H3N2 ಆತಂಕಕಾರಿಯಲ್ಲ, ಮುನ್ನೆಚ್ಚರಿಕೆ ಅತ್ಯಗತ್ಯ; ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ: ಸಚಿವ ಡಾ. ಕೆ.ಸುಧಾಕರ್
ರಾಜ್ಯದಲ್ಲಿ 26 ಹೆಚ್ 3ಎನ್ 2 ಸೋಂಕು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರೊಂದಿಗೆ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ 3ಎನ್ 2 ವೈರಸ್ ಆತಂಕಕಾರಿಯಲ್ಲ, ಕರ್ತವ್ಯ ಸಮಯದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದರು.
Published: 06th March 2023 01:27 PM | Last Updated: 06th March 2023 07:47 PM | A+A A-

ಡಾ.ಕೆ. ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ 26 ಹೆಚ್ 3ಎನ್ 2 ಸೋಂಕು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರೊಂದಿಗೆ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ 3ಎನ್ 2 ವೈರಸ್ ಆತಂಕಕಾರಿಯಲ್ಲ, ಕರ್ತವ್ಯ ಸಮಯದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟವರು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಅನವಶ್ಯಕವಾಗಿ ಗುಂಪು ಸೇರದಂತೆ ಮತ್ತು ಶುಚಿತ್ವದ ಕಡೆ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ದೇಶದಲ್ಲಿ ಕೆಮ್ಮು, ಜ್ವರ ಹೆಚ್ಚಳಕ್ಕೆ H3N2 ಕಾರಣ; ಆ್ಯಂಟಿ ಬಯಾಟಿಕ್ ಗಳ ಅವೈಜ್ಞಾನಿಕ ಬಳಕೆ ಬೇಡ: ICMR
ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿ ದಿನ 2ರಿಂದ 3 ಲೀಟರ್ ಸೇವಿಸುವ ಮೂಲಕ ದೇಹದಲ್ಲಿ ನೀರಿನ ಕೊರತೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಬಿರು ಬೇಸಿಗೆ ಸಂದರ್ಭದಲ್ಲಿ ಮಜ್ಜಿಗೆ, ಎಳನೀರು, ನಿಂಬೆ ಹಣ್ಣಿನ ರಸ ಸೇವಿಸುವಂತೆಯೂ ಜನರಿಗೆ ಸಲಹೆ ನೀಡಲಾಗಿದೆ ಎಂದರು.
We've also advised children, people above 65 years of age who have comorbidities & pregnant women to take preventive measures and avoid the unnecessary crowd and undertake hygiene protocols: Karnataka Health Minister Dr K Sudhakar pic.twitter.com/qYKVFhuQLX
— ANI (@ANI) March 6, 2023
ಇದೇ ವೇಳೆ ಕೋವಿಡ್ ಲಸಿಕೆ ಕುರಿತಂತೆ ರಾಹುಲ್ ಗಾಂಧಿ ಅವರ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ, ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಈ ಹೇಳಿಕೆಯಿಂದ ಅಂತರ ಕಾಪಾಡಿಕೊಳ್ಳುವುದಾಗಿ ಸುಧಾಕರ್ ತಿಳಿಸಿದರು.