
ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮುಯ್ಯ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗನೋರ್ವನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
#WATCH | LoP and former Karnataka CM Siddaramaiah slaps a supporter who came to meet him at his residence in Bengaluru earlier today. The supporter had come to him amid a huge crowd of visitors there. pic.twitter.com/968Ba1t9DB
— ANI (@ANI) March 24, 2023
ಶುಕ್ರವಾರ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರು ಸೇರಿದ್ದರು. ಸಿದ್ದರಾಮಯ್ಯ ತಮ್ಮ ನಿವಾಸದಿಂದ ಹೊರಬರುತ್ತಿದ್ದಂತೆಯೇ ಅವರ ಅಭಿಮಾನಿಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ವೇಳೆ ಅಭಿಮಾನಿಗಳು ನೂಕುನುಗ್ಗಾಟಕ್ಕೆ ಮುಂದಾದಾಗ, ಸಿದ್ದರಾಮಯ್ಯ ಅವರು ಶಾಂತತೆ ಕಾಪಾಡುವಂತೆ ಪದೇ ಪದೇ ಮನವಿ ಮಾಡಿದ್ದಾರೆ. ಆದರೆ ಓರ್ವ ಅಭಿಮಾನಿ ಜೋರಾಗಿ ಘೋಷಣೆ ಕೂಗಿದಾಗ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ ಆತನ ಕೆನ್ನೆಗೆ ಬಾರಿಸಿದ್ದಾರೆ.
ಇದನ್ನೂ ಓದಿ: ವರುಣಾ, ಕೋಲಾರ ಎರಡೂ ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧೆ: ಯತೀಂದ್ರ ಸಿದ್ದರಾಮಯ್ಯ
ತಮ್ಮ ಬೆಂಬಲಿಗನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ, ಆತನನ್ನು ತರಾಟೆಗೆ ತೆಗೆದುಕೊಂಡು ತಮ್ಮ ಕಾರು ಹತ್ತಿ ಅಲ್ಲಿಂದ ತೆರಳಿದರು. ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಪಾಳಮೋಕ್ಷ ಮಾಡಿಸಿಕೊಂಡ ಅಭಿಮಾನಿ ಜನರ ಮಧ್ಯೆ ಹಿಂದೆ ಸರಿದಿದ್ದಾನೆ.
An irked @siddaramaiah slaps a Congress worker outside his residence, dozens of supporters had gathered to meet him, the man who was slapped is said to have repeatedly asked Siddaramaiah about the ticket for his leader. pic.twitter.com/caGK7qKaJ5
— Deepak Bopanna (@dpkBopanna) March 24, 2023
ತಮ್ಮ ನಾಯಕನಿಗೆ ಟಿಕೆಟ್ ನೀಡುವಂತೆ ಒತ್ತಾಯ
ಇನ್ನು ಮೂಲಗಳ ಪ್ರಕಾರ ಕಪಾಳಮೋಕ್ಷಕ್ಕೊಳಗಾದ ವ್ಯಕ್ತಿ ತಮ್ಮ ನಾಯಕನಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿ ಘೋಷಣೆ ಕೂಗಿದ್ದು, ಇದೇ ಕಾರಣಕ್ಕೆ ಸಿಟ್ಟಿನಿಂದ ಸಿದ್ದರಾಮಯ್ಯ ಅತನಿಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷ ಅಥವಾ ಸಿದ್ದರಾಮಯ್ಯ ಯಾವುದೇ ಸ್ಪಷ್ಟನೆ ನೀಡಿಲ್ಲ.