ರಾಜಧಾನಿ ಬೆಂಗಳೂರಿನಲ್ಲಿ ಮಳೆ, ಸಂಚಾರದಟ್ಟಣೆ

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಶುಕ್ರವಾರ ರಾತ್ರಿ 8 ಗಂಟೆಯ ನಂತರ ಸಾಧಾರಣ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಶುಕ್ರವಾರ ರಾತ್ರಿ 8 ಗಂಟೆಯ ನಂತರ ಸಾಧಾರಣ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. 

ಎಚ್‌ಎಎಲ್ ಹಳೆ ವಿಮಾನ ನಿಲ್ದಾಣ ಸಂಚಾರ ಪೊಲೀಸರ ಪ್ರಕಾರ, ಬೆಳ್ಳಂದೂರು ಸಮೀಪದ ಕಾಡುಬೀಸನಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ನಿನ್ನೆ ರಾತ್ರಿ 9.15 ರಿಂದ 10.20 ರವರೆಗೆ ವಾಹನ ಸಂಚಾರ ನಿಧಾನವಾಗಿ ಸಾಗಿತ್ತು. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಿದರು. ರಾತ್ರಿ 11 ರ ಹೊತ್ತಿಗೆ ಸಂಚಾರ ಸಹಜ ಸ್ಥಿತಿಗೆ ಮರಳಿತು. ಮಳೆ ಮತ್ತು ಜಲಾವೃತದಿಂದಾಗಿ ಕಾಡುಬೀಸನಹಳ್ಳಿಯಲ್ಲಿ ಸಂಚಾರ ದಟ್ಟಣೆ ವರದಿಯಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ, ಹೂಡಿ, ಕೆಆರ್ ಪುರಂ, ಬಿಟಿಎಂ, ಮಡಿವಾಳಗಳಲ್ಲಿ ಜನಸಂಚಾರ, ವಾಹನ ಸಂಚಾರ ಮೇಲೆ ಪರಿಣಾಮ ಬೀರಿದೆ. 

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೂ ಎಚ್ಚರಿಕೆ ನೀಡಲಾಗಿದ್ದು, ಅಧಿಕಾರಿಗಳು ಆಗಮಿಸಿ ನೀರನ್ನು ಹೊರ ಹಾಕಿದ್ದಾರೆ ಎಂದು ಮಹದೇವಪುರ ಕಾರ್ಯಪಡೆ ತಿಳಿಸಿದೆ.

ಮೆಟ್ರೋ ಶಂಕುಸ್ಥಾಪನೆ ಕಾಮಗಾರಿ ವೇಳೆ ಅಂಡರ್‌ಪಾಸ್‌ನ ಒಂದು ಬದಿಯಿಂದ ಔಟ್‌ಲೆಟ್ ಪೈಪ್‌ಲೈನ್ ಹಾಳಾಗಿದೆ ಎಂದು ಟಾಸ್ಕ್ ಫೋರ್ಸ್ ಮಾಹಿತಿ ನೀಡಿದೆ. ಅವರು ಪೈಪ್‌ಲೈನ್ ಮಾರ್ಗವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಬೆಂಗಳೂರು ನಗರದಲ್ಲಿ ನಾಳೆಯವರೆಗೆ ಸಾಧಾರಣ ಮಳೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com