
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರಿನ ಲಾಡ್ಜ್‌ನಲ್ಲಿ ಶುಕ್ರವಾರ ಬೆಳಗ್ಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಮೈಸೂರಿನ ವಿಜಯನಗರದ 46 ವರ್ಷ ವಯಸ್ಸಿನ ದೇವೇಂದ್ರ, ಅವರ ಪತ್ನಿ ಮತ್ತು 14 ಮತ್ತು 10 ವರ್ಷದ ಇಬ್ಬರು ಪುತ್ರಿಯರು ಎಂದು ಗುರುತಿಸಲಾಗಿದೆ.
ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿರುವ ಕರುಣಾ ರೆಸಿಡೆನ್ಸಿಯ ಲಾಡ್ಜ್ ಕೊಠಡಿಯಲ್ಲಿ ದೇವೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬವು ಮೂರು ದಿನಗಳ ಹಿಂದೆ ಹೋಟೆಲ್ ರೂಂ ಕಾಯ್ದಿರಿಸಿತ್ತು, ಆರಂಭದಲ್ಲಿ ಅವರು ಒಂದು ದಿನ ಉಳಿಯಲು ಯೋಜಿಸಿದ್ದರು, ಕ್ರಮೇಣ ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಿದರು.
Four members of a family died by suicide at a Mangaluru lodge. The deceased have been identified as Devendra, aged 46 from Vijayanagar in Mysuru, his wife and two children. In a suicide note, Devendra said he had financial problems @XpressBengaluru @vinndz_TNIE @compolmlr pic.twitter.com/OfGgIrEUEU
— Divya Cutinho_TNIE (@cutinha_divya) March 31, 2023
ದೇವೇಂದ್ರ ಮೊದಲು ತನ್ನ ಮಕ್ಕಳು ಮತ್ತು ಹೆಂಡತಿಗೆ ವಿಷ ನೀಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ. ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು!
ಆತ್ಮಹತ್ಯೆ ಪತ್ರದಲ್ಲಿ ದೇವೇಂದ್ರ ಅವರು ಆರ್ಥಿಕ ಸಮಸ್ಯೆಗಳಿದ್ದು, ಸಾಲ ಮಾಡಿರುವುದಾಗಿ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.