ಅನೈತಿಕ ಸಂಬಂಧ: ಪತ್ನಿ ಕೊಂದು ಮಗನ ಹತ್ಯೆಗೈಯಲು ಯತ್ನಿಸಿದ ವ್ಯಕ್ತಿ!
ವಿವಾಹೇತರ ಸಂಬಂಧ ಹೊಂದಿದ್ದ ಪತ್ನಿಯ ಹತ್ಯೆಗೈದ ವ್ಯಕ್ತಿಯೊಬ್ಬ ಎರಡೂವರೆ ವರ್ಷದ ಮಗನನ್ನು ಹತ್ಯೆಗೈಯಲು ಯತ್ನಿಸಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.
Published: 22nd March 2023 02:25 PM | Last Updated: 22nd March 2023 02:25 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ವಿವಾಹೇತರ ಸಂಬಂಧ ಹೊಂದಿದ್ದ ಪತ್ನಿಯ ಹತ್ಯೆಗೈದ ವ್ಯಕ್ತಿಯೊಬ್ಬ ಎರಡೂವರೆ ವರ್ಷದ ಮಗನನ್ನು ಹತ್ಯೆಗೈಯಲು ಯತ್ನಿಸಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತಳನ್ನು ತಹ್ಸೀನ್ ಬೇಬಿ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಶೇಖ್ ಸೊಹೆಲ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ದಂಪತಿಗಳಿಗೆ ಮದುವೆಯಾಗಿ 14 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪಶ್ಚಿಮಬಂಗಾಳದ ಮೂಲದವರಾದ ಇವರು, 2013ರಲ್ಲಿ ಬೆಂಗಲೂರಿನ ಕೆಜಿ ಹಳ್ಳಿಯಲ್ಲಿ ನೆಲೆಯೂರಿದ್ದರು.
ಕಾರು ಚಾಲಕ ಸೈಯದ್ ನದೀಮ್ ಎಂಬಾತನೊಂದಿಗೆ ತಹಸೀನ್ ವಿವಾಹೇತರ ಸಂಬಂಧ ಹೊಂದಿರುವ ವಿಚಾರ ತಿಳಿದ ಸೋಹೆಲ್, ಕುಟುಂಬವನ್ನು ಕೋಲ್ಕತಾಗೆ ಸ್ಥಳಾಂತರಿಸಿದ್ದ. ಆದರೆ, ತಹಸೀನ್ ಪತನಿಯನ್ನು ತೊರೆದು ಬೆಂಗಳೂರಿಗೆ ಬಂದು ನದೀಮ್ ಜೊತೆಗೆ ವಾಸವಿದ್ದಳು. ಈ ಸಂಬಂಧದಲ್ಲಿ ಇಬ್ಬರಿಗೂ ಒಬ್ಬ ಮಗನಿದ್ದ.
ವಿಚಾರ ತಿಳಿದ ಸೋಹೆಲ್ ಸೋವಾರ ರಾತ್ರಿ ಸಾರಾಯಿಪಾಳ್ಯದ ಅಫ್ಜಲ್ ಲೇಔಟ್‌ನಲ್ಲಿರುವ ನದೀಮ್ ಮನೆಗೆ ಭೇಟಿ ನೀಡಿ ಜಗಳವಾಡಿದ್ದಾರೆ. ಚಾಕುವಿನಿಂದ ನದೀಮ್ ಮೇಲೆ ಹಲ್ಲೆ ನಡೆಸಿದ್ದಾನೆ. ನದೀಮ್ ನನ್ನು ಕೊಲ್ಲುವ ಯತ್ನದಲ್ಲಿ ತಹಸೀನ್ ಕತ್ತು ಸೀಳಿದ್ದಾನೆ. ಇದೇ ವೇಳೆ ಆಕೆಯ ಮಗನ ತೊಡೆಗೂ ಇರಿದಿದ್ದಾನೆ. ಗಲಾಟೆಯ ಸದ್ದು ಕೇಳಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೂಡಲೇ ಬಾಕಲನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.