ಮಕ್ಕಳಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್: ವೈದ್ಯರಿಂದ ಶಾಲೆಗಳಲ್ಲಿ ಮಧುಮೇಹ ಅಭಿಯಾನ ಆರಂಭ
ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹವನ್ನು ನಿಯಂತ್ರಿಸುವ ಉದ್ದೇಶದಿಂದ, ವೈದ್ಯರು ರೋಗದ ಕಾರಣಗಳು ಮತ್ತು ಅದನ್ನು ತ್ವರಿತವಾಗಿ ನಿಭಾಯಿಸುವ ವಿಧಾನಗಳ ಬಗ್ಗೆ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
Published: 17th November 2023 04:57 PM | Last Updated: 18th November 2023 01:45 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹವನ್ನು ನಿಯಂತ್ರಿಸುವ ಉದ್ದೇಶದಿಂದ, ವೈದ್ಯರು ರೋಗದ ಕಾರಣಗಳು ಮತ್ತು ಅದನ್ನು ತ್ವರಿತವಾಗಿ ನಿಭಾಯಿಸುವ ವಿಧಾನಗಳ ಬಗ್ಗೆ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಕರ್ನಾಟಕ ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ (KRSSDI) ಅಧ್ಯಕ್ಷ ಡಾ.ಮನೋಹರ್ ನಾಗೇಶಪ್ಪ, ವಿಶೇಷವಾಗಿ ಸಾಂಕ್ರಾಮಿಕ ಯುಗದಲ್ಲಿ ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯು ಮಕ್ಕಳಲ್ಲಿ ಟೈಪ್ -2 ಮಧುಮೇಹವನ್ನು ಪತ್ತೆಹಚ್ಚಲು ಪ್ರಮುಖ ಕಾರಣಗಳಾಗಿವೆ. ಹಿಂದೆ, ಹೆಚ್ಚಿನ ಮಕ್ಕಳು ಪೋಷಕರಿಂದ ತಳೀಯವಾಗಿ ಹರಡುವ ಟೈಪ್ -1 ಮಧುಮೇಹದಿಂದ ಬಳಲುತ್ತಿದ್ದರು ಎನ್ನುತ್ತಾರೆ.
ಇದನ್ನೂ ಓದಿ: ಮಧುಮೇಹವನ್ನು ಗುಣಪಡಿಸಬಹುದಾ? ಡಯಾಬಿಟಿಕ್ ರಿವರ್ಸಲ್ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ಎರಡ್ಮೂರು ತಿಂಗಳಿನಿಂದ ಬೆಂಗಳೂರಿನ ಹಲವಾರು ಶಾಲೆಗಳಲ್ಲಿ ವೈದ್ಯರು ಜಾಗೃತಿ ಅಭಿಯಾನವನ್ನು ಆಯೋಜಿಸುತ್ತಿದ್ದಾರೆ. ಈಗ ಅದನ್ನು ಕರ್ನಾಟಕದ ಇತರ ಜಿಲ್ಲೆಗಳಿಗೂ ವಿಸ್ತರಿಸುತ್ತಿದ್ದಾರೆ. ಮಧುಮೇಹ ಪಾಠಶಾಲಾ ಮತ್ತು ಮಧುಮೇಹ ಸಂವಾದ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಟೈಪ್-2 ಮಧುಮೇಹದ ಬಗ್ಗೆ ಶಿಕ್ಷಣ ನೀಡುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಮಧುಮೇಹ-ಸಂಬಂಧಿತ ಪ್ರಶ್ನಾವಳಿಗಳನ್ನು ನಮೂದಿಸುವ ಫಾರ್ಮ್‌ಗಳನ್ನು ಭರ್ತಿ ಮಾಡಬೇಕು, ಅದನ್ನು ವೈದ್ಯರು ನಂತರ ಮೌಲ್ಯಮಾಪನ ಮಾಡುತ್ತಾರೆ.
ಕೆಆರ್‌ಆರ್‌ಎಸ್‌ಡಿಐನ ಜನರಲ್ ಕೌನ್ಸಿಲ್ ಸದಸ್ಯ ಡಾ ಶ್ರೀಧರ್ ಕೆ ಅವರ ಉಪಕ್ರಮವಾಗಿದ್ದು, ನಿಯಮಿತ ವ್ಯಾಯಾಮದ ಆರೋಗ್ಯ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಿದೆ ಎಂದರು.
ನವೆಂಬರ್ ತಿಂಗಳನ್ನು ವಿಶ್ವ ಮಧುಮೇಹ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ, ಮಧುಮೇಹವು ಹೆಚ್ಚುತ್ತಿರುವ ನಾಳೀಯ ರೋಗಗಳು(vascular diseases) ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಏರಿಕೆಯು ಮುಂಬರುವ ವರ್ಷಗಳಲ್ಲಿ ಹೆಚ್ಚಿದ ರೋಗ ಮತ್ತು ಮರಣ ಪ್ರಮಾಣಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.