ಹೊಸಕೆರೆ ಹಳ್ಳಿ ಕೆರೆ ಮಧ್ಯೆ ಬಿಬಿಎಂಪಿಯಿಂದ ಅಕ್ರಮ ರಸ್ತೆ ನಿರ್ಮಾಣ: ಶಾಸಕ ಮುನಿರತ್ನ ವಿರುದ್ಧ ಜೆಡಿಎಸ್ ವಾಗ್ದಾಳಿ

ಬೆಂಗಳೂರಿನ ಹಳೆಯ ಕೆರೆಗಳಲ್ಲೊಂದಾದ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆ ಬಿಬಿಎಂಪಿಯಿಂದ ಅಕ್ರಮವಾಗಿ ರಸ್ತೆ ನಿರ್ಮಾಣ ವಿಚಾರವಾಗಿ ಸ್ಥಳೀಯ ಶಾಸಕ ಮುನಿರತ್ನ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಹೊಸಕೆರೆ ಹಳ್ಳಿ ಕೆರೆ ಮಧ್ಯೆ ನಡೆಯುತ್ತಿರುವ ರಸ್ತೆ ನಿರ್ಮಾಣದ ಚಿತ್ರ
ಹೊಸಕೆರೆ ಹಳ್ಳಿ ಕೆರೆ ಮಧ್ಯೆ ನಡೆಯುತ್ತಿರುವ ರಸ್ತೆ ನಿರ್ಮಾಣದ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಹಳೆಯ ಕೆರೆಗಳಲ್ಲೊಂದಾದ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆ ಬಿಬಿಎಂಪಿಯಿಂದ ಅಕ್ರಮವಾಗಿ ರಸ್ತೆ ನಿರ್ಮಾಣ ವಿಚಾರವಾಗಿ ಸ್ಥಳೀಯ ಶಾಸಕ ಮುನಿರತ್ನ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.

ರಸ್ತೆ ನಿರ್ಮಾಣ ಕುರಿತ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್, ಇದು ಅಕ್ಷಮ್ಯ. ಅಪಾರ್ಟ್ಮೆಂಟೊಂದರ ಮೌಲ್ಯ ಹೆಚ್ಚಿಸಲು ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ ಮುನಿರತ್ನ ಯಾವುದೊ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ ಎಂದು ಕಿಡಿಕಾರಿದೆ. 

ಕೆರೆಗಳು ನಗರದ ಜೀವಸೆಳೆ, ಅದನ್ನು ರಕ್ಷಿಸಬೇಕೆ ವಿನಃ ಹಾಳುಗೆಡವುದಲ್ಲ. ಕೆರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ, ಆದರೆ ಕೆರೆಯಿನ್ನೂ ದುರ್ನಾತ ಬೀರುತ್ತಿದೆ. ಕೆರೆಗೆ ಈಗಾಗಲೆ ಖರ್ಚು ಮಾಡಲಾದ ಹಣವನ್ನು ಏನು ಮಾಡಲಾಗಿದೆ ಎಂದು ಮುನಿರತ್ನ ಹೇಳಬೇಕು ಎಂದು ಒತ್ತಾಯಿಸಿದೆ. 

ಕೆರೆ ಮಧ್ಯೆ ರಸ್ತೆ ನಿರ್ಮಿಸಲು ಬಿಬಿಎಂಪಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅನುಮೋದನೆ ಕೂಡಾ ಪಡೆದಿಲ್ಲ ಎಂಬ ವರದಿಯಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕಮಿಷನ್ ದಂಧೆ ಬಿಟ್ಟು ಇತ್ತ ಕಡೆ ತಲೆ ಹಾಕಿ. ಕಾನೂನು ಮುರಿದು ಕರೆ ಮಧ್ಯೆ ರಸ್ತೆ ನಿರ್ಮಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com