ಮತ್ತೆ ಸುದ್ದಿಯಾದ ಬೆಂಗಳೂರು ಟ್ರಾಫಿಕ್ ಜಾಮ್; ಟ್ರಾಫಿಕ್ ಜ್ಯಾಮ್ ನಲ್ಲೇ ತರಕಾರಿ ಸಿಪ್ಪೆ ಸುಲಿದ ಮಹಿಳೆ: ಫೋಟೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಕಿರಿಕಿರಿ ಮತ್ತೊಮ್ಮೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಬೆಂಗಳೂರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ತರಕಾರಿ ಸಿಪ್ಪೆ ಸುಲಿದ ಮಹಿಳೆಯೊಬ್ಬರ ಫೋಟೋವೊಂದು ವ್ಯಾಪಕ ವೈರಲ್ ಆಗಿದೆ.
Published: 18th September 2023 02:05 PM | Last Updated: 18th September 2023 02:05 PM | A+A A-

ಮತ್ತೆ ಸುದ್ದಿಯಾದ ಬೆಂಗಳೂರು ಟ್ರಾಫಿಕ್ ಜಾಮ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಕಿರಿಕಿರಿ ಮತ್ತೊಮ್ಮೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಬೆಂಗಳೂರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ತರಕಾರಿ ಸಿಪ್ಪೆ ಸುಲಿದ ಮಹಿಳೆಯೊಬ್ಬರ ಫೋಟೋವೊಂದು ವ್ಯಾಪಕ ವೈರಲ್ ಆಗಿದೆ.
ಬೆಂಗಳೂರಿನ ಈ ಟ್ರಾಫಿಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತಿದ್ದು, ಇತ್ತೀಚೆಗೆ ಟ್ರಾಫಿಕ್ನಲ್ಲಿ ಮಹಿಳೆಯೊಬ್ಬರು ತಮ್ಮ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿರುವುದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಸಾರಿಗೆ ಸಿಬ್ಬಂದಿಯೊಬ್ಬರು ಟ್ರಾಫಿಕ್ ಜಾಮ್ ನಲ್ಲೇ ಊಟ ತಿಂದು ಮುಗಿಸಿದ್ದರು. ಈ ವಿಡಿಯೋ ಕೂಡ ವ್ಯಾಪಕ ವೈರಲ್ ಅಗಿತ್ತು. ಇದೀಗ ಅದೇ ರೀತಿಯಾಗಿ ಮಹಿಳೆಯೊಬ್ಬರು ಟ್ರಾಫಿಕ್ನಲ್ಲಿ ಸಿಲುಕಿ ತರಕಾರಿ ಸುಲಿದಿದ್ದಾರೆ.
ಇದನ್ನೂ ಓದಿ: ವರ್ಲ್ಡ್ ಫೇಮಸ್ ಆದ ಬೆಂಗಳೂರು ಟ್ರಾಫಿಕ್ ಜಾಮ್; ಬಸ್ ನಲ್ಲೇ ಊಟ ಮುಗಿಸಿದ BMTC ಚಾಲಕ, ವಿಡಿಯೋ ವೈರಲ್!
ಪ್ರಿಯಾ ಎಂಬ ಟ್ವಿಟರ್ ಬಳಕೆದಾರರೊಬ್ಬರು, ಟ್ರಾಫಿಕ್ನಲ್ಲಿ ಸಿಲುಕಿದ್ದು, ಕಾರಿನಲ್ಲಿ ತರಕಾರಿಗಳ ಸಿಪ್ಪೆ ಸುಲಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 'ದಟ್ಟಣೆಯ ಟ್ರಾಫಿಕ್ ಸಮಯದಲ್ಲಿ ನಾವು ಉತ್ಪಾದಕರಾಗಿರುವುದು' ಎಂದು ಬರೆದುಕೊಂಡಿದ್ದಾರೆ.
Being productive during peak traffic hours pic.twitter.com/HxNJoveHwS
— Priya (@malllige) September 16, 2023
ಪ್ರಿಯಾ ಅವರು ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸುಮಾರು 50,000 ವೀಕ್ಷಣೆ ಮತ್ತು ಸುಮಾರು 100 ಕಾಮೆಂಟ್ಗಳು ಬಂದಿವೆ. ಬೆಂಗಳೂರಿನ ದಟ್ಟಣೆಯ ಟ್ರಾಫಿಕ್ ಪ್ರಯಾಣಿಸುವಾಗ ಕಲಿಯುವುದು, ಸಾಧಿಸುವುದು ಮತ್ತು ಬೆಳೆಯಲು ತುಂಬಾ ಇದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ತಪ್ಪಾಗಿ ಯೂಟರ್ನ್: ಬೆಂಗಳೂರಿನಲ್ಲಿ ಶಾಲಾ ಬಸ್ ಚಾಲಕನಿಗೆ ಟ್ರಾಫಿಕ್ ಪೊಲೀಸ್ ದಂಡ.... ಫೋಟೋ ವೈರಲ್
ಓರ್ವ ಬಳಕೆದಾರರು, ಹಾಹಾ.. ಮೊಬೈಲ್ ಹೈಡ್ರೋಪೋನಿಕ್ಸ್ ಫಾರ್ಮ್ಗಳ ಕಲ್ಪನೆಯೊಂದಿಗೆ ಸ್ಟಾರ್ಟ್ ಅಪ್ ಕಂಪಗಳು ಬಂದರೂ ನನಗೆ ಆಶ್ಚರ್ಯವಾಗುವುದಿಲ್ಲ. ಬೆಂಗಳೂರಿನ ಈ ಟ್ರಾಫಿಕ್ ನಡುವೆ ಸಿಲ್ಕ್ ಬೋರ್ಡ್ನಿಂದ ಇಂದಿರಾನಗರವನ್ನು ತಲಪುವಷ್ಟರಲ್ಲಿ ಸಸ್ಯಗಳು ಬೆಳೆಯುತ್ತವೆ ಎಂದಿದ್ದಾರೆ. ಸಮಯದ ಉಳಿತಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ತರಕಾರಿಗಳ ಸಿಪ್ಪೆ ಸುಲಿಯುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಮತ್ತೋರ್ವ ಬಳಕೆದಾರರು ತಿಳಿಸಿದ್ದಾರೆ.
ಕ್ಲಾಸಿಕ್ ಮುಂಬೈ ರೈಲು ಚಟುವಟಿಕೆಗಳು ಅಂತಿಮವಾಗಿ ಬೆಂಗಳೂರಿಗೆ ಬಂದಿದ್ದು, ಇದು ಬೆಂಗಳೂರಿನ ಟ್ರಾಫಿಕ್ಗೆ ಸಂಪೂರ್ಣ ಅರ್ಥವನ್ನು ನೀಡುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ: ಸುಗಮ ಸಂಚಾರ, ಪಾದಚಾರಿಗಳ ಸುರಕ್ಷತೆಗಾಗಿ 'ಸುರಕ್ಷಾ 75' ಆರಂಭಿಸಿದ ಬಿಬಿಎಂಪಿ
ಅಂದಹಾಗೆ ವರದಿಯೊಂದರ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವುದು ಲಂಡನ್ನಲ್ಲಾದರೆ, ಅದರ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ ಎನ್ನಲಾಗುತ್ತಿದೆ.