ಚುನಾವಣಾ ಅಕ್ರಮಗಳ ಮೇಲೆ ಕಣ್ಣು: ರಾಜ್ಯದಲ್ಲಿ ಈವರೆಗೂ 3.13 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ!

ಚುನಾವಣಾ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ನಗದು ವಹಿವಾಟು, ಮದ್ಯ ಮಾರಾಟ, ಉಚಿತ ಉಡುಗೊರೆ ಹಾಗೂ ಮತ್ತಿತರ ಅಕ್ರಮ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳು ಮಾದಕ ದ್ರವ್ಯ ಪ್ರಕರಣಗಳನ್ನು ನಿಭಾಯಿಸಲು ವಿಭಿನ್ನ ವಿಧಾನವನ್ನು ಅನುಸರಿಸುತ್ತಿದ್ದು, ರಾಜ್ಯದಲ್ಲಿ 3.13 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಡಿದ್ದಾರೆ.
ಡ್ರಗ್ಸ್
ಡ್ರಗ್ಸ್

ಬೆಂಗಳೂರು; ಚುನಾವಣಾ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ನಗದು ವಹಿವಾಟು, ಮದ್ಯ ಮಾರಾಟ, ಉಚಿತ ಉಡುಗೊರೆ ಹಾಗೂ ಮತ್ತಿತರ ಅಕ್ರಮ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳು ಮಾದಕ ದ್ರವ್ಯ ಪ್ರಕರಣಗಳನ್ನು ನಿಭಾಯಿಸಲು ವಿಭಿನ್ನ ವಿಧಾನವನ್ನು ಅನುಸರಿಸುತ್ತಿದ್ದು, ರಾಜ್ಯದಲ್ಲಿ 3.13 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಡಿದ್ದಾರೆ.

ಮಾದಕ ದ್ರವ್ಯ ಮಾರಾಟ, ವಿತರಣೆ ನಿಲ್ಲಿಸಲು ಚುನಾವಣಾ ಆಯೋಗ ಇತ್ತೀಚೆಗಷ್ಟೇ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿತು.

ಮದ್ಯ ಹಾಗೂ ಇತರೆ ವಸ್ತುಗಳು ಪತ್ತೆ ಮಾಡಿ, ವಶಕ್ಕೆ ಪಡೆಯುವುದು ಸುಲಭ. ಏಕೆಂದರೆ, ಇವುಗಳ ಗಾತ್ರ ದೊಡ್ಡದಾಗಿರುತ್ತದೆ. ಆದರೆ, ಡ್ರಗ್ಸ್ ಪತ್ತೆ ಮಾಡುವುದು ಕಷ್ಟಕರವಾಗಿರುತ್ತದೆ. ಡ್ರಗ್ಸ್ ಗಾತ್ರ ಚಿಕ್ಕದ್ದಾಗಿದ್ದರೂ ಇದರ ಮೌಲ್ಯ ಕೋಟ್ಯಾಂತರ ರೂಪಾಯಿ ಆಗಿರುತ್ತದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ವಿಭಿನ್ನ ವಿಧಾನಗಳ ಅಗತ್ಯವಿರುತ್ತದೆ.

ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ವಶಕ್ಕೆ ಪಡಯುತ್ತಿದ್ದು, ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಾರೆ. ಪೊಲೀಸರು ಈಗಾಗಲೇ ನಮಗೆ ಡ್ರಗ್ಸ್ ಪೆಡ್ಲರ್ ಗಳ ಪಟ್ಟಿ ಸೇರಿದಂತೆ ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಇದನ್ನು ಬಳಸಿಕೊಂಡು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಕಚೇರಿ (ಸಿಇಒ) ಮೂಲಗಳು ಮಾಹಿತಿ ನೀಡಿದೆ.

ಡ್ರಗ್ಸ್
ಮಾದರಿ ನೀತಿ ಸಂಹಿತೆ ಉಲ್ಲಂಘನೆ: 26.68 ಕೋಟಿ ರೂ. ನಗದು, 33 ಕೋಟಿ ರೂ. ಮೌಲ್ಯದ ಮದ್ಯ ವಶ

ಕರ್ನಾಟಕ ಅರಣ್ಯ ಇಲಾಖೆಯ ಬೇಟೆ ತಡೆ ಶಿಬಿರದ ತಂಡಗಳನ್ನೂ ಕೂಡ ತಪಾಸಣೆಗೆ ನಿಯೋಜಿಸಲಾಗಿದೆ, ಗಡಿಯಾಚೆ ಮಾದಕವಸ್ತುಗಳ ಚಲನೆ ಹೆಚ್ಚಾಗುತ್ತಿದೆ. ಹೀಗಾಗಿ ಬುಡಕಟ್ಟು ಮತ್ತು ಗ್ರಾಮಗಳಳ್ಲಿ ಮಾಹಿತಿದಾರರನ್ನೂ ಸಹ ಸಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಅಧಿಕಾರಿಯೊಬ್ಬರು ಇತ್ತೀಚೆಗೆ ರೈಲ್ವೇ ನಿಲ್ದಾಣದಲ್ಲಿ ಸುಮಾರು 100 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿರುವುದನ್ನು ಸ್ಮರಿಸಿ, ತಪಾಸಣೆಗೆ ಡಿಆರ್‌ಐ ಮತ್ತು ಜಿಆರ್‌ಪಿ ಸೇರಿದಂತೆ ಎಲ್ಲಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಹಿಂದಿನ ಲೋಕಸಭೆ ಚುನಾವಣೆ (138.21 ಕೆಜಿ ಡ್ರಗ್ಸ್) ಗಿಂತಲೂ ಈ ಬಾರಿ ಅತೀ ಹೆಚ್ಚು (ಶೇ.911.49) ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಕೇವಲ 10 ದಿನಗಳಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು 88,37,280 ರೂಪಾಯಿ ಮೌಲ್ಯದ 133.68 ಕೆಜಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಏಪ್ರಿಲ್ 3, 2024 ರವರೆಗೆ ಅಧಿಕಾರಿಗಳು 3,13,53,210 ರೂಪಾಯಿ ಮೌಲ್ಯದ 286.91 ಕೆಜಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com