ಬೆಂಗಳೂರು: ಲಿವ್ ಇನ್ ಗೆಳತಿಗೆ ಮತಾಂತರವಾಗಲು, ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ, ಟೆಕ್ಕಿ ಬಂಧನ
ವಿವಾಹವಾಗುವುದಾಗಿ ನಂಬಿಸಿ ಲಿವ್ ಇನ್ ಗೆಳತಿಗೆ ಕಿರುಕುಳ ನೀಡುತ್ತಿದ ಶ್ರೀನಗರ ಮೂಲದ ಬೆಂಗಳೂರಿನ 32 ವರ್ಷದ ಟೆಕ್ಕಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
Published: 22nd September 2023 07:04 PM | Last Updated: 22nd September 2023 07:42 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಲಿವ್ ಇನ್ ಗೆಳತಿಗೆ ಕಿರುಕುಳ ನೀಡುತ್ತಿದ ಶ್ರೀನಗರ ಮೂಲದ ಬೆಂಗಳೂರಿನ 32 ವರ್ಷದ ಟೆಕ್ಕಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನೊಂದಿಗೆ ಇದ್ದ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಮತಾಂತರವಾಗಲು, ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮೊಗಿಲ್ ಅಶ್ರಫ್ ಬೇಗ್ ಒತ್ತಾಯಿಸುತ್ತಿದ್ದ. ಈತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂತ್ರಸ್ತೆಗೆ ಈತ 2018 ರಿಂದಲೂ ಪರಿಚಯವಿದ್ದಾನೆ ಹಾಗೂ ಇಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಮಹಿಳೆ ಸಹ ಟೆಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಜೋಡಿ ಮದುವೆಯಾಗಲು ಯೋಜಿಸಿದ್ದರು. ಆದರೆ ಅಶ್ರಫ್ ಬೇಗ್ ಆಕೆಯನ್ನು ಇಸ್ಲಾಮ್ ಗೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೇ ವಿವಾಹವಾಗುವುದಾಗಿ ನಂಬಿಸಿ ತನ್ನನ್ನು ಬಳಸಿಕೊಂಡಿದ್ದು, ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೇ ಬೇಗ್ ನ ಸಹೋದರ ತನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ, ನಾನು ಲವ್ ಜಿಹಾದ್ ನ ಸಂತ್ರಸ್ತೆ, ನನ್ನ ಜೀವ ಅಪಾಯದಲ್ಲಿದೆ ಎಂದು ಟ್ವಿಟರ್ ನಲ್ಲಿ ಬರೆದು ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದು, ಮಹಿಳೆ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕ-ಯುವತಿ ಮೇಲೆ ಹಲ್ಲೆ: ನೈತಿಕ ಪೊಲೀಸ್ಗಿರಿ ಆರೋಪ, ಪ್ರಕರಣ ದಾಖಲು
ಹೆಬ್ಬಗೋಡಿ ಪೊಲೀಸ್ ಠಾಣೆ ಅಧಿಕಾರಿಗಳು 376 (ಅತ್ಯಾಚಾರ) 377 (ಅಸಹಜ ಅಪರಾಧಗಳು) 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಪತ್ತೆ ಮಾಡಿ ತನಿಖೆ ನಡೆಸಲು ಜಮ್ಮು-ಕಾಶ್ಮೀರಕ್ಕೆ ಬೆಂಗಳೂರು ಪೊಲೀಸ್ ತಂಡ ತೆರಳಿ ಆತನನ್ನು ಬೆಂಗಳೂರಿಗೆ ಕರೆತಂದು ಕೋರ್ಟ್ ಎದುರು ಹಾಜರು ಪಡಿಸಲಾಗಿದೆ. 2ದಿನಗಳ ಪೊಲೀಸ್ ಕಸ್ಟಡಿಗೆ ಕೋರ್ಟ್ ಆದೇಶಿಸಿದೆ.