ಡೀಪ್ ಫೇಕ್ ​​ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲು ಚುನಾವಣಾ ಆಯೋಗ ಸಜ್ಜು!

ಆನ್‌ಲೈನ್ ಕ್ರೈಂಗಳ ಮೇಲೆ ನಿಗಾ ಇಡಲು ಇದೇ ಮೊದಲ ಬಾರಿಗೆ ಚುನಾವಣಾ ಅಧಿಕಾರಿಗಳಿಗೆ ಡೀಪ್ ಫೇಕ್, ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ಸೈಬರ್ ಕ್ರೈಮ್‌ಗಳ ಕುರಿತು ತರಬೇತಿ ನೀಡಲು ಚುನಾವಣಾ ಆಯೋಗ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆನ್‌ಲೈನ್ ಕ್ರೈಂಗಳ ಮೇಲೆ ನಿಗಾ ಇಡಲು ಇದೇ ಮೊದಲ ಬಾರಿಗೆ ಚುನಾವಣಾ ಅಧಿಕಾರಿಗಳಿಗೆ ಡೀಪ್ ಫೇಕ್, ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ಸೈಬರ್ ಕ್ರೈಮ್‌ಗಳ ಕುರಿತು ತರಬೇತಿ ನೀಡಲು ಚುನಾವಣಾ ಆಯೋಗ ಮುಂದಾಗಿದೆ.

ಹೊಸ ತಂತ್ರಜ್ಞಾನವನ್ನು ಕಲಿಯಲು ಮತ್ತು ಸಮಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ನವೀಕರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಸೈಬರ್ ಅಪರಾಧಗಳ ಮೇಲೆ ನಿಗಾ ಇಡಲು ಯಾವುದೇ ಪ್ರಯತ್ನವನ್ನೂ ಬಿಡುವುದಿಲ್ಲ ತರಬೇತಿ ಪಡೆಯುತ್ತಿರುವ ಕರ್ನಾಟಕದ ಮುಖ್ಯ ಚುನಾವಣಾ ಕಚೇರಿಯ (CEO) ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತ ರಾಜಕಾರಣಿಗಳ ಎಐ-ರಚಿಸಿದ ಚಿತ್ರಗಳ ನಿದರ್ಶನಗಳಿವೆ. ನಾಯಕರ ವಾಯ್ಸ್ ಮಾಡ್ಯುಲೇಷನ್ ವಿಡಿಯೋಗಳ ನಿದರ್ಶನಗಳೂ ಇವೆ. ಇಲ್ಲಿಯವರೆಗೆ, ಚುನಾವಣಾ ಪ್ರಚಾರದಲ್ಲಿ ಯಾವುದೇ ನಕಲಿ ಪ್ರಕರಣಗಳು ಬೆಳಕಿಗೆ ಬಂದಿಲ್ಲ, ಆದರೆ, ಯಾವುದೇ ಪರಿಸ್ಥಿತಿ ನಿಭಾಯಿಸಲು ನಾವು ಅಪ್ಡೇಟ್ ಆಗುವ ಅಗತ್ಯವಿದೆ. ಕೆಲಸದಲ್ಲಿ ಸುಧಾರಣೆ ತರಲು ತರಬೇತಿ ನೀಡಲಾಗುತ್ತಿದೆ ಎಂದು ಐಟಿ ಮತ್ತು ಮಾಧ್ಯಮದ ವಿಶೇಷ ಅಧಿಕಾರಿ, ಸಿಇಒ ಸೂರ್ಯಸೇನ್ ಅವರು ಹೇಳಿದ್ದಾರೆ.

ಸಂಗ್ರಹ ಚಿತ್ರ
ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ; ಪ್ರಭಾವಿ ವ್ಯಕ್ತಿಗಳ ಪೋಸ್ಟ್ ಗಳ ಮೇಲೆ ಚುನಾವಣಾ ಆಯೋಗ ಕಣ್ಣು!

ಚುನಾವಣಾ ಅಧಿಕಾರಿಗಳು ಸೈಬರ್ ಭದ್ರತಾ ತಂಡಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದು, ಎಸ್ಪಿ, ಸಿಐಡಿ, ನೋಡಲ್ ಅಧಿಕಾರಿಯಾಗಿದ್ದಾರೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಚುನಾಣಾಧಿಕಾರಿಗಳಿದೆ ಇಂತಹ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಸಂದೇಶಗಳು ಹರಡುವುದು, ನಕಲಿ ಸುದ್ದಿ, ಮೀಮ್‌ಗಳು, ಪೇಯ್ಡ್ ಪೇಜ್‌ಗಳು ಮತ್ತು ವೈಯಕ್ತಿಕ ದಾಳಿಗಳನ್ನು ಮಾಡಿದ್ದರ ಕುರಿತು ಚುನಾವಣಾ ಅಧಿಕಾರಿಗಳು ಇದುವರೆಗೆ ಜನರು ಸೇರಿದಂತೆ ರಾಜಕೀಯ ಪಕ್ಷಗಳ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ 17 ಪ್ರಕರಣಗಳನ್ನು ದಾಖಲಿಸಿದ್ದಾರೆ. 17 ಪ್ರಕರಣಗಳ ಪೈಕಿ ಮೂರು ನಾಗರತ್‌ಪೇಟೆಯಲ್ಲಿ ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಾಗ ನಾವು ಬಹಳ ಜಾಗರೂಕರಾಗಿರಬೇಕು. ರಾಜಕೀಯ ಉದ್ದೇಶದಿಂದ ನಾವು ಪ್ರಕರಣಗಳನ್ನು ದಾಖಲಿಸುತ್ತಿಲ್ಲ. ದ್ವೇಷ ಮತ್ತು ಧಾರ್ಮಿಕ ಭಾಷಣಗಳು, ಪ್ರಚೋದನೆ ಮತ್ತು ಅಸಂಸದೀಯ ಭಾಷೆಯ ಬಳಕೆ ಮಾಡಿದವರ ವಿರುದ್ಧ ದೂರು ದಾಖಲಾದರೆ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರಭಾವಿಗಳು, ರಾಜಕಾರಣಿಗಳು, ಪಕ್ಷಗಳು ಮತ್ತು ಅಭಿಮಾನಿಗಳ ಪುಟಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಇದಕ್ಕಾಗಿ ಬೆಂಗಳೂರಿನ ಸಿಇಒ ಕೇಂದ್ರ ಕಚೇರಿಯಲ್ಲಿ 80 ಜನರ ತಂಡ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿವರಗಳನ್ನು ಟ್ರ್ಯಾಕ್ ಮಾಡುತ್ತಿದೆ. ಇದಲ್ಲದೇ ಪ್ರತಿ ಜಿಲ್ಲೆಯಲ್ಲಿ 4-5 ಜನರ ತಂಡ ಕೂಡ ಇದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com