ಮಳೆಯಿಂದ ಕೆ. ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಸಿಲುಕಿದ ವಾಹನಗಳ ಚಿತ್ರ
ಮಳೆಯಿಂದ ಕೆ. ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಸಿಲುಕಿದ ವಾಹನಗಳ ಚಿತ್ರ

ಮಳೆಗಾಲದಲ್ಲಿ ಅಂಡರ್ ಪಾಸ್ ದುರಂತ ತಪ್ಪಿಸಲು 'ಕವ್ ಟ್ರ್ಯಾಪ್' ಪರಿಹಾರ?

ಅಂಡರ್‌ಪಾಸ್ ಪ್ರವಾಹ ತಪ್ಪಿಸಲು ಇಲ್ಲಿದೆ ಸರಳ ಪರಿಹಾರ. ಕವ್ ಟ್ರ್ಯಾಪ್ ಅಳವಡಿಕೆಯಿಂದ ಮಳೆ ನೀರನ್ನು ರಾಜಕಾಲುವೆಗೆ ತಿರುಗಿಸಲು ನೆರವಾಗುತ್ತದೆ ಎಂಬುದು ಬಿಬಿಎಂಪಿಗೆ 2 ಅಂಡರ್ ಪಾಸ್ ಯೋಜನೆ ಅನುಷ್ಠಾನಗೊಳಿಸಿರುವ ಹಾಗೂ ಜಲ ಸಂರಕ್ಷಣೆಯಲ್ಲಿ 22 ವರ್ಷಗಳ ಅನುಭವವಿರುವ ವಿಜಯ್ ರಾಜ್ ಸಿಸೋಡಿಯಾ ಅವರ ಅಭಿಪ್ರಾಯವಾಗಿದೆ.

ಬೆಂಗಳೂರು: ಅಂಡರ್‌ಪಾಸ್ ನಲ್ಲಿ ಪ್ರವಾಹ ತಪ್ಪಿಸಲು ಇಲ್ಲಿದೆ ಸರಳ ಪರಿಹಾರ. ಕವ್ ಟ್ರ್ಯಾಪ್ ಅಳವಡಿಕೆಯಿಂದ ಮಳೆ ನೀರನ್ನು ರಾಜಕಾಲುವೆಗೆ ತಿರುಗಿಸಲು ನೆರವಾಗುತ್ತದೆ ಎಂಬುದು ಬಿಬಿಎಂಪಿಗೆ 2 ಅಂಡರ್ ಪಾಸ್ ಯೋಜನೆ ಅನುಷ್ಠಾನಗೊಳಿಸಿರುವ ಹಾಗೂ ಜಲ ಸಂರಕ್ಷಣೆಯಲ್ಲಿ 22 ವರ್ಷಗಳ ಅನುಭವವಿರುವ ವಿಜಯ್ ರಾಜ್ ಸಿಸೋಡಿಯಾ ಅವರ ಅಭಿಪ್ರಾಯವಾಗಿದೆ.

ಕವ್ ಟ್ರ್ಯಾಪ್ ಗಳನ್ನು ನಡುವೆ ಜಾಗ ಇರುವಂತೆ ಉಕ್ಕಿನ ಕಟ್ಟಿನಿಂದ ಮಾಡಲಾಗಿರುತ್ತದೆ. ಇವುಗಳನ್ನು ಅಂಡರ್ ಪಾಸ್ ನ ಸಣ್ಣ ಚರಂಡಿಗಳ ಮೇಲೆ ಅಳವಡಿಸಲಾಗುತ್ತದೆ. ಅವುಗಳು ರಾಜಕಾಲುವೆಯನ್ನು ಸಂಪರ್ಕಿಸುತ್ತವೆ. 

ಈ ಕುರಿತು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಿಸೋಡಿಯಾ, ನಗರದ ಕೆಆರ್ ಸರ್ಕಲ್ ಅಂಡರ್ ಪಾಸ್ ಬಳಿ ಕವ್ ಟ್ರ್ಯಾಪ್ ಅಳವಡಿಸುವುದರಿಂದ ಪ್ರವಾಹವನ್ನು ತಡೆಗಟ್ಟಬಹುದು. ಸೋಮವಾರ ಕೇವಲ 30 ಮಿಲಿ ಮೀಟರ್ ಮಳೆಯಾಗಿದ್ದಕ್ಕೆ ಅಷ್ಟೊಂದು ಅನಾಹುತವಾಗಿದೆ. ಇನ್ನೂ ಕಳೆದ ಬಾರಿಯಂತೆ 180 ಮಿ.ಮೀ ಮಳೆಯಾದರೆ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಬೇಕು.

ಬೆಂಗಳೂರಿನಲ್ಲಿ ಈಗ ಕೆಲವೆಡೆ ಅಂಡರ್ ಪಾಸ್ ನ ಮಧ್ಯದಲ್ಲಿ ಕವ್ ಟ್ರ್ಯಾಪ್ ಅಳವಡಿಸಲಾಗಿದೆ. ಅಂಡರ್ ಪಾಸ್ ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ  ಚರಂಡಿ ಕಡೆಗೆ ನೀರನ್ನು ಪಂಪ್ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು. 

ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಶೀಘ್ರದಲ್ಲೇ ಕವ್ ಟ್ರ್ಯಾಪ್: 2019 ರಲ್ಲಿ ಬಸವನ ಗುಡಿ ಮತ್ತು ಜೆಪಿ ನಗರದ ಅಂಡರ್ ಪಾಸ್ ನಲ್ಲಿ ಇದನ್ನು ಅಳವಡಿಸಿರುವುದರಿಂದ ಆ ಎರಡು ಕಡೆಗಳಲ್ಲಿ ನೀರು ಈಗ ನಿಲ್ಲುತ್ತಿಲ್ಲ. ಹಾವೇರಿ ಜಿಲ್ಲೆಯಲ್ಲಿಯೂ ಇದನ್ನು ಅಳವಡಿಸಿದ್ದೇವೆ. ಈ ಯೋಜನೆ ಯಶಸ್ವಿಯಾಗಿರುವುದರಿಂದ ಬೆಂಗಳೂರಿನ 10 ಅಂಡರ್ ಪಾಸ್ ಗಳಲ್ಲಿ ಕವ್ ಟ್ರ್ಯಾಪ್ ಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಬಿಬಿಎಂಪಿಯಿಂದ 7 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡದಿರುವುದರಿಂದ ಅದನ್ನು ಮಾಡಲಿಕ್ಕೆ ಆಗಲಿಲ್ಲ ಎಂದು ಅವರು ತಿಳಿಸಿದರು. 

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕವ್ ಟ್ರ್ಯಾಪ್ ಅಳವಡಿಕೆಗೆ ಸಹಮತ ವ್ಯಕ್ತಪಡಿಸಿದ್ದು, ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ. ಈಗ ಹಂಪ್ ಹಾಕಿದ್ದು, ಶೀಘ್ರದಲ್ಲಿಯೇ ಕವ್ ಟ್ರ್ಯಾಪ್ ಅಳವಡಿಸಲಾಗುವುದು ಎಂದು ಅವರು ಹೇಳಿದರು. 

Related Stories

No stories found.

Advertisement

X
Kannada Prabha
www.kannadaprabha.com