ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತನ್ನ ಗೆಳತಿಯೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿಸುತ್ತಿದ್ದಾಗ ಅಲ್ಲಿಗೆ ಬಂದ ಕೆಲವರು ನನ್ನನ್ನು ಕಿಡ್ನಾಪ್ ಮಾಡಿದ್ದರು ಎಂದು 27 ವರ್ಷದ ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ.
ಚಂದ್ರಾ ಲೇಔಟ್ ಬಳಿಯ ಪಿಜಿ ವಸತಿ ನಿಲಯದ ನಿವಾಸಿ ಜೆ.ಪಿ. ದರ್ಶನ್ ಈ ಹಿಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ.
ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ತನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ಅವರನ್ನು ಜಯನಗರ 9 ನೇ ಬ್ಲಾಕ್‌ನಲ್ಲಿ ಬಿಡುಗಡೆ ಮಾಡುವ ಮೊದಲು ನಾಲ್ಕು ಗಂಟೆಗಳ ಕಾಲ ತಮ್ಮ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಯುವತಿಯ ಸಹೋದರನ ಸ್ನೇಹಿತರಾಗಿರುವ ಆರೋಪಿಗಳು ಆಕೆಯಿಂದ ದೂರವಿರುವಂತೆ ಬೆದರಿಕೆ ಹಾಕಲು ದರ್ಶನನನ್ನು ಅಪಹರಿಸಿದ್ದಾರೆ.
ಘಟನೆ ಭಾನುವಾರ ನಡೆದಿದೆ. ಕೆಎಸ್‌ಆರ್‌ಟಿಸಿ ಟರ್ಮಿನಲ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 4 ರಲ್ಲಿ ದರ್ಶನ್ ತನ್ನ ಗೆಳತಿಯೊಂದಿಗೆ ಕುಳಿತಿದ್ದಾಗ ಆರೋಪಿಗಳು ಮಧ್ಯಾಹ್ನ 3.30 ರ ಸುಮಾರಿಗೆ ಅವರನ್ನು ಅಪಹರಿಸಿದ್ದಾರೆ. ರಾತ್ರಿ 7.30ರ ಸುಮಾರಿಗೆ ಜಯನಗರ 9ನೇ ಬ್ಲಾಕ್‌ನ ರಾಗಿಗುಡ್ಡ ಬಳಿ ಆತನನ್ನು ಡ್ರಾಪ್ ಮಾಡಿ ತಂಡ ಪರಾರಿಯಾಗಿದ್ದಾರೆ, ದರ್ಶನ್ ಸೋಮವಾರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸಕಲೇಶಪುರದವರಾದ ದರ್ಶನ್ ಅವರು ಕಳೆದ ಎಂಟು ವರ್ಷಗಳಿಂದ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರು ಸುಮಾರು ಎರಡು ತಿಂಗಳ ಹಿಂದೆ ಕೆಲಸ ತ್ಯಜಿಸಿದರು. ಕಳೆದ ಮೂರು ವರ್ಷಗಳಿಂದ ಸೋಮವಾರಪೇಟೆಯ ಹುಡುಗಿಯೊಬ್ಬಳನ್ನು ದರ್ಶನ್ ಪ್ರೀತಿಸುತ್ತಿದ್ದರು.
ಆತ ಪ್ರೀತಿಸುತ್ತಿದ್ದ ಯುವತಿ ಕೂಡ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದರು. ನಂತರ ಆಕೆಯನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆದು ಭಿನ್ನಾಭಿಪ್ರಾಯ ಬಗೆಹರಿಸುತ್ತಿದ್ದರು.
ಈ ವೇಳೆ ಅಪಹರಣ ಮಾಡಿದ ಬಳಿಕ ಆರೋಪಿಗಳು ವಿಲ್ಸನ್ ಗಾರ್ಡನ್ ನ ಕೊಠಡಿಗೆ ಕರೆದೊಯ್ದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ಕು ಗಂಟೆಗಳ ಬಂಧನದ ನಂತರ ಬಿಡುಗಡೆ ಮಾಡಿದ ಆರೋಪಿಗಳು ಆತನಿಗೆ ಬೆದರಿಕೆ ಹಾಕಿದ ನಂತರ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ. ಅವರು ಯುವತಿಯ ಸಹೋದರನ ಸ್ನೇಹಿತರು. ದರ್ಶನನನ್ನು ಯುವತಿಯಿಂದ ದೂರವಿಡುವಂತೆ ಎಚ್ಚರಿಸುವ ಸಲುವಾಗಿ ಸಹೋದರನ ಆದೇಶದ ಮೇರೆಗೆ ಆರೋಪಿಗಳು ಅಪಹರಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
Advertisement