ಸ್ಪೀಕರ್ ಹುದ್ದೆ ನನ್ನ ಜನಪರ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ: ಯು ಟಿ ಖಾದರ್

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ಬಳಿಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಿನ್ನೆ ಗುರುವಾರ ಪ್ರಥಮ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದರು. ಸಭಾಪತಿ ಸ್ಥಾನಕ್ಕೆ ಅಡ್ಡಿಯಾಗದಂತೆ ಶಾಸಕನಾಗಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. 
ಮಂಗಳೂರಿನಲ್ಲಿ ಯು ಟಿ ಖಾದರ್ ಅವರಿಗೆ ಸನ್ಮಾನ
ಮಂಗಳೂರಿನಲ್ಲಿ ಯು ಟಿ ಖಾದರ್ ಅವರಿಗೆ ಸನ್ಮಾನ
Updated on

ಮಂಗಳೂರು: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ಬಳಿಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಿನ್ನೆ ಗುರುವಾರ ಪ್ರಥಮ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದರು. ಸಭಾಪತಿ ಸ್ಥಾನಕ್ಕೆ ಅಡ್ಡಿಯಾಗದಂತೆ ಶಾಸಕನಾಗಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಾದರ್, ಶಾಸಕರ ನಡುವೆ ಯಾವುದೇ ದ್ವೇಷವಿಲ್ಲದೇ ವಿಧಾನಸಭೆಯಲ್ಲಿ ವ್ಯವಹಾರ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ. ಮೊದಲ ಬಾರಿಗೆ ಶಾಸಕರಾದವರು ಅನೇಕರಿದ್ದಾರೆ. ನಾನು ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಜನರ ಸಮಸ್ಯೆಗಳನ್ನು ಎತ್ತಲು ಹೆಚ್ಚಿನ ಅವಕಾಶಗಳನ್ನು ನೀಡಲು ಪ್ರಯತ್ನಿಸುತ್ತೇನೆ. ಹೊಸದಾಗಿ ಚುನಾಯಿತರಾದ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರವನ್ನು ಸಹ ಆಯೋಜಿಸುತ್ತಿದ್ದೇವೆ, ಅಲ್ಲಿ ಅವರಿಗೆ ವಿಧಾನಸಭೆಯ ಕಲಾಪಗಳು ಮತ್ತು ಅವರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.

ಸ್ಪೀಕರ್ ಆಗಿರುವುದರಿಂದ ತಮ್ಮ ಕಾರ್ಯಕ್ಕೆ ಸೀಮಿತ ಉಂಟಾಗುತ್ತದೆಯೇ, ಕಾರ್ಯಗಳಿಗೆ ಅಡ್ಡಿಬರುತ್ತದೆಯೇ ಎಂಬ ಪ್ರಶ್ನೆಗೆ ಖಾದರ್, ತಮ್ಮ ಕ್ಷೇತ್ರದ ಜನರಿಗಾಗಿ ಸಮಯ ಮೀಸಲಿಟ್ಟು ಅವರ ಕುಂದುಕೊರತೆಗಳನ್ನು ಪರಿಹರಿಸುತ್ತೇನೆ ಎಂದು ಹೇಳಿದರು. 
ಸಭಾಧ್ಯಕ್ಷರ ಕಚೇರಿಯ ಘನತೆಯನ್ನು ಉಳಿಸಿಕೊಂಡು ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಜನರಿಗೆ ಲಭ್ಯವಿದ್ದು, ಕೆಲಸ ಮಾಡುತ್ತೇನೆ.

ನನ್ನ ಬೆಂಬಲಿಗರು ಅರ್ಥಮಾಡಿಕೊಂಡು ಸಹಕರಿಸುತ್ತಾರೆ ಎಂದು ಭಾವಿಸುತ್ತೇನೆ. ತನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ತಮ್ಮ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡ ಅವರು, ಸಭಾಧ್ಯಕ್ಷರು ಸಚಿವರಿಗಿಂತ ದೊಡ್ಡವರು. ಒಬ್ಬ ಮಂತ್ರಿಯನ್ನು ಒಂದು ನಿರ್ದಿಷ್ಟ ಸಚಿವಾಲಯಕ್ಕೆ ಸೀಮಿತಗೊಳಿಸಲಾಗುತ್ತದೆ, ಆದರೆ ಎಲ್ಲಾ ಸಚಿವಾಲಯಗಳು ಸ್ಪೀಕರ್ ಅಡಿಯಲ್ಲಿ ಬರುತ್ತವೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದಾರೆ ಎಂದರು. "ನಾನು ತುಂಬಾ ಕಿರಿಯನಾಗಿದ್ದರೂ, ರಾಜಕೀಯದಲ್ಲಿ ಸಾಕಷ್ಟು ಅನುಭವವಿದ್ದು, ಇನ್ನೂ ಕಲಿಯಲು ಬೇಕಾದಷ್ಟು ಇದೆ" ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com