ಪಿಎಸ್‌ಐ ನೇಮಕಾತಿ ಹಗರಣ ಕುರಿತು ಮತ್ತಷ್ಟು ತನಿಖೆ: ಗೃಹ ಸಚಿವ ಡಾ ಜಿ ಪರಮೇಶ್ವರ
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಕುರಿತು ಸರ್ಕಾರ ಮತ್ತಷ್ಟು ತನಿಖೆ ನಡೆಸಲಿದೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಭಾನುವಾರ ಹೇಳಿದರು.
Published: 19th June 2023 08:44 AM | Last Updated: 19th June 2023 07:37 PM | A+A A-

ಗೃಹ ಸಚಿವ ಡಾ ಜಿ ಪರಮೇಶ್ವರ
ಬೆಂಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಕುರಿತು ಸರ್ಕಾರ ಮತ್ತಷ್ಟು ತನಿಖೆ ನಡೆಸಲಿದೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಭಾನುವಾರ ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಅವರು, ಹಗರಣ ಕುರಿತು ಮತ್ತೆ ತನಿಖೆ ಕೈಗೆತ್ತಿಕೊಳ್ಳುತ್ತೇವೆ. ಈ ಕುರಿತು ಆಳವಾದ ತನಿಖೆ ನಡೆಸಲಿದೆ. ತಪ್ಪಿಸ್ಥರ ವಿರುದ್ಧ ಕ್ರಮವಾಗಲಿದೆ. ಪರೀಕ್ಷೆಯ ಭಾಗವನ್ನು ಕೂಡ ವಿಚಾರಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಸುಮಾರು 1,000 ಸಬ್‌ಇನ್ಸ್‌ಪೆಕ್ಟರ್‌ಗಳ ಹುದ್ದೆಗಳು ಖಾಲಿ ಇರುವುದರಿಂದ ಪೊಲೀಸ್ ಇಲಾಖೆ ಸಂಕಷ್ಟದಲ್ಲಿದೆ. ಈ ನಡುವಲ್ಲೇ 545 ಸಬ್‌ಇನ್‌ಸ್ಪೆಕ್ಟರ್‌ಗಳ ಬ್ಯಾಚ್‌ನ ನೇಮಕಾತಿ ಹಗರಣದ ಕೇಳಿ ಬಂದಿದ್ದು, ತನಿಖೆ ನೇಮಕಾತಿ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
545 ಸಬ್‌ಇನ್‌ಸ್ಪೆಕ್ಟರ್‌ಗಳು ಅವರ ಹಿರಿಯರೇ ಆಗಿರುವುದರಿಂದ 400 ಎಸ್‌ಐಗಳ ನೇಮಕಾತಿಗೆ ಮುಂದಾಗಲು ಸಾಧ್ಯವಿಲ್ಲ. ಹಗರಣ-ಬಾಧಿತ ನೇಮಕಾತಿ ಪ್ರಕ್ರಿಯೆಯಲ್ಲಿ, ಆಯ್ಕೆಯಾದ ಸಬ್-ಇನ್‌ಸ್ಪೆಕ್ಟರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ, ಹಗರಣದಲ್ಲಿ ಭಾಗಿಯಾಗಿರುವವರು ಕೇವಲ 40 ಅಭ್ಯರ್ಥಿಗಳು ಮತ್ತು ಇತರರೇಕೆ ಸಂಕಷ್ಟ ಅನುಭವಿಸಬೇಕೆಂದು ವಾದಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ತಪ್ಪು ಮಾಡಿದ್ದರೆ ಹಿಡಿದು ಜೈಲಿಗೆ ಹಾಕಿ; ನಮ್ಮ ಪಕ್ಷ ಸ್ವಚ್ಛವಾಗಲು ಅನುವು ಮಾಡಿಕೊಡಿ: ಪ್ರತಾಪ್ ಸಿಂಹ
ಈ ನಡುವೆ ಮರುಪರೀಕ್ಷೆ ನಡೆಸಲು ಅನುಮತಿ ಕೋರಿ ರಾಜ್ಯ ಸರಕಾರ ನ್ಯಾಯಾಲಯದ ಮೊರೆ ಹೋಗಿದ್ದು, ಉತ್ತೀರ್ಣರಾದವರು ಇದನ್ನು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿದ್ದೇ ಆದರೆ, ಮತ್ತೊಮ್ಮೆ ಎದುರಿಸುವ ವಿಶ್ವಾಸ ಹೊಂದಿರಬೇಕೆಂದು ನಾವು ಹೇಳುತ್ತಿದ್ದೇವೆ. ಈ ಅಭ್ಯರ್ಥಿಗಳ ಕುರಿತು ಏನು ಮಾಡಬೇಕೆಂಬುದನ್ನು ಚರ್ಚಿಸಲು ಸಭೆಗಳನ್ನು ನಡೆಸಿದ್ದೇವೆ. ಮರು ಪರೀಕ್ಷೆ ನಡೆಸಬೇಕು ಎಂದು ಕೆಲವು ಅಧಿಕಾರಿಗಳು ಸೂಚಿಸಿದ್ದರೂ, ಇಡೀ ಸಮಸ್ಯೆ ನ್ಯಾಯಾಲಯದ ಅಂಗಳದಲ್ಲಿದೆ ಎಂದರು.
ಬಿಟ್‌ಕಾಯಿನ್ ಹಗರಣದ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ತನಿಖೆಯನ್ನು ಮುಕ್ತಾಯಗೊಳಿಸಿದ್ದರೂ, ರಾಜ್ಯ ಸರ್ಕಾರವು ಹೊಸದಾಗಿ ತನಿಖೆ ನಡೆಸಲಿದೆ. ಪ್ರಮುಖ ಆರೋಪಿ ಶ್ರೀಕಿ ಜಾಮೀನಿನ ಮೇಲೆ ಹೊರಗಿದ್ದಾನೆ. ಪ್ರಕಱಣದಲ್ಲಿ ಹಣ ಕೆಲವು ಪ್ರಬಲ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಿದರು.