ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ತರಕಾರಿಗಳಲ್ಲಿ ಗಡಸು ಲೋಹ, ಕೀಟನಾಶಕ: ರಾಜ್ಯ ಸರ್ಕಾರದಿಂದ ಪರಿಶೀಲನೆ ಕಾರ್ಯ
ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಗಡಸು ಲೋಹದ ಕಲಬೆರೆಕೆ ವರದಿಯಿಂದ ಎಚ್ಚೆತುಕೊಂಡಿರುವ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎ) ತರಕಾರಿಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸುವುದಾಗಿ ಹೇಳಿದೆ.
ಬೆಂಗಳೂರು: ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಗಡಸು ಲೋಹದ ಕಲಬೆರೆಕೆ ವರದಿಯಿಂದ ಎಚ್ಚೆತುಕೊಂಡಿರುವ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎ) ತರಕಾರಿಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸುವುದಾಗಿ ಹೇಳಿದೆ.
ಈ ಪರಿಶೀಲನೆ ಕಾರ್ಯದ ಇದರ ಆಧಾರದ ಮೇಲೆ ಇಲಾಖೆಯು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸುತ್ತದೆ ಎಂದು ಎಫ್‌ಎಸ್‌ಎಸ್‌ಎ ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಗರದಾದ್ಯಂತ ಮಾರಾಟವಾಗುವ ತರಕಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಲೋಹದ ಕಲಬೆರೆಕೆಯಾಗಿದೆ ಎಂಬ ಮಾಧ್ಯಮ ವರದಿಯ ನಂತರ ಈ ಆದೇಶ ಬಂದಿದೆ.
ಯಾವುದೇ ಖಾದ್ಯ ಉತ್ಪನ್ನದಲ್ಲಿ ಅನುಮತಿಸುವ ಮಟ್ಟಕ್ಕಿಂತ ಹೆಚ್ಚಿನ ಕಬ್ಬಿಣದ ಅಂಶ ಹೊಂದಿದ್ದರೆ ಅದು ಮಾನವ ಬಳಕೆಗೆ ಅಸುರಕ್ಷಿತವಾಗಿದೆ ಮತ್ತು ಅದನ್ನು ಮಾರಾಟ ಮಾಡುವ ಯಾರಾದರೂ ಆರು ತಿಂಗಳಿಂದ ಆರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ಒಂದು ಲಕ್ಷದಿಂದ ಐದು ಲಕ್ಷದವರೆಗೆ ದಂಡವನ್ನು ವಿಧಿಸಬಹುದು ಎಂದು ಆಯುಕ್ತರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ