ಗ್ರಹಣ; ಮೌಢ್ಯ ವಿರೋಧಿಸಿ ಟೌನ್ ಹಾಲ್ ಎದುರು ಆಹಾರ ಸೇವನೆ!

ಗ್ರಹಣಕ್ಕೆ ಸಂಬಂಧಿಸಿದ ಪುರಾಣ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟದ ಕಾರ್ಯಕರ್ತರು ಸೋಮವಾರ ಜಾಗೃತಿ ಮೂಡಿಸಿದರು.
ಗ್ರಹಣದ ವೇಳೆ ಹಣ್ಣು ಸೇವನೆ ಮಾಡುತ್ತಿರುವುದು.
ಗ್ರಹಣದ ವೇಳೆ ಹಣ್ಣು ಸೇವನೆ ಮಾಡುತ್ತಿರುವುದು.
Updated on

ಬೆಂಗಳೂರು; ಗ್ರಹಣಕ್ಕೆ ಸಂಬಂಧಿಸಿದ ಪುರಾಣ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟದ ಕಾರ್ಯಕರ್ತರು ಸೋಮವಾರ ಜಾಗೃತಿ ಮೂಡಿಸಿದರು.

ಸೋಮವಾರ ನಗರದ ಪುರಭವನದ ಮೆಟ್ಟಿಲುಗಳ ಮೇಲೆ ಸಮೋಸಾ, ಬಜ್ಜಿ ಹಾಗೂ ಹಣ್ಣುಗಳು ಸೇರಿದಂತೆ ಮತ್ತಿತರ ಆಹಾರ ಪದಾರ್ಥಗಳನ್ನು ಸೇವಿಸಿ ಚಹಾ ಕುಡಿಯುವ ಮೂಲಕ ಗ್ರಹಣದ ಆಚರಣೆಯನ್ನು ಖಂಡಿಸಿದರು.

ಗ್ರಹಣದ ವೇಳೆ ಹಣ್ಣು ಸೇವನೆ ಮಾಡುತ್ತಿರುವುದು.
Solar Eclipse; ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ: ಎಲ್ಲಿ, ಯಾವಾಗ ಗೋಚರ? ಇಲ್ಲಿದೆ ಮಾಹಿತಿ

ಮೂಡಾಂಬಿಕೆ ವಿರೋಧ ಒಕ್ಕೂಟದ ಸಂಸ್ಥಾಪಕ ನರಸಿಂಹ ಮೂರ್ತಿ, ಸೂರ್ಯಗ್ರಹಣ, ಚಂದ್ರಗ್ರಹಣ ಪ್ರತಿ ವರ್ಷ ನಡೆಯುವ ಪ್ರಕ್ರಿಯೆ. ಆದರೆ, ಕೆಲ ಜ್ಯೋತಿಷಿಗಳು ಇಲ್ಲಸಲ್ಲದ ವಿವರಣೆ ಕೊಡುತ್ತಾರೆ. “ಗರ್ಭಿಣಿಯರು ಹೊರಗೆ ಹೋಗಬಾರದು, ಊಟ ಮಾಡಬಾರದು ಎಂದು ಜನರಿಗೆ ಕೆಲವು ಪ್ರಸ್ತುತವಲ್ಲದ ಸಲಹೆ ನೀಡುತ್ತಾರೆ. ಇವೆಲ್ಲ ಮೂಢನಂಬಿಕೆಗಳಾಗಿವೆ. ಜನರು ಇಂತಹ ಜ್ಯೋತಿಷಿಗಳನ್ನು ನಿರ್ಲಕ್ಷಿಸಬೇಕು. ಹೀಗಾಗಿ ಅರಿವು ಮೂಡಿಸಲು ಅಭಿಯಾನವನ್ನು ನಡೆಸಿದ್ದೇವೆಂದು ಹೇಳಿದರು.

ಜನರಿಗೆ ಸರಿಯಾದ ವೈಜ್ಞಾನಿಕ ದಾರಿ ತೋರಿಸಲು ಸುಮಾರು 20 ವರ್ಷದಿಂದ ಮೂಢ ನಂಬಿಕೆ ವಿರೋಧಿ ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com