ಹೆದ್ದಾರಿಗಳಲ್ಲಿ ನಿಗದಿತ ವೇಗದ ಮಿತಿ ಕಟ್ಟುನಿಟ್ಟಾಗಿ ಪಾಲಿಸಿ: ಪೊಲೀಸ್ ಸಿಬ್ಬಂದಿಗೆ ಅಲೋಕ್ ಕುಮಾರ್ ಸೂಚನೆ
ಹೆದ್ದಾರಿಗಳಲ್ಲಿ ಪೊಲೀಸ್ ವಾಹನಗಳೇ ನಿಯಮ ಉಲ್ಲಂಘಿಸುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಎಲ್ಲಾ ವರ್ಗದ ಪೊಲೀಸ್ ವಾಹನಗಳು ನಿಗದಿತ ವೇಗದ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.
Published: 21st September 2023 09:58 AM | Last Updated: 21st September 2023 08:49 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹೆದ್ದಾರಿಗಳಲ್ಲಿ ಪೊಲೀಸ್ ವಾಹನಗಳೇ ನಿಯಮ ಉಲ್ಲಂಘಿಸುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಎಲ್ಲಾ ವರ್ಗದ ಪೊಲೀಸ್ ವಾಹನಗಳು ನಿಗದಿತ ವೇಗದ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.
ಈ ಸಂಬಂಧ ಅಲೋಕ್ ಕುಮಾರ್ ಅವರು ಮಂಗಳವಾರ ಸುತ್ತೋಲೆಯನ್ನು ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಗರಿಷ್ಠ ಚಾಲನಾ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ಈ ಹೆದ್ದಾರಿಗಳಲ್ಲಿನ ಎಲ್ಲಾ ವಾಹನಗಳನ್ನು ಅವುಗಳಿಗೆ ನಿಗದಿಪಡಿಸಿದ ಗರಿಷ್ಠ ವೇಗದ ಮಿತಿಗಿಂತ ಕಡಿಮೆ ಚಾಲನೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೈವೇನಲ್ಲಿ ಪೊಲೀಸರ ಕ್ರಮ ಯಶಸ್ವಿ: ಅಪಘಾತ, ಸಾವುಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ!
"ಆದಾಗ್ಯೂ, ಕೆಲವೊಮ್ಮೆ ವಿವಿಧ ವರ್ಗದ ಪೊಲೀಸ್ ವಾಹನಗಳನ್ನು ಗರಿಷ್ಠ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಓಡಾಡುತ್ತಿರುವುದು ವರದಿಯಾಗುತ್ತಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಘಟಕದ ಅಧಿಕಾರಿಗಳು ತಮ್ಮ ಘಟಕಗಳಲ್ಲಿನ ಪೊಲೀಸ್ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳಿಗೆ ನಿಗದಿಪಡಿಸಿದ ವೇಗದ ಮಿತಿಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಈ ಹೆದ್ದಾರಿಗಳಲ್ಲಿ ನಿಗದಿತ ವೇಗದ ಮಿತಿಯನ್ನು ಮೀರಿ ಯಾವುದೇ ವರ್ಗದ ಪೊಲೀಸ್ ವಾಹನಗಳು ವೇಗವಾಗಿ ಚಲಿಸುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಎಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.