ಬೆಂಗಳೂರು: 270 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಮಹಿಳೆಗೆ ಬಿತ್ತು 1.36 ಲಕ್ಷ ರೂ. ದಂಡ!

ಸಂಚಾರಿ ನಿಯಮ ಉಲ್ಲಂಘಿಸಿದರೆ ಅದು ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ. ನಂತರ ದಂಡ ಕಟ್ಟಬೇಕಾಗುತ್ತದೆ ಅಂತ ಗೊತ್ತಿದ್ದರೂ ಕೆಲವರು ರೂಲ್ಸ್‌ ಬ್ರೇಕ್‌ ಮಾಡುತ್ತಲೇ ಇರುತ್ತಾರೆ.
ಸಂಚಾರಿ ನಿಯಮ ಉಲ್ಲಂಘಿಸಿದ ಮಹಿಳೆ
ಸಂಚಾರಿ ನಿಯಮ ಉಲ್ಲಂಘಿಸಿದ ಮಹಿಳೆ

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದರೆ ಅದು ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ. ನಂತರ ದಂಡ ಕಟ್ಟಬೇಕಾಗುತ್ತದೆ ಅಂತ ಗೊತ್ತಿದ್ದರೂ ಕೆಲವರು ರೂಲ್ಸ್‌ ಬ್ರೇಕ್‌ ಮಾಡುತ್ತಲೇ ಇರುತ್ತಾರೆ. ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 270 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅವರಿಗೆ 1.36 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮಹಿಳೆಯೊಬ್ಬರು ಹೆಲ್ಮೆಟ್​​ ಹಾಕದೆ, ಮೊಬೈಲ್​ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುವಾಗ ಮಹಿಳೆಯು ಸಂಚಾರಿ ​ಪೊಲೀಸ್ ಇಲಾಖೆಯ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.​

KA03 JE5705 ನಂಬರ್​​ನ ಆ್ಯಕ್ಟೀವಾ ಬೈಕ್​​ ಮೇಲೆ ಸಂಚರಿಸುವ ಮಹಿಳೆ 270 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ. ಸಿಗ್ನಲ್ ಜಂಪ್, ಒನ್ ವೇನಲ್ಲಿ ಹೋಗುವುದು, ಹೆಲ್ಮೆಟ್ ಹಾಕದೆ 270 ಬಾರಿ ಸಂಚಾರಿ ನಿಯಮ ಬ್ರೇಕ್​ ಮಾಡಿದ್ದಕ್ಕೆ 1,36,000 ಸಾವಿರ ದಂಡ ವಿಧಿಸಲಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ ಮಹಿಳೆ
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ: ಒಂದೇ ವಾರದಲ್ಲಿ 3 ಕೋಟಿ ರೂ. ದಂಡ ವಸೂಲಿ

ಈ ಮಹಿಳೆಯ ದ್ವಿಚಕ್ರ ವಾಹನ ಬಾಣಸವಾಡಿಯ ಸುಬ್ಬಯ್ಯನಪಾಳ್ಯ, ಕಾಕ್ಸ್ ಟೌನ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿದ್ದು, ನಿರ್ಬಂಧಿತ ರಸ್ತೆಯಲ್ಲಿ ವಾಹನ ಸಂಚರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದಾ ರೂಲ್ಸ್​ ಬ್ರೇಕ್​ ಮಾಡುವ ಮಹಿಳೆ ಕೊನೆಗೂ ಪತ್ತೆಯಾಗಿದ್ದಾರೆ. ಸಂಚಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮಹಿಳೆ ಸುಧಾಮನಗರದಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರು ಆಕೆಯ ವಾಹನದ ಫೋಟೋ ಕ್ಲಿಕ್‌ ಮಾಡಿಕೊಂಡಿದ್ದು, ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com