತರ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಿದ್ದು ಸಭೆಗೆ ಬಹಳ ಮಹತ್ವ ಸಿಕ್ಕಿದೆ.
ಇದನ್ನೂ ಓದಿ: ಇಂದಿನಿಂದ ಎರಡು ದಿನ ವಿರೋಧ ಪಕ್ಷಗಳ ಸಭೆ: ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆ, ಪಾರ್ಕಿಂಗ್ ಕೂಡ ನಿಷೇಧ
ವಿರೋಧ ಪಕ್ಷಗಳ ನಾಯಕನ ಆಯ್ಕೆ?: ರಾಷ್ಟ್ರಮಟ್ಟದ ನಾಯಕರ ಉಪಸ್ಥಿತಿಯು ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿಗೆ ಹೆಚ್ಚಿನ ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ವಿರೋಧ ಪಕ್ಷದ ನಾಯಕನನ್ನು ಇಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಒಬ್ಬರ ಮೇಲೆ ಒಬ್ಬರು ಸೀಟು ಹಂಚಿಕೆ ಮಾತುಕತೆಗಳನ್ನು ನಡೆಸುವುದು ಮತ್ತು ವಿರೋಧಿ ವಿಭಜನೆಯನ್ನು ತಪ್ಪಿಸಲು ತಂತ್ರಗಳನ್ನು ಹೆಣೆಯುವುದು ಮಹತ್ವದ್ದಾಗಿದೆ.
2024ರ ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷಕ್ಕಿಂತ ಕಡಿಮೆ ಸಮಯವಿದೆ. ಚುನಾವಣೆಯಲ್ಲಿ ರಣತಂತ್ರ ಹೆಣೆಯಲು ಕೇಂದ್ರದಲ್ಲಿ ಆಡಳಿತ ಪಕ್ಷಗಳಿಗೆ ಮತ್ತು ಪ್ರತಿಪಕ್ಷಗಳಿಗೆ ಹೆಚ್ಚಿನ ಸಮಯ ಉಳಿದಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಹೇಗೆ ಆಡಳಿತದಲ್ಲಿ ವಿಫಲವಾಗಿದೆ, ಕಳೆದ 10 ವರ್ಷಗಳಲ್ಲಿ ಯಾವುದರಲ್ಲಿ ವಿಫಲವಾಗಿದೆ ಎಂದು ತೋರಿಸುವುದು ಇಂದು ಮತ್ತು ನಾಳಿನ ಸಭೆಯಲ್ಲಿ ವಿಪಕ್ಷ ನಾಯಕರ ಪ್ರಮುಖ ಚರ್ಚಾ ವಿಷಯವಾಗಿರಬಹುದು.
ಕರ್ನಾಟಕ ರಾಜಧಾನಿ ಬೆಂಗಳೂರು ವಿರೋಧ ಪಕ್ಷಗಳಿಗೆ ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಲು ಅನುಕೂಲ ಮಾಡಿಕೊಡುತ್ತಿರುವುದು ಇದೇ ಮೊದಲಲ್ಲ. ಹಿಂದೆ, ಎನ್‌ಟಿ ರಾಮರಾವ್‌ರಂತಹ ನಾಯಕರನ್ನು ಕರೆತಂದು ರಾಷ್ಟ್ರೀಯ ಐಕ್ಯರಂಗಗಳನ್ನು ರಚಿಸಲು ಬೆಂಬಲ ನೀಡಲು ಸಮಾವೇಶಗಳನ್ನು ನಡೆಸಲಾಯಿತು.
ಎಂಜಿ ರಾಮಚಂದ್ರನ್, ರಾಮಕೃಷ್ಣ ಹೆಗಡೆ, ಲಾಲು ಪ್ರಸಾದ್ ಯಾದವ್ ಮತ್ತು ಇತರ ಪ್ರಮುಖ ನಾಯಕರು ಆಗಿನ ಪ್ರಬಲ ಕಾಂಗ್ರೆಸ್ ನ್ನು ಸೋಲಿಸಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರಿಂದ ವಿಭಜನೆಗೊಂಡಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿನ ಹಿನ್ನಡೆಯನ್ನು ಈ ಸಮಾವೇಶದಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ, ಆ ಬಗ್ಗೆ ತಲೆ ಕೆಡಿಸಿಕೊಳ್ಳೋದು ಇಲ್ಲ, ನೋಡೋಣ ಮುಂದೇನಾಗುತ್ತದೆ: ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ ಈಗಾಗಲೇ ಶಿವಸೇನೆಯಲ್ಲಿ ವಿಭಜನೆಯನ್ನು ಮಾಡಿಸಿರುವುದರಿಂದ ಇಂತಹ ಅನಾಹುತಗಳನ್ನು ತಪ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ಕೇಂದ್ರೀಕರಿಸಬಹುದು. ಬಿಹಾರದಲ್ಲಿಯೂ ಸಹ, ಜೆಡಿಯು-ಆರ್‌ಜೆಡಿ ಸಮ್ಮಿಶ್ರ ಸರ್ಕಾರದ ನೇತೃತ್ವದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಂದೂಸ್ತಾನಿ ಅವಾಮ್ ಮೋರ್ಚಾದ ಜಿತನ್ ರಾಮ್ ಮಾಂಝಿ ಈಗಾಗಲೇ ಎನ್‌ಡಿಎ ಪಾಳೆಯಕ್ಕೆ ಸೇರ್ಪಡೆಗೊಂಡಿರುವಂತೆಯೇ ಇದೇ ರೀತಿಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಲೋಕ ಜನಶಕ್ತಿ ನಾಯಕ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಕೂಡ ಎನ್ ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
2014ರಿಂದ ಸತತ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್ ಡಿಎ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲು ಕಸರತ್ತು ನಡೆಸುತ್ತಿದ್ದರೆ, ವಿಪಕ್ಷಗಳು ಹ್ಯಾಟ್ರಿಕ್ ಗೆಲುವನ್ನು ಸೋಲಿಸುವ ಯೋಜನೆ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಬೆಂಗಳೂರಿನ ಸಭೆ ಬಹಳ ಮಹತ್ವ ಪಡೆದಿದೆ.