ರಾಜ್ಯ ರಾಜಧಾನಿಯಲ್ಲಿ ವರುಣಾರ್ಭಟ: ಮುಗಿಲು ಬಾಯ್ತೆರೆದರೆ ಬೆಂಗಳೂರಿನಲ್ಲಿ ಸಾವಿನ ಅಪಾಯ ಕಟ್ಟಿಟ್ಟ ಬುತ್ತಿ!

ಕೆ.ಆರ್​.ವೃತ್ತದ ಅಂಡರ್​ಪಾಸ್​ನ ನೀರಿನಲ್ಲಿ ಕಾರು ಸಿಲುಕಿಕೊಂಡು ಅದರಲ್ಲಿದ್ದ ಮಹಿಳಾ ಟೆಕ್ಕಿ ಭಾನುರೇಖಾ ಮೃತಪಟ್ಟಿದ್ದರು. ಅದೃಷ್ಟವಶಾತ್​ ಇನ್ನುಳಿದ ಅವರ ಕುಟುಂಬದ ಸದಸ್ಯರ ಪಾರಾಗಿದ್ದರು.
ಮಳೆಯಿಂದ ಮುರಿದು ಬಿದ್ದಿರುವ ಮರದ ಕೊಂಬೆ
ಮಳೆಯಿಂದ ಮುರಿದು ಬಿದ್ದಿರುವ ಮರದ ಕೊಂಬೆ
Updated on

ಬೆಂಗಳೂರು: ಕೆ.ಆರ್​.ವೃತ್ತದ ಅಂಡರ್​ಪಾಸ್​ನ ನೀರಿನಲ್ಲಿ ಕಾರು ಸಿಲುಕಿಕೊಂಡು ಅದರಲ್ಲಿದ್ದ ಮಹಿಳಾ ಟೆಕ್ಕಿ ಭಾನುರೇಖಾ ಮೃತಪಟ್ಟಿದ್ದರು. ಅದೃಷ್ಟವಶಾತ್​ ಇನ್ನುಳಿದ ಅವರ ಕುಟುಂಬದ ಸದಸ್ಯರ ಪಾರಾಗಿದ್ದರು. ಇದೀಗ ಈ ಅವಘಡದಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದೆ.

ಬಿಬಿಎಂಪಿಯು 18 ಅಪಾಯಕಾರಿ ಅಂಡರ್‌ಪಾಸ್‌ಗಳನ್ನು ಗುರುತಿಸಿದ್ದು, ಅಧಿಕಾರಿಗಳ ಕಾರ್ಯಸಾಧ್ಯತಾ ವರದಿಗಾಗಿ ಕಾಯುತ್ತಿದೆ.

ಬೆಂಗಳೂರಿನ ಎಲ್ಲ ಅಂಡರ್​ಪಾಸ್ ಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಬಿಬಿಎಂಪಿ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 53 ಅಂಡರ್​ಪಾಸ್​ಗಳಿವೆ.

ಅದರಲ್ಲಿ 18 ರೈಲ್ವೇ ಬ್ರಿಡ್ಜ್ ಅಂಡರ್​ಪಾಸ್ ಹಾಗೂ 35 ರಸ್ತೆ ಅಂಡರ್​ಪಾಸ್​ಗಳಾಗಿವೆ. ಇದೀಗ ಎಲ್ಲ ಅಂಡರ್​ಪಾಸ್​ಗಳ ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ.

ನಗರದ ಎಲ್ಲಾ ರೀತಿಯ ಕೆಳಸೇತುವೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಪಾಯ ತಂದೊಡ್ಡುವ ಸೇತುವೆಗಳನ್ನು ತಕ್ಷಣವೇ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್  ಮಾಧ್ಯಮಗಳಿಗೆ ತಿಳಿಸಿದರು.

ಒಳಚರಂಡಿ ಇಲ್ಲದ ಅಥವಾ ನೀರು ಸರಾಗವಾಗಿ ಹರಿಯದ ಕೆಳಸೇತುವೆಗಳನ್ನು ಮುಚ್ಚುತ್ತೇವೆ. ಸೋಮವಾರ ಸಂಜೆ ವೇಳೆಗೆ ವರದಿ ಆಧರಿಸಿ ಅಂಡರ್‌ಪಾಸ್‌ ಮುಚ್ಚುವಂತಹ ಕ್ರಮ ಕೈಗೊಳ್ಳಲಾಗುವುದು,'' ಎಂದು ಹೇಳಿದರು.

ನಗರದ ಎಲ್ಲಾ ರೀತಿಯ ಕೆಳಸೇತುವೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಪಾಯ ತಂದೊಡ್ಡುವ ಸೇತುವೆಗಳನ್ನು ತಕ್ಷಣವೇ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ   ಮಾಧ್ಯಮಗಳಿಗೆ ತಿಳಿಸಿದರು.

ಮಳೆಯ ಹೊರತಾಗಿ, ಸುತ್ತಮುತ್ತಲಿನ ಪ್ರದೇಶಗಳಿಂದ ನೀರು ಹರಿಯುತ್ತದೆ, ಅದು ಸೇತುವೆಗಳ ಕೆಳಗೆ ಸಂಗ್ರಹಗೊಳ್ಳುತ್ತದೆ, ಇದು ಅಂತಹ ಅನಾಹುತಗಳಿಗೆ ಕಾರಣವಾಗುತ್ತದೆ. ಸಂಚಾರಿ ಪೊಲೀಸ್ ಇಲಾಖೆ ನೀಡಿರುವ ಪಟ್ಟಿ ಆಧರಿಸಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ.

115 ಸ್ಥಳಗಳಲ್ಲಿ ಚರಂಡಿಗಳ ಕಾಮಗಾರಿ ನಡೆದಿದ್ದು, ಈಗ ಈ ಸ್ಥಳಗಳು ಸಮಸ್ಯೆ ಮುಕ್ತವಾಗಿವೆ. ಉಳಿದ 25 ಕಡೆ ಕಾಮಗಾರಿ ನಡೆಯುತ್ತಿದೆ. ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು' ಎಂದು ಗಿರಿನಾಥ್ ತಿಳಿಸಿದ್ದಾರೆ.

ರಾಜಕಾಲುವೆಗಳ ಒತ್ತುವರಿ ತೆರವು ಕುರಿತು ಪ್ರತಿಕ್ರಿಯಿಸಿದ ಗಿರಿನಾಥ್, 607 ಕಡೆ ಒತ್ತುವರಿ ತೆರವು ಪ್ರಕರಣ ನ್ಯಾಯಾಲಯದಲ್ಲಿದೆ. ಪಾಲಿಕೆ 500 ಕಡೆ ಒತ್ತುವರಿ ತೆರವುಗೊಳಿಸಿದೆ. ಇನ್ನು ಮಹದೇವಪುರ ವಲಯದಲ್ಲಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com