ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಇದೇ 11 ರಿಂದ ಎರಡು ದಿನ ಮಹಿಳಾ ಕ್ರೀಡಾಹಬ್ಬ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 11 ಮತ್ತು 12 ಮಹಿಳಾ ಕ್ರೀಡಾ ಹಬ್ಬ ಆಯೋಜಿಸುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ  ತಿಳಿಸಿದ್ದಾರೆ‌. 
ಕ್ರೀಡಾ ಸಚಿವ ಡಾ.ಕೆ. ಸಿ. ನಾರಾಯಣಗೌಡ
ಕ್ರೀಡಾ ಸಚಿವ ಡಾ.ಕೆ. ಸಿ. ನಾರಾಯಣಗೌಡ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 11 ಮತ್ತು 12 ಮಹಿಳಾ ಕ್ರೀಡಾ ಹಬ್ಬ ಆಯೋಜಿಸುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ  ತಿಳಿಸಿದ್ದಾರೆ‌. 

ಮಹಿಳೆಯರಲ್ಲಿ ಕ್ರೀಡಾ ಉತ್ಸಾಹ  ಹುರಿದುಂಬಿಸಲು ಹಾಗೂ ಕ್ರೀಡಾ ಮನೊಭಾವನೆ  ಮೂಡಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ “ಮಹಿಳಾ ಕ್ರೀಡಾ ಹಬ್ಬ” ವನ್ನು ಆಯೋಜಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಕ್ರೀಡೆಗಳು, ಸಾಹಸ ಕ್ರೀಡೆಗಳು, ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ ಮತ್ತು ಕರಕುಶಲಗಳು, ಮನರಂಜನೆ ಮತ್ತು ಮೋಜಿನ ಆಟಗಳು ನಡೆಯಲಿದ್ದು, ಕಾರ್ನಿವಲ್‌ ಮಳಿಗೆಗಳು ಮತ್ತು ಆಹಾರದ ಮಳಿಗೆಗಳು ಕೂಡ ಇರಲಿವೆ.

ಹಾಕಿ, ಕಬ್ಬಡಿ, ಆರ್ಚರಿ ಮತ್ತು ಸ್ಕೇಟಿಂಗ್, ಕಯಾಕಿಂಗ್ ಮತ್ತು ರಾಫ್ಟಿಂಗ್, ಕುಂಟೆ ಬಿಲ್ಲೆ, ಅಳಿಗುಳಿಮನೆ ಆಟ, ಲಗೋರಿ, ಹಗ್ಗ ಜಗ್ಗಾಟ, ರಂಗೋಲಿ, ಮುಖ ಚಿತ್ರೀಕರಣ, ಕ್ಯಾಲಿಗ್ರಫಿ, ಮೆಹಂದಿ ಮತ್ತು ಮಡಿಕೆ ತಯಾರಿಕೆ, ಮ್ಯೂಸಿಕಲ್ ಚೇರ್, ಕೆರೆ ದಡ, ಬಕೆಟ್ ಬಾಲ್ ಮತ್ತಿತರ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಚಿವ ಡಾ.ನಾರಾಯಣಗೌಡ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com