ವಿಶ್ವ ಪರಿಸರ ದಿನ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಶೇ.100 ಎಲ್ಇಡಿ ಲೈಟ್ ವ್ಯವಸ್ಥೆ

ಮಂಗಳೂರಿನಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ 100ರಷ್ಟು ಎಲ್‌ಇಡಿ ಬಲ್ಬ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶೇ.100 ಎಲ್ಇಡಿ ಲೈಟ್ ವ್ಯವಸ್ಥೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶೇ.100 ಎಲ್ಇಡಿ ಲೈಟ್ ವ್ಯವಸ್ಥೆ

ಮಂಗಳೂರು: ಮಂಗಳೂರಿನಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ 100ರಷ್ಟು ಎಲ್‌ಇಡಿ ಬಲ್ಬ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 

ಹೌದು.. ವಿಶ್ವ ಪರಿಸರ ದಿನದ ಮುನ್ನಾದಿನದಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ಶೂನ್ಯ ಶಾಖ ಗುರಿಯನ್ನು ಸಾಧಿಸುವ ಸಂಕಲ್ಪದಲ್ಲಿ ಮತ್ತೊಂದು ನಿರ್ಣಾಯಕ ಮೈಲಿಗಲ್ಲನ್ನು ತಲುಪಿದೆ. ವಿಮಾನ ನಿಲ್ದಾಣವು ತನ್ನ ಎಲ್ಲಾ ಸಾಂಪ್ರದಾಯಿಕ ದೀಪಗಳನ್ನು ಹಂತ ಹಂತವಾಗಿ ಶಕ್ತಿ-ಸಮರ್ಥ ಎಲ್ ಇಡಿ ಬೆಳಕಿನ ವ್ಯವಸ್ಥೆಗೆ ಬದಲಾಯಿಸುವ ಮೂಲಕ ಇದನ್ನು ಮಾಡಿದೆ.

ಒಟ್ಟಾರೆಯಾಗಿ 1,111 ಸಾಂಪ್ರದಾಯಿಕ ಬಲ್ಬ್‌ಗಳನ್ನು ಎಲ್‌ಇಡಿಗೆ ಬದಲಾಯಿಸಲಾಗಿದ್ದು, ಇದರಿಂದ ವರ್ಷಕ್ಕೆ 1.88 ಲಕ್ಷ ಕಿಲೋವ್ಯಾಟ್ ವಿದ್ಯುತ್ ಉಳಿಕೆಯಾಗುತ್ತದೆ. ಈ ಕ್ರಮವು ವರ್ಷಕ್ಕೆ 148.9 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ವಾಯು ಸಂಚಾರ ಸೇವೆಗಳ (ಎನ್ಎಟಿಎಸ್) ಕಟ್ಟಡ ಪ್ರದೇಶದಲ್ಲಿ ಅತಿ ಹೆಚ್ಚು ವಿದ್ಯುತ್‌ ಉಳಿತಾಯವಾಗುತ್ತದೆ.  ಈ ಪ್ರದೇಶದಲ್ಲಿ 752 ಎಲ್ಇಡಿ ದೀಪಗಳ ಬಳಕೆಯಿಂದ ವರ್ಷಕ್ಕೆ 1.17 ಲಕ್ಷ ಕಿಲೋವ್ಯಾಟ್ ವಿದ್ಯುತ್ ಉಳಿತಾಯ ಆಗಬಹುದೆಂದು ಅಂದಾಜಿಸಲಾಗಿದೆ. ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದಲ್ಲಿ, ಏರ್ ಸೈಡ್, ಹಳೆಯ ಟರ್ಮಿನಲ್ ಕಟ್ಟಡ ಮತ್ತು ನ್ಯಾಟ್ಸ್ ಪ್ರದೇಶದಲ್ಲಿ 98 ಸಾಂಪ್ರದಾಯಿಕ ದೀಪಗಳನ್ನು ಎಲ್ಇಡಿ ದೀಪಗಳಾಗಿ ಬದಲಾಯಿಸಲಾಗಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಟಣೆ
‘ವಿಮಾನ ನಿಲ್ದಾಣವು ನಿಯಂತ್ರಿತ ಬೆಳಕಿನ ವ್ಯವಸ್ಥೆಗೆ ಒಳಪಟ್ಟಿದೆ. ಟೈಮರ್ ಬಳಕೆ ಮಾಡುವುದರಿಂದ ಅಗತ್ಯ ಇಲ್ಲದ ಕಡೆಗಳಲ್ಲಿ ದೀಪಗಳು ಆಫ್‌ ಆಗುತ್ತವೆ. ಟೈಮರ್‌ಗಳ ಬಳಕೆಯು ನಿರ್ದಿಷ್ಟ ಸಮಯಗಳಲ್ಲಿ ಬೀದಿ ದೀಪಗಳನ್ನು ಆನ್ ಮತ್ತು ಆಫ್‌ ಮಾಡುವ ವ್ಯವಸ್ಥೆಯನ್ನು ಹೊಂದಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

752 ಎಲ್ಇಡಿ ದೀಪಗಳ ಬಳಕೆಯೊಂದಿಗೆ ವಿಮಾನ ನಿಲ್ದಾಣವು ವಾರ್ಷಿಕ 1.17-ಲಕ್ಷ kWH ಅನ್ನು ಉಳಿಸುವ ರಾಷ್ಟ್ರೀಯ ವಾಯು ಸಂಚಾರ ಸೇವೆಗಳ ಕಟ್ಟಡದ ಪ್ರದೇಶದಲ್ಲಿ ದೊಡ್ಡ ಉಳಿತಾಯವನ್ನು ಕಾಣಬಹುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com