ಎಫ್‌ಡಿಎ ಪರೀಕ್ಷೆ ಹಗರಣ: ಪ್ರಿಯಾಂಕ್ ಖರ್ಗೆ ಮೂಗಿನಡಿಯಲ್ಲಿ ಅಕ್ರಮ ನಡೆದಿದೆ; ಬಿಜೆಪಿ ಆರೋಪ

ವಿವಿಧ ನಿಗಮ ಮಂಡಳಿಗಳ ಪ್ರಥಮ ದರ್ಜೆ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳ ಜೊತೆ ಸರ್ಕಾರ ಶಾಮೀಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್
ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್

ಬೆಂಗಳೂರು: ವಿವಿಧ ನಿಗಮ ಮಂಡಳಿಗಳ ಪ್ರಥಮ ದರ್ಜೆ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳ ಜೊತೆ ಸರ್ಕಾರ ಶಾಮೀಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು, ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಜೊತೆಗೆ ಪ್ರಿಯಾಂಕ್ ಖರ್ಗೆಯೂ ಶಾಮೀಲಾಗಿದ್ದಾರೆಂದು ಆರೋಪಿಸಿದ್ದಾರೆ.

ರುದ್ರಗೌಡ ಪಾಟೀಲ್​​ ಜಮೀನು​ ಮೇಲೆ ಬಂದು ಮತ್ತೆ ಅಕ್ರಮವೆಸಗಿದ್ದಾನೆ. ಪಾಟೀಲ್ ಪರೀಕ್ಷಾ ಅಕ್ರಮ ನಡೆಸುವುದನ್ನು ಈತ ಹವ್ಯಾಸ‌ ಮಾಡಿಕೊಂಡಿದ್ದಾನೆ. ಅಕ್ರಮದ ಮಾಹಿತಿ ಬಂತು ಎಂದು ಪರೀಕ್ಷೆ ತಡೆದಿರುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರಿಗೇನೂ ಮಾಹಿತಿ ಬಂದಿಲ್ಲ. ಆದರೆ, ರುದ್ರಗೌಡ ಪಾಟೀಲ್​ನ ಅಕ್ರಮಕ್ಕೆ ಸರ್ಕಾರದ ಕುಮ್ಮಕ್ಕು, ಸಹಕಾರ ಇದೆ. ಈ ಸರ್ಕಾರದಲ್ಲಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೋಸ ಆಗುತ್ತಿದೆ. ಕೆಇಎ ಪರೀಕ್ಷಾ ಅಕ್ರಮ ಹೊಣೆಯನ್ನು ಸಚಿವರೇ ಹೊತ್ತುಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್.ರವಿಕುಮಾರ್ ಅವರು ಮಾತನಾಡಿ, ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.

ಪಾಟೀಲ್ ಸೇರಿದಂತೆ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

‘ಅಧಿಕಾರಿಗಳು, ಸಚಿವರ ಸಹಕಾರವಿಲ್ಲದೆ ಅಕ್ರಮ ನಡೆಯುವುದಿಲ್ಲ, ಎಫ್‌ಡಿಎ ಪರೀಕ್ಷೆಯಲ್ಲಿ 20 ಮಂದಿಗೆ ಕೆಇಎ ಒಂದು ಗಂಟೆ ಹೆಚ್ಚುವರಿ ಸಮಯ ನೀಡಿದ್ದು ಏಕೆ? ಇದೂವರೆಗೆ ಒಂಬತ್ತು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಪಾಟೀಲ್ ಅವರನ್ನು ಇನ್ನೂ ಏಕೆ ಎತ್ತಂಗಡಿ ಮಾಡಿಲ್ಲ? ಅದಕ್ಕೆ ಕಾರಣ ಅವರು ನಿಮ್ಮ ಪಕ್ಷದ ಕಾರ್ಯಕರ್ತನಾಗಿರುವುದು ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com