ಬಿಬಿಎಂಪಿ ಅಗ್ನಿ ಅವಘಡ: ತಾಂತ್ರಿಕ ತನಿಖಾ ವರದಿ ಸಲ್ಲಿಕೆ 15 ದಿನ ವಿಳಂಬ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಅವರಣದಲ್ಲಿನ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್ ಅಗ್ನಿ ಅವಘಡದ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ತಾಂತ್ರಿಕ ತನಿಖಾ ಸಮಿತಿ ವರದಿ ಸಲ್ಲಿಸುವುದು 15 ದಿನ ತಡವಾಗಲಿದೆ ಎಂದು ಹೇಳಲಾಗಿದೆ.
Published: 01st September 2023 08:11 AM | Last Updated: 01st September 2023 08:47 PM | A+A A-

ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಅವರಣದಲ್ಲಿನ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್ ಅಗ್ನಿ ಅವಘಡದ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ತಾಂತ್ರಿಕ ತನಿಖಾ ಸಮಿತಿ ವರದಿ ಸಲ್ಲಿಸುವುದು 15 ದಿನ ತಡವಾಗಲಿದೆ ಎಂದು ಹೇಳಲಾಗಿದೆ.
ತನಿಖಾ ಸಮಿತಿಯ ಮುಖ್ಯಸ್ಥ ಬಿ.ಎಸ್.ಪ್ರಹ್ಲಾದ್ ಪ್ರಕಾರ, ಆಗಸ್ಟ್ 31 ರೊಳಗೆ ವರದಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವರದಿ ಸಲ್ಲಿಕೆ ಸುಮಾರು 15ದಿನ ತಡವಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: BBMP ಅಗ್ನಿ ಅವಘಡ: ಮುಖ್ಯ ಎಂಜಿನಿಯರ್ ಸಾವು; 304ಎ ಪ್ರಕರಣ ದಾಖಲಿಸಿದ ಪೊಲೀಸರು!
ಈ ಬಗ್ಗೆ ಮಾಹಿತಿ ನೀಡಿರುವ ಬಿಎಸ್ ಪ್ರಹ್ಲಾದ್ ಅವರು, "ಬಿಬಿಎಂಪಿಯಲ್ಲಿ ಕೆಲವು ಕಾರ್ಯವಿಧಾನದ ವಿಳಂಬ ಮತ್ತು ಇತರ ಜವಾಬ್ದಾರಿಗಳಿಂದ, ಸಮಯಕ್ಕೆ ವರದಿ ಸಲ್ಲಿಸಲು ಸಾಧ್ಯವಾಗಲಿಲ್ಲ, ಈಗ ಆಂತರಿಕ ಹದಿನೈದು ದಿನದೊಳಗೆ ತನಿಖಾ ವರದಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಅಂತೆಯೇ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿಗಳು ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮತ್ತು ಕಾಂಗ್ರೆಸ್ ಸರ್ಕಾರದ 100 ದಿನಗಳ ಆಯೋಜನೆಯಲ್ಲಿ ನಿರತವಾಗಿವೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಮುಖ್ಯ ಎಂಜಿನಿಯರ್ ಪ್ರಹ್ಲಾದ್'ಗೆ ಮತ್ತೊಮ್ಮೆ ನೋಟಿಸ್ ಜಾರಿಗೆ ಪೊಲೀಸರು ಮುಂದು!
ಮೂಲಗಳ ಪ್ರಕಾರ, ಆಂತರಿಕ ತನಿಖೆಯು ಆಗಸ್ಟ್ 11 ರಂದು ಅಗ್ನಿ ಅವಘಡಕ್ಕೆ ಏನು ಕಾರಣವಾಯಿತು?, ಸಂಗ್ರಹಿಸಲಾದ ರಾಸಾಯನಿಕಗಳು ಮತ್ತು ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಗಳ ಸುತ್ತ ತನಿಖೆ ಸುತ್ತುತ್ತದೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ತಂಡ ಪರಿಶೀಲಿಸಲಿದೆ. ಹೆಚ್ಚು ಸುಡುವ ರಾಸಾಯನಿಕವಾದ ಬೆಂಜೀನ್ ಸೋರಿಕೆಯಾಗಿದ್ದು, ಇದೇ ಬೆಂಕಿ ಅವಘಡಕ್ಕೆ ಕಾರಣವಾಗಿತ್ತೇ? ಮತ್ತು ಬಿಟುಮೆನ್ ಪರೀಕ್ಷೆಯ ಸಮಯದಲ್ಲಿ ಕಿಡಿಗಳು ಸ್ಫೋಟಕ್ಕೆ ಕಾರಣವಾಗಿತ್ತು ಎಂದು ಅಧಿಕಾರಿಗಳು ನಂಬಿದ್ದಾರೆ ಎನ್ನಲಾಗಿದೆ.