ದುಬಾರಿ ದಂಡ ಪಾವತಿ: ತನ್ನ ಚಾಲಕರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ತರಬೇತಿ ನೀಡಲು ಬಿಎಂಟಿಸಿ ಮುಂದು

ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಶೇ 50 ರಷ್ಟು ರಿಯಾಯಿತಿ ಪಡೆದ ನಂತರ ಸಂಚಾರ ನಿಯಮ ಉಲ್ಲಂಘನೆಗಾಗಿ 33 ಲಕ್ಷ ರೂ.ಗಳ ಭಾರಿ ದಂಡ ಪಾವತಿಸಿದ ನಂತರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಚಾಲಕರಿಗೆ ತರಬೇತಿ ನೀಡಲು ಮತ್ತು ನಿಯಮಗಳಿಗೆ ಬದ್ಧವಾಗಿರುವಂತೆ ಜಾಗೃತಿ ಮೂಡಿಸಲು ಮುಂದಾಗುತ್ತಿದೆ.
ಬಿಎಂಟಿಸಿ ಬಸ್
ಬಿಎಂಟಿಸಿ ಬಸ್

ಬೆಂಗಳೂರು: ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಶೇ 50 ರಷ್ಟು ರಿಯಾಯಿತಿ ಪಡೆದ ನಂತರ ಸಂಚಾರ ನಿಯಮ ಉಲ್ಲಂಘನೆಗಾಗಿ 33 ಲಕ್ಷ ರೂ.ಗಳ ಭಾರಿ ದಂಡ ಪಾವತಿಸಿದ ನಂತರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಚಾಲಕರಿಗೆ ತರಬೇತಿ ನೀಡಲು ಮತ್ತು ನಿಯಮಗಳಿಗೆ ಬದ್ಧವಾಗಿರುವಂತೆ ಜಾಗೃತಿ ಮೂಡಿಸಲು ಮುಂದಾಗುತ್ತಿದೆ.

ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ದಂಡದ ಪ್ರಮುಖ ಭಾಗವು ಸಿಗ್ನಲ್‌ ಜಂಪಿಂಗ್ ಮತ್ತು ನಂತರ ತಪ್ಪು ಪಾರ್ಕಿಂಗ್‌ಗೆ ಸಂಬಂಧಿಸಿದೆ. ರಸ್ತೆ ಅಪಘಾತಗಳಲ್ಲಿ ಭಾಗಿಯಾದ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತು ತರಬೇತಿ ಸೆಷನ್ಸ್‌ಗಳನ್ನು ಸಹ ನೀಡಲಾಗುತ್ತಿದೆ.

ಹೆಚ್ಚು ಸಮಯ ರಸ್ತೆಗಿಳಿಯುವ ಚಾಲಕರಿಗೆ ನಿಯಮಿತವಾಗಿ ಕೆಲವು ತರಬೇತಿ ನೀಡುವ ಅಗತ್ಯವಿದೆ ಎಂದು ಬಿಎಂಟಿಸಿ ಮೂಲಗಳು ಒಪ್ಪಿಕೊಂಡಿವೆ. 

ಬಿಎಂಟಿಸಿ ಬಸ್ ಚಾಲಕರೊಬ್ಬರು ಮಾತನಾಡಿ, 'ಬೆಂಗಳೂರಿನಲ್ಲಿ ಟ್ರಾಫಿಕ್ ಪರಿಸ್ಥಿತಿಗಳು ವರ್ಷಗಳಿಂದ ಹದಗೆಟ್ಟಿರುವುದರಿಂದ, ನಾವು ವೇಳಾಪಟ್ಟಿಯ ಪ್ರಕಾರ ಸಂಚರಿಸಲು ಹೆಣಗಾಡುತ್ತಿದ್ದೇವೆ. ನಮ್ಮ ಟ್ರಿಪ್‌ಗಳನ್ನು ಮುಗಿಸಲು ನಮಗೆ ನಿರ್ದಿಷ್ಟ ಸಮಯವನ್ನು ನೀಡಲಾಗಿದೆ. ಆದ್ದರಿಂದ ಅವಸರದಲ್ಲಿ, ಚಾಲಕರು ಸಿಗ್ನಲ್‌ಗಳನ್ನು ಜಂಪ್ ಮಾಡುತ್ತಿದ್ದಾರೆ' ಎಂದರು.

'ಪ್ರತಿಯೊಬ್ಬ ಬಿಎಂಟಿಸಿ ಬಸ್ ಚಾಲಕರು ಉದ್ದೇಶಪೂರ್ವಕವಾಗಿ ಸಿಗ್ನಲ್‌ಗಳನ್ನು ಜಂಪ್ ಮಾಡುವುದಿಲ್ಲ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಆದರೆ, ನಿಯಮ ಉಲ್ಲಂಘನೆಯ ಸಮಯದಲ್ಲಿ ರಸ್ತೆಯಲ್ಲಿ ಇತರರ ಜೀವಕ್ಕೆ ಪ್ರಮಾದ ಉಂಟುಮಾಡುವ ಸಾಧ್ಯತೆಗಳಿರುವುದರಿಂದ ಸಂಚಾರ ನಿಯಮಗಳ ಬಗ್ಗೆ ಅವರು ಜಾಗೃತರಾಗಬೇಕು' ಎಂದು ಅವರು ಹೇಳಿದರು.

ಬಿಎಂಟಿಸಿ ಎಂಡಿ ಸತ್ಯವತಿ ಮಾತನಾಡಿ, ಬಸ್ ಚಾಲಕರಿಗೆ ತರಬೇತಿ ನೀಡುವುದು ನಿರಂತರ ಪ್ರಕ್ರಿಯೆಯಾಗಿದ್ದು, ಇದನ್ನು ವರ್ಷವಿಡೀ ತೆಗೆದುಕೊಳ್ಳಲಾಗುತ್ತದೆ. ನಾವು ನಮ್ಮ ಚಾಲಕರಿಗೆ ಬ್ಯಾಚ್‌ಗಳಲ್ಲಿ ತರಬೇತಿ ನೀಡುತ್ತಿದ್ದೇವೆ. ಸುರಕ್ಷಿತ ಚಾಲನೆ ಕುರಿತು ಅವರಿಗೆ ತರಬೇತಿ ನೀಡುತ್ತೇವೆ. ಇತ್ತೀಚೆಗೆ ಅಪಘಾತಕ್ಕೀಡಾದ 182 ಚಾಲಕರಿಗೆ ತರಬೇತಿ ನೀಡಲಾಗಿದೆ' ಎಂದು ಹೇಳಿದರು. 

ಸಿಗ್ನಲ್‌ಗಳನ್ನು ಜಂಪ್ ಮಾಡಿದ ಚಾಲಕರಿಂದ ಬಸ್ ನಿಗಮವು ಪಾವತಿಸಿದ ದಂಡವನ್ನು ವಸೂಲಿ ಮಾಡಲಾಗಿದ್ದು, ಇದರಿಂದ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಲು ಭಯಪಡುತ್ತಾರೆ ಎಂದು ಬಿಎಂಟಿಸಿ ಮೂಲಗಳು ಸಮರ್ಥಿಸಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com