ಇಡೀ ದೇಶದಲ್ಲೇ ನಂಬರ್ 1 ಸ್ಟ್ರೀಟ್ ಬೆಂಗಳೂರಿನ ಎಂಜಿ ರಸ್ತೆ!

ಸಿಲಿಕಾನ್ ಸಿಟಿ, ಉದ್ಯಾನನಗರಿ ಬೆಂಗಳೂರು ಮಹಾನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಎಂಜಿ ರಸ್ತೆ ಒಂದಾಗಿದೆ. ಚಿಲ್ಲರೆ ಅಂಗಡಿಗಳು, ಆಹಾರ ಮಳಿಗೆಗಳು, ರೆಸ್ಟೋರೆಂಟ್‌ಗಳು ಮತ್ತಿತರ ಮನೋರಂಜನಾ ಕೇಂದ್ರಗಳು, ಎತ್ತರದ ಕಟ್ಟಡಗಳಿಂದ ಆಕರ್ಷಿಸುವ ಈ ರಸ್ತೆ ಇದೀಗ ದೇಶದ ಟಾಪ್ 30 ಬೀದಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.  
ಎಂಜಿ ರಸ್ತೆ
ಎಂಜಿ ರಸ್ತೆ

ಬೆಂಗಳೂರು: ಸಿಲಿಕಾನ್ ಸಿಟಿ, ಉದ್ಯಾನನಗರಿ ಬೆಂಗಳೂರು ಮಹಾನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಎಂಜಿ ರಸ್ತೆ ಒಂದಾಗಿದೆ. ಚಿಲ್ಲರೆ ಅಂಗಡಿಗಳು, ಆಹಾರ ಮಳಿಗೆಗಳು, ರೆಸ್ಟೋರೆಂಟ್‌ಗಳು ಮತ್ತಿತರ ಮನೋರಂಜನಾ ಕೇಂದ್ರಗಳು, ಎತ್ತರದ ಕಟ್ಟಡಗಳಿಂದ ಆಕರ್ಷಿಸುವ ಈ ರಸ್ತೆ ಇದೀಗ ದೇಶದ ಟಾಪ್ 30 ಬೀದಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.  

ಮುಂಬೈನ ಲಿಂಕಿಂಗ್ ರಸ್ತೆ  ಮತ್ತು ಹೈದರಾಬಾದ್‌ನ ಸೋಮಾಜಿಗುಡಾ ರಸ್ತೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಯಂಕ್ ಇಂಡಿಯಾ ವರದಿ ಹೇಳಿದೆ. 

ದೆಹಲಿಯ ಸೌತ್ ಎಕ್ಸ್ ಟೆನ್ಷನ್ ನಾಲ್ಕನೇ  ಸ್ಥಾನದಲ್ಲಿದ್ದರೆ, ಕೊಲ್ಕತ್ತಾದ ಪಾರ್ಕ್ ಸ್ಟ್ರೀಟ್ 5, ಚೆನ್ನೈನ ಅಣ್ಣಾನಗರ್ 6, ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ 7, ನೊಯಿಡಾ ದ ಸೆಕ್ಟೆರ್ 18 ಮಾರ್ಕೆಟ್ 8, ಬೆಂಗಳೂರಿನ ಬ್ರಿಗೇಡ್  ಮತ್ತು ಚರ್ಚ್ ಸ್ಟ್ರೀಟ್ ಕ್ರಮವಾಗಿ 9 ಮತ್ತು 10ನೇ ಸ್ಥಾನ ಪಡೆದುಕೊಂಡಿವೆ. ಗ್ರಾಹಕರಿಗೆ ಒದಗಿಸುವ ಅನುಭವದ ಗುಣಮಟ್ಟವನ್ನು ನಿರ್ಧರಿಸುವ ವಿವಿಧ ಅಂಶಗಳ ಆಧಾರದ ಮೇಲೆ ಈ ಶ್ರೇಯಾಂಕ ನೀಡಲಾಗಿದೆ. 

ಜಾಗತಿಕವಾಗಿ ನಗರಗಳನ್ನು  ಅವುಗಳ ಪ್ರಮುಖ ಬೀದಿಗಳು ಹಾಗೂ ನಗರದ ಮೌಲ್ಯಮಾಪಕದ ಆಧಾರದ ಮೇಲೆ ಗುರುತಿಸಲಾಗುತ್ತದೆ ಎಂದು ನೈಟ್ ಫ್ರಾಂಕ್ ಇಂಡಿಯಾ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶಿಶಿರ್ ಬೈಜಾಲ್ ಹೇಳುತ್ತಾರೆ. 

ಅನಿಲ್ ಕುಂಬ್ಳೆ ಸರ್ಕಲ್ ನಿಂದ ಆರಂಭವಾಗಿ ಟ್ರಿಟಿನಿ ಸರ್ಕಲ್ ನಲ್ಲಿ ಅಂತ್ಯವಾಗುವ ಈ ರಸ್ತೆಗೆ 1948 ಫೆಬ್ರವರಿಯಲ್ಲಿ ಮಹಾತ್ಮ ಗಾಂಧಿ ರಸ್ತೆ ಎಂದು ಹೆಸರಿಡಲಾಗಿದೆ. ಈ ರಸ್ತೆಯಲ್ಲಿ ನಮ್ಮ ಮೇಟ್ರೋ ನೇರಳ ಮಾರ್ಗವಿದ್ದು, ಎಂಜಿ ರಸ್ತೆ ಹಾಗೂ ಟ್ರಿನಿಟಿ ರಸ್ತೆಯಲ್ಲಿ ಮೆಟ್ರೋ ನಿಲ್ದಾಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com