ಬೆಂಗಳೂರು: ಭಾರತಕ್ಕೆ ಅಕ್ರಮ ಪ್ರವೇಶ; ತನಿಖಾ ಸಂಸ್ಥೆ ಮುಂದೆ ನೋವು ತೋಡಿಕೊಂಡ ಬಾಂಗ್ಲಾದೇಶಿಗರು

ಕಾನೂನುಬದ್ಧ ದಾಖಲೆಗಳೊಂದಿಗೆ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ಅವರಿಂದ ಹಣ ಪಡೆದು ಬೆಳೆಪೊಲೆ ಬಳಿಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶಿ ಪ್ರಜೆಗಳು ಎನ್‌ಐಎ ಮುಂದೆ ತಮಗಾದ ಅನುಭವವನ್ನು ವಿವರಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕಾನೂನುಬದ್ಧ ದಾಖಲೆಗಳೊಂದಿಗೆ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ಅವರಿಂದ ಹಣ ಪಡೆದು ಬೆಳೆಪೊಲೆ ಬಳಿಯ ಭಾರತ-ಬಾಂಗ್ಲಾದೇಶ ಗಡಿ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶಿ ಪ್ರಜೆಗಳು ಎನ್‌ಐಎ ಮುಂದೆ ತಮಗಾದ ಅನುಭವವನ್ನು ವಿವರಿಸಿದ್ದಾರೆ. ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಅವರು ಬೆಳ್ಳಂದೂರಿನಲ್ಲಿರುವ ಸುಮನ್ ಶೇಖ್ ಜಾಕಿರ್ ಅಲಿಯಾಸ್ ಸೌದಿ ಜಾಕೀರ್ ಅವರ ತ್ಯಾಜ್ಯ-ವಿಂಗಡಣೆ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ತನಿಖಾ ಸಂಸ್ಥೆಗೆ ತಿಳಿಸಿದ್ದಾರೆ.

ಕಾರ್ಮಿಕರಿಗೆ ತಿಂಗಳಿಗೆ 7,000-9,000 ರೂ.ಗಳನ್ನು ನೀಡಲಾಗುತ್ತಿದ್ದು, ಅವರು ತಂಗಲು ನೀಡಿರುವ ಶೆಡ್‌ ವಾಸ್ತವ್ಯಕ್ಕಾಗಿ ತಲಾ 3,500 ರೂ.ಗಳನ್ನು ನೀಡಬೇಕಿದೆ. ಅವರು ಭದ್ರತಾ ಸಿಬ್ಬಂದಿ ಅಥವಾ ಆಸ್ಪತ್ರೆಗಳಲ್ಲಿ ಉತ್ತಮ ಉದ್ಯೋಗಗಳನ್ನು ಹುಡುಕಿದರೆ, ಅವರ ಅಕ್ರಮ ವಾಸ್ತವ್ಯದ ಬಗ್ಗೆ ಬೆಂಗಳೂರು ಪೊಲೀಸರಿಗೆ ತಿಳಿಸುವುದಾಗಿ ಮತ್ತು ಅವರನ್ನು ಬಂಧಿಸುವುದಾಗಿ ಜಾಕೀರ್ ಅವರಿಗೆ ಬೆದರಿಕೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.

ಮೊಹಮ್ಮದ್ ರಜಾಕ್, ಮಹಿಂದರ್, ಎಂಡಿ ಮಿಲನ್, ನಾಸೀರ್, ಎಲ್ಡೊ, ಎಂಡಿ ಉಮರ್ ಫರೂಜ್ ಅಲಿಯಾಸ್ ಮುಹಮ್ಮದ್ ಉಮರ್ ಫರೂಜ್ ಮತ್ತು ಮಿಜ್ಜನ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಎನ್‌ಐಎ ವಿಶೇಷ ನ್ಯಾಯಾಲಯದ ಚಾರ್ಜ್‌ಶೀಟ್‌ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ.

ನವೆಂಬರ್ 27, 2023 ರಂದು ಪ್ರಕರಣ ದಾಖಲಾಗಿದ್ದು, ಅಸ್ಸಾಂ, ತ್ರಿಪುರಾ ಮತ್ತು ಬಾಂಗ್ಲಾದೇಶದಲ್ಲಿರುವ ಮಾನವ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿರುವ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಅಥವಾ ವ್ಯಕ್ತಿಗಳ ತನಿಖೆಯ ಮೇಲೆ ಕೇಂದ್ರೀಕರಿಸಿದೆ. ಇದು ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದ ಭಾಗವಾಗಿದ್ದು, ಅವರು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮೂಲದ ರೋಹಿಂಗ್ಯಾ ಜನರನ್ನು ಭಾರತಕ್ಕೆ ಅಕ್ರಮ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ.

ಪ್ರಾತಿನಿಧಿಕ ಚಿತ್ರ
#BoycotIndia ಅಭಿಯಾನ: ಮೊದಲು ನಿಮ್ಮ ಹೆಂಡತಿಯರ ಸೀರೆಗಳ ಸುಟ್ಟು ಹಾಕಿ; ಪ್ರತಿಪಕ್ಷ ನಾಯಕರಿಗೆ ಬಾಂಗ್ಲಾ ಪ್ರಧಾನಿ Sheikh Hasina ತಿರುಗೇಟು

ಆರೋಪಿಗಳು ನಕಲಿ ಗುರುತಿನ ದಾಖಲೆಗಳನ್ನು ಬಳಸುತ್ತಿದ್ದರು ಮತ್ತು ಗಡಿಯಾಚೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು.

ಐಪಿಸಿ, ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಅಪರಾಧಗಳಿಗಾಗಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಜಾಕಿರ್, ಫಿರ್ದೌಶ್, ಮುಹಮ್ಮದ್ ಒಲಿ ಉಲ್ಲಾ, ಅಮೋಲ್ ಚಂದ್ರ, ಮಸೂದ್ ಸರ್ದರ್ ಎಂಡಿ ಸೊಹಗ್ ಗಾಜಿ, ಎಸ್‌ಕೆ ಎಂಡಿ ಬೆಳ್ಳಾಲ್, ಎಂಡಿ ಮಿರಾಝುಲ್, ಜಾಕಿರ್ ಖಾನ್, ಎಂಡಿ ಬಾದಲ್ ಹೌಲಾದರ್, ಎಂಡಿ ಕಬೀರ್ ಮತ್ತು ಎಂಡಿ ಬಚ್ಚು ಘರಾಮಿ ಸೇರಿದಂತೆ ಹನ್ನೆರಡು ಆರೋಪಿಗಳನ್ನು ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com