ಮಾಗಡಿ: ಚುನಾವಣೆ ವೇಳೆ ವಿತರಿಸಲ್ಪಟ್ಟ ಕುಕ್ಕರ್ ಸ್ಫೋಟ; ಬಾಲಕಿಗೆ ಗಾಯ
ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷವೊಂದು ಉಚಿತವಾಗಿ ನೀಡಿದ್ದ ಪ್ರೆಶರ್ ಕುಕ್ಕರ್'ವೊಂದು ಅಡುಗೆ ಮಾಡುವಾಗ ಸ್ಫೋಟಗೊಂಡು 17 ವರ್ಷದ ಬಾಲಕಿ ಗಾಯಗೊಂಡಿರುವ ಘಟನೆ ರಾಮನಗರದ ಮಾಗಡಿಯಲ್ಲಿ ನಡೆದಿದೆ.
Published: 27th May 2023 11:38 AM | Last Updated: 27th May 2023 03:03 PM | A+A A-

ಸಂಗ್ರಹ ಚಿತ್ರ
ರಾಮನಗರ: ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷವೊಂದು ಉಚಿತವಾಗಿ ನೀಡಿದ್ದ ಪ್ರೆಶರ್ ಕುಕ್ಕರ್'ವೊಂದು ಅಡುಗೆ ಮಾಡುವಾಗ ಸ್ಫೋಟಗೊಂಡು 17 ವರ್ಷದ ಬಾಲಕಿ ಗಾಯಗೊಂಡಿರುವ ಘಟನೆ ರಾಮನಗರದ ಮಾಗಡಿಯಲ್ಲಿ ನಡೆದಿದೆ.
ಗಾಯಗೊಂಡ ಬಾಲಕಿಯನ್ನು ಕೋನಮುದ್ದನಹಳ್ಳಿ ನಿವಾಸಿ ಮಹಾಲಕ್ಷ್ಮಿ ಎಂದು ಗುರ್ತಿಸಲಾಗಿದೆ. ಶುಕ್ರವಾರ ಬೆಳಗ್ಗೆ ತಿಂಡಿ ತಯಾರಿಸುತ್ತಿದ್ದ ವೇಳೆ ಕುಕ್ಕರ್ ಸ್ಫೋಟಗೊಂಡಿದೆ.
ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಸೇವಿಸಿ ಬಾಲಕ ಸಾವು, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಘಟನೆಯಲ್ಲಿ ಬಾಲಕಿಯ ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ. ಸಂತ್ರಸ್ತೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಘಟನೆಯ ವೇಳೆ ಸಂತ್ರಸ್ತೆ ಅಡುಗೆ ಮನೆಯಲ್ಲಿ ಒಬ್ಬಳೇ ಇದ್ದಳು ಎನ್ನಲಾಗಿದೆ.