ದಕ್ಷಿಣ ಕನ್ನಡ: ಗೃಹಪ್ರವೇಶ ಮಾಡಿ 5 ದಿನಕ್ಕೆ ಹೊಸ ಮನೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!
ಹೊಸದಾಗಿ ಮನೆಯೊಂದನ್ನು ಖರೀದಿಸಿ ಐದು ದಿನಗಳ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಮಂಗಳವಾರ ನಡೆದಿದೆ.
Published: 08th June 2023 05:05 PM | Last Updated: 08th June 2023 05:05 PM | A+A A-

ಅಶ್ವಿನಿ ಬಂಗೇರ
ಉಳ್ಳಾಲ(ದಕ್ಷಿಣ ಕನ್ನಡ): ಹೊಸದಾಗಿ ಮನೆಯೊಂದನ್ನು ಖರೀದಿಸಿ ಐದು ದಿನಗಳ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಮಂಗಳವಾರ ನಡೆದಿದೆ.
25 ವರ್ಷದ ಅಶ್ವಿನಿ ಬಂಗೇರ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ ಒಂದೂವರೆ ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದರು. ಇನ್ನು ಮಂಗಳೂರು ಹೊರವಲಯದ ಕುಂಪಲದಲ್ಲಿ ಮನೆಯೊಂದನ್ನು ಖರೀದಿಸಿದ್ದರು.
ಇದನ್ನೂ ಓದಿ: ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆ: ವಾಂತಿ ಭೇದಿಯಿಂದ 10 ವರ್ಷದ ಬಾಲಕಿ ಸಾವು
ಜೂನ್ 3 ರಂದು ಖುಷಿ ಖುಷಿಯಾಗಿ ಗೃಹ ಪ್ರವೇಶ ಮಾಡಿದ್ದ ಅಶ್ವಿನಿ ತಾಯಿ ಮತ್ತು ಸಂಬಂಧಿಕರ ಜೊತೆ ಅದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಗೃಹ ಪ್ರವೇಶ ಮಾಡಿದ ಐದು ದಿನದಲ್ಲೇ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಶ್ವಿನಿ ಬರೆದಿರುವ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು ಡೆತ್ ನೋಟ್ ನಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿರುವುದಾಗಿ ಬರೆದಿದ್ದಾಳೆ. ಇದೇ ವೇಳೆ ತನಗೆ ಬ್ಯಾಂಕ್ ಅಧಿಕಾರಿಗಳು ಪೀಡಿಸುತ್ತಿರುವ ಬಗ್ಗೆ ತಿಳಿಸಿದ್ದಾಳೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.