ಲೋಗೋ ಜೊತೆಗೆ ವಸತಿ ಯೋಜನೆಗಳ ಮಾಹಿತಿ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸಚಿವ ಜಮೀರ್ ಅಹ್ಮದ್ ಸೂಚನೆ

ಬಡವರಿಗೆ ವಿತರಿಸುವ ಮನೆ ಅಥವಾ ನಿವೇಶನಗಳ ಮುಂದೆ ವಸತಿ ಯೋಜನೆಯ ಮಾಹಿತಿ ಫಲಕಗಳನ್ನು ಲೋಗೋದೊಂದಿಗೆ ಹಾಕುವಂತೆ ವಸತಿ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದರು. 
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್
Updated on

ಬೆಂಗಳೂರು: ಬಡವರಿಗೆ ವಿತರಿಸುವ ಮನೆ ಅಥವಾ ನಿವೇಶನಗಳ ಮುಂದೆ ವಸತಿ ಯೋಜನೆಯ ಮಾಹಿತಿ ಫಲಕಗಳನ್ನು ಲೋಗೋದೊಂದಿಗೆ ಹಾಕುವಂತೆ ವಸತಿ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದರು. 

ಬೆಂಗಳೂರಿನಲ್ಲಿ ಗುರುವಾರ ನಡೆದ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ನಿವೇಶನ ಅಥವಾ ಮನೆಯ ಮುಂದೆ ಅಳವಡಿಸುವ ಮಾಹಿತಿ ಫಲಕವು ಯೋಜನೆಯ ಹೆಸರು, ಮಂಜೂರು ಮಾಡಿದ ವರ್ಷ ಮತ್ತು ಫಲಾನುಭವಿಯ ಹೆಸರು ಮುಂತಾದ ವಿವರಗಳನ್ನು ಹೊಂದಿರಬೇಕು ಎಂದರು.

ಫಲಕವು ಮಂಡಳಿ ಅಥವಾ ನಿಗಮದ ಲೋಗೋವನ್ನು ಸಹ ಹೊಂದಿರಬೇಕು. ವಸತಿ ಇಲಾಖೆಯಿಂದ ಬಡವರಿಗೆ ಹಂಚಿಕೆಯಾಗುವ ಮನೆ ಅಥವಾ ನಿವೇಶನಗಳ ಸ್ಪಷ್ಟ ಗುರುತಿಗಾಗಿ ಶಾಶ್ವತ ಫಲಕಗಳನ್ನು ಹಾಕುವ ಅಗತ್ಯವಿದೆ. ಇದು ಒಟ್ಟು ಕುಟುಂಬಗಳ ಸಂಖ್ಯೆ ಮತ್ತು ಅವರಿಗೆ ಆಶ್ರಯವನ್ನು ಒದಗಿಸಿದ ಯೋಜನೆಯ ಹೆಸರಿನ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಎಂದು ಹೇಳಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಯೋಜನೆಗಳು, ವಿತರಿಸಲಾದ ಒಟ್ಟು ಮನೆಗಳ ಸಂಖ್ಯೆ ಮತ್ತು ಯೋಜನೆಗಳ ಪ್ರಗತಿಯ ವರದಿಯನ್ನು ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೊಳೆಗೇರಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ವಸತಿ ಯೋಜನೆಗಳ ಅನುಷ್ಠಾನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸೂಚನೆ ನೀಡಲಾಯಿತು. ಸೂರ್ಯನಗರದ ನಾಲ್ಕನೇ ಹಂತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಕ್ರೀಡಾಂಗಣ ಹಾಗೂ ಮಾದರಿ ಶಾಲೆ ನಿರ್ಮಾಣದ ಬಗ್ಗೆಯೂ ಚರ್ಚಿಸಲಾಯಿತು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಮುಖ್ಯ ಎಂಜಿನಿಯರ್ ಬಾಲರಾಜು, ಕರ್ನಾಟಕ ಗೃಹ ಮಂಡಳಿ ಆಯುಕ್ತೆ ಕವಿತಾ ಮನ್ನಿಕೇರಿ, ಮುಖ್ಯ ಎಂಜಿನಿಯರ್ ಶರಣಪ್ಪ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com