ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆನ್'ಲೈನ್ ಕೊರಿಯರ್ ವಂಚನೆ: ಪಾರ್ಸೆಲ್'ನಲ್ಲಿ ಡ್ರಗ್ಸ್ ಇದೆ ಎಂದು ಮಹಿಳೆಗೆ ಬೆದರಿಕೆ, ರೂ.13 ಲಕ್ಷ ದೋಚಿದ ವಂಚಕರು!

ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ವಂಚಕರು ಆಕೆಯಿಂದ ರೂ.13 ಲಕ್ಷ ವಸೂಲಿ ಮಾಡಿರುವ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.

ಬೆಂಗಳೂರು: ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ವಂಚಕರು ಆಕೆಯಿಂದ ರೂ.13 ಲಕ್ಷ ವಸೂಲಿ ಮಾಡಿರುವ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.

ವಿಕ್ಟೋರಿಯಾ ಲೇಔಟ್‌ನ ಪಾಮ್‌ಗ್ರೋವ್ ರಸ್ತೆಯಲ್ಲಿ ವಾಸವಿರುವ 62 ವರ್ಷದ ಪ್ರಿಯಾ (ಹೆಸರು ಬದಲಿಸಲಾಗಿದೆ) ವಂಚನೆಗೊಳಗಾದ ಮಹಿಳೆಯಾಗಿದ್ದಾರೆ.

ಮಹಿಳೆ ಯಾವುದೇ ಪಾರ್ಸೆಲ್ ಕಳುಹಿಸದಿದ್ದರೂ, ಆಕೆಯ ಆಧಾರ್ ಕಾರ್ಡ್ ಸಂಖ್ಯೆ ಹೇಳಿ ವಂಚಕರು ಬೆದರಿಸಿದ್ದಾರೆ.

ಮುಂಬೈ ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿ ಮಹಿಳೆಗೆ ದೂರವಾಣಿ ಕರೆ ಮಾಡಿರುವ ವಂಚಕರು, ಥಾಯ್ಲೆಂಡ್'ಗೆ ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ 140 ಗ್ರಾಂ ಎಂಡಿಎಂಎ, ಎಂಟು ಪಾಸ್‌ಪೋರ್ಟ್‌ಗಳು ಮತ್ತು ಐದು ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಹಿಳೆ ನಾನು ಯಾವುದೇ ಪಾರ್ಸೆಲ್ ಕಳುಹಿಸಿದ್ದ ಎಂದು ಹೇಳಿದ್ದಾರೆ. ಆದರೆ, ವಂಚಕರು ಆಕೆಯನ್ನು ನಂಬಿಸಲು ಆಕೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಹೇಳಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಪಾರ್ಸೆಲ್ ನ್ನು ವಶಪಡಿಸಿಕೊಂಡಿದ್ದಾರೆ. ನಾವು ಕೂಡ ಮುಂಬೈ ಸೈಬರ್ ಕ್ರೈಮ್ ಪೊಲೀಸರನ್ನು ಸಂಪರ್ಕಿಸಬೇಕಾಗಿದೆ ಎಂದು ಹೇಳಿ, ಆಕೆ ಆತಂಕಕ್ಕೊಳಗಾಗುವಂತೆ ಮಾಡಿದ್ದಾರೆ. ಅಲ್ಲದೆ, ಮಹಿಳೆಗೆ ಸ್ಕೈಪ್ ಡೌನ್ ಲೋಡ್ ಮಾಡುವಂತೆ ತಿಳಿಸಿ, ವೈಯಕ್ತಿಕ ಮಾಹಿತಿಗಳನ್ನು ಹಾಕುವಂತೆ ಲಿಂಕ್ ಕಳುಹಿಸಿದ್ದಾರೆ. ಬಳಿಕ ಖಾತೆಯ ಸಂಖ್ಯೆ ನೀಡಿ, ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾರೆ.

ಇದನ್ನು ನಂಬಿದ ಮಹಿಳೆ ಮರುದಿನ ಬ್ಯಾಂಕ್'ಗೆ ಹೋಗಿ ವಂಚಕರು ನೀಡಿದ್ದ ಖಾತೆಯ ಸಂಖ್ಯೆಗೆ ಹಣ ವರ್ಗಾಯಿಸಿದ್ದಾರೆ. ಖಾತೆಗೆ ಹಣ ಬರುತ್ತಿದ್ದಂತೆಯ ವಂಚಕರು ತಮಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಾಶಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com