ಬೆಂಗಳೂರು: ಲಿವ್ ಇನ್ ಪಾರ್ಟ್ನರ್‌ ಕಿರುಕುಳಕ್ಕೆ ಬೇಸತ್ತು 36 ವರ್ಷದ ಕೆಮಿಕಲ್ ಇಂಜಿನಿಯರ್ ಆತ್ಮಹತ್ಯೆ

ಲಿವ್ ಇನ್ ಪಾರ್ಟ್ನರ್‌ ಕಿರುಕುಳ ತಾಳಲಾರದೆ 36 ವರ್ಷದ ಕೆಮಿಕಲ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಕೆಆರ್ ಕವಿತಾ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ನಾಮಕ್ಕಲ್ ಮೂಲದವರು. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಿವ್ ಇನ್ ಪಾರ್ಟ್ನರ್‌ ಕಿರುಕುಳ ತಾಳಲಾರದೆ 36 ವರ್ಷದ ಕೆಮಿಕಲ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಕೆಆರ್ ಕವಿತಾ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ನಾಮಕ್ಕಲ್ ಮೂಲದವರು. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತೆ ಧರ್ಮಪುರಿಯ ಹರೂರು ಮೂಲದ ಐಟಿ ವೃತ್ತಿಪರರಾದ 34 ವರ್ಷದ ಸೆಲ್ಲಪ್ಪನ್ ಅವರೊಂದಿಗೆ ವಾಸಿಸುತ್ತಿದ್ದರು. ಸಂತ್ರಸ್ತೆಯು ಮೊದಲ ಪತಿಯಿಂದ ವಿಚ್ಛೇದನ ಪಡೆದು ವರ್ತೂರಿನ ಗುಂಜೂರಪಾಳ್ಯದಲ್ಲಿ ಆತನೊಂದಿಗೆ ವಾಸವಿದ್ದರು.

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತಮಿಳುನಾಡಿನಲ್ಲಿರುವ ಆಕೆಯ ಕುಟುಂಬಕ್ಕೆ ಆರೋಪಿಯೇ ಕರೆ ಮಾಡಿ ಆತ್ಮಹತ್ಯೆಯ ವಿಚಾರ ತಿಳಿಸಿದ್ದಾನೆ. ಸಂತ್ರಸ್ತೆಯ ಸಹೋದರಿ ನಗರಕ್ಕೆ ಬಂದು ಸೆಲ್ಲಪ್ಪನ್ ವಿರುದ್ಧ ದೂರು ದಾಖಲಿಸಿದ್ದಾರೆ. ವರ್ತೂರು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ಸಹೋದರ ಗೌತಮ್ ತಮ್ಮ ಸಹೋದರಿಯ ವಿಧಿವಿಧಾನಗಳನ್ನು ಮಾಡುತ್ತಿದ್ದಾರೆ. ತಮ್ಮ ಸಹೋದರಿಯನ್ನೇ ಕಳೆದುಕೊಂಡ ಮೇಲೆ ಘಟನೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದು, ಆರೋಪಿ ಸೆಲ್ಲಪ್ಪನನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಖಚಿತಪಡಿಸಿದರು.

ಸಾಂದರ್ಭಿಕ ಚಿತ್ರ
ಕೋಲಾರ: ಕೌಟುಂಬಿಕ ಕಲಹ; ಇಬ್ಬರು ಗಂಡು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆ!

ಕವಿತಾ ಈ ಹಿಂದೆ 2013ರಲ್ಲಿ ತಮಿಳುನಾಡಿನ ನಟರಾಜ್ ಎಂಬುವವರನ್ನು ಮದುವೆಯಾಗಿದ್ದರು. ಬಳಿಕ 2021ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ನಂತರ ಕೊಯಮತ್ತೂರಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವಾಗ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸೆಲ್ಲಪ್ಪನ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಇಬ್ಬರೂ ಪ್ರೀತಿಸುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ವರ್ತೂರಿನಲ್ಲಿ ಸೆಲ್ಲಪ್ಪನ ಜೊತೆ ವಾಸಿಸುತ್ತಿದ್ದರು.

'ಸಂತ್ರಸ್ತೆ ತನ್ನ ಸಹೋದರಿ ವಸುಮತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದಾಗ ಆರೋಪಿಯಿಂದಾಗುತ್ತಿರುವ ಕಿರುಕುಳ ಮತ್ತು ಚಿತ್ರಹಿಂಸೆಯ ಬಗ್ಗೆ ಹೇಳುತ್ತಿದ್ದಳು. ಜಗಳದ ವೇಳೆ ಆಕೆಯ ಮುಖದ ಮೇಲೆ ಆತ ಉಗುಳುತ್ತಿದ್ದ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಆರೋಪಿ ವಸುಮತಿಗೆ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದ ಎನ್ನಲಾಗಿದೆ. ಸಂತ್ರಸ್ತೆ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಲಿವ್-ಇನ್-ಪಾರ್ಟನರ್ ಜೊತೆ ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ!

ಸಂತ್ರಸ್ತೆ ಮತ್ತು ಆರೋಪಿ ಏಪ್ರಿಲ್ 10 ರಂದು ಮದುವೆಯಾಗಲು ನಿರ್ಧರಿಸಿದ್ದರು ಮತ್ತು ಮದುವೆಗೆ ತನ್ನ ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದಳು. ಆದರೆ, ಆರೋಪಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com