ತಲಕಾಡು: ಈಜಲು ತೆರಳಿದ್ದ ಯುವಕ ನೀರು ಪಾಲು; ಒಂದೇ ದಿನ 3 ಸಾವು

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮುಳುಗಿ ಸಾವು
ಮುಳುಗಿ ಸಾವು

ಮೈಸೂರು: ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ಈ ಘಟನೆ ನಡೆದಿದ್ದು, ನದಿಗೆ ಈಜಲು ಹೋಗಿದ್ದ ಯುವಕ ದೀಕ್ಷಿತ್(16) ಎಂಬ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ವೈಕುಂಠ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಗೆಳೆಯರೊಂದಿಗೆ ಮಾಧವ ಮಂತ್ರಿ ಅಣೆಕಟ್ಟೆ ಬಳಿ ತೆರಳಿದ್ದ ಯುವಕ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾನೆ. ಮೃತ ದೀಕ್ಷಿತ್ ತಲಕಾಡಿನ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದನು. ಈ ಕುರಿತು ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜು ಬಾರದಿದ್ದರೂ ಗೆಳೆಯರ ಜತೆಗೆ ನದಿಗೆ ಈಜಾಡಲು ನದಿಗೆ ಇಳಿದಾಗ ನಡೆದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲಕಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ. ನಿರಂತರ ಕಾರ್ಯಾಚರಣೆಯಿಂದ ತಡರಾತ್ರಿ ದೀಕ್ಷಿತ್ ಮೃತ ದೇಹ ಪತ್ತೆಯಾಗಿದೆ. 

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರ ಸಾವು
ಮತ್ತೊಂದು ದುರಂತದಲ್ಲಿ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ನಡೆದ ಖಟನೆ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಘಟನೆ ವರದಿಯಾಗಿದೆ. ಯಾದಗೂಡದ ಯಶವಂತ ಬಸಪ್ಪಾ ವಗ್ಗರ((14), ಗೋಕಾಕ ತಾಲೂಕಿನ ಬಡಿಗವಾಡದ ಯಮನಪ್ಪ ಪ್ರಕಾಶ ರಡ್ಡರಟ್ಟಿ ಮೃತಪಟ್ಟ ದುರ್ದೈವಿಗಳು. ಮನೆಯ ಸಮೀಪ ಸ್ನೇಹಿತರ ಜತೆಗೂಡಿ ಕ್ರಿಕೆಚ್ ಆಟ ಆಡುತ್ತಿದ್ದರು.ಈ ವೇಳೆ ಚೆಂಡು ಇತ್ತಿರದ ಹೊಲದಲ್ಲಿನ ಕೃಷಿ ಹೊಂಡಕ್ಕೆ ಬಿದ್ದಿದೆ. 

ಚೆಂಡು ತೆಗೆಯಲು ಕೃಷಿ ಹೊಂಡಕ್ಕೆ ಇಳಿದ ಯಮನಪ್ಪ ಮುಳುಗಿದ್ದಾನೆ ಈತನನ್ನು ರಕ್ಷಿಸಲು ಯಶವಂತ ಮುಂದಾಗಿದ್ದಾನೆ. ಆದರೆ, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಎಂ.ಎ.ತಹಸೀಲ್ದಾರ್, ಎಎಸ್‍ಐ ಸಿ.ಎಲ.ಗಸ್ತಿ, ಮುಖ್ಯಪೇದೆ ಆರ್.ಎಸ್.ಢಂಗ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಹುಕೈರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com