ಬೆಂಗಳೂರಿನಲ್ಲಿ ಬಿಸಿಲ ತಾಪ ಹೆಚ್ಚಳಕ್ಕೆ ಇದೂ ಒಂದು ಕಾರಣ: ಶೇ.74ರಷ್ಟು ಜಲಮೂಲಗಳನ್ನು ಕಳೆದುಕೊಂಡ ಉದ್ಯಾನನಗರಿ!

ಈ ವರ್ಷದ ಬೇಸಿಗೆ ತಾಪಮಾನ ಬೆಂಗಳೂರಿಗರಿಗೆ ಹಿಂದೆಂದೂ ಕಂಡಿರದಷ್ಟು ಬಿಸಿಲಿನ ಬೇಗೆಯ ಅನುಭವ ನೀಡಿದೆ. ಬೆಂಗಳೂರಿನ ಭವಿಷ್ಯದ ಬಗ್ಗೆ ಹತ್ತುಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನೀರು ಪೂರೈಕೆಗೆ ಆಗ್ರಹಿಸಿ ನಗರವಾಸಿಗಳ ಪ್ರತಿಭಟನೆ
ನೀರು ಪೂರೈಕೆಗೆ ಆಗ್ರಹಿಸಿ ನಗರವಾಸಿಗಳ ಪ್ರತಿಭಟನೆ
Updated on

ಬೆಂಗಳೂರು: ಈ ವರ್ಷದ ಬೇಸಿಗೆ ತಾಪಮಾನ ಬೆಂಗಳೂರಿಗರನ್ನು ಸಾಕಷ್ಟು ಕಾಡಿಸುತ್ತಿದೆ. ನಗರ ಜೀವನದ ಭವಿಷ್ಯದ ಬಗ್ಗೆ ಹತ್ತುಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರಿನ ಹಿಂದಿನ ಪರಿಸ್ಥಿತಿಗಳನ್ನು ಅವಲೋಕಿಸಿ ನೋಡಿದಾಗ ಉದ್ಯಾನನಗರಿ, ತಂಪಿನ ನಗರ ಎಂದು ಹೆಸರು ಗಳಿಸಿದ್ದ ಐಟಿ ರಾಜಧಾನಿಯು ತನ್ನ ಹಸಿರು ಹೊದಿಕೆಯಲ್ಲಿ ಶೇಕಡಾ 66 ರಷ್ಟು, ಜಲಮೂಲಗಳಲ್ಲಿ ಶೇಕಡಾ 74 ರಷ್ಟು ಕಳೆದುಕೊಂಡಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ (CES) ಪ್ರಕಾರ ಶೇಕಡಾ 584 ರಷ್ಟು ನಿರ್ಮಾಣ ಪ್ರದೇಶಗಳನ್ನು ಕಂಡಿದೆ. ಈ ಬೇಸಿಗೆಯಲ್ಲಿ ಬೆಂಗಳೂರು ನಗರ ಎಲ್ ನಿನೊ ಪರಿಣಾಮದಡಿಯಲ್ಲಿ ಸಿಲುಕಿಕೊಂಡಿದೆ ಎನ್ನುತ್ತಾರೆ ತಜ್ಞರು.

ಇದೇ ಪರಿಸ್ಥಿತಿ ಮುಂದುವರಿದರೆ ಬೆಂಗಳೂರಿನ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು: 2038 ರ ವೇಳೆಗೆ, CES ಅರಣ್ಯಗಳು ಶೇಕಡಾ 0.65 ಕ್ಕೆ (2022 ರಲ್ಲಿ ಕೊನೆಯ ಜನಗಣತಿಯ ಪ್ರಕಾರ, ಇದು 3.32 ಶೇಕಡಾ) ಕ್ಕೆ ಕಡಿಮೆಯಾಗಬಹುದು ಎಂದು ಊಹಿಸಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ 2038 ರ ವೇಳೆಗೆ ಸುಸಜ್ಜಿತ ಪ್ರದೇಶಗಳು ನಿರ್ಮಾಣವಾಗಬಹುದು ಎಂದು ಸಿಇಎಸ್ ಅಧ್ಯಯನ ಹೇಳಿದೆ.

ಸುಸಜ್ಜಿತ ಮೇಲ್ಮೈಗಳ ಹೆಚ್ಚಳ ಮತ್ತು ಹಸಿರು ಪ್ರದೇಶಗಳು ಕಡಿಮೆಯಾಗುವುದರಿಂದ ಬೆಂಗಳೂರಿನ ನಗರದಲ್ಲಿ ಬಿಸಿಲಿನ ಶಾಖವು ಇನ್ನಷ್ಟು ಹೆಚ್ಚಳವಾಗಬಹುದು. ಈ ವರ್ಷ ಮಾರ್ಚ್‌ನಿಂದ 33.04 ಡಿಗ್ರಿ ಸೆಲ್ಸಿಯಸ್ ನಿಂದ 41.4 ಡಿಗ್ರಿ ಸೆಲ್ಸಿಯಸ್ ಗೆ ಭೂ ಮೇಲ್ಮೈ ತಾಪಮಾನ (LST) ಹೆಚ್ಚಿಸಿದೆ ಎಂದು ಸಿಇಎಸ್‌ನಲ್ಲಿ ಇಂಧನ ಮತ್ತು ತೇವಭೂಮಿ ಸಂಶೋಧನಾ ಗುಂಪಿನ ಸಂಯೋಜಕ ಪ್ರೊಫೆಸರ್ ಟಿ ವಿ ರಾಮಚಂದ್ರ ಹೇಳುತ್ತಾರೆ.

ನೀರು ಪೂರೈಕೆಗೆ ಆಗ್ರಹಿಸಿ ನಗರವಾಸಿಗಳ ಪ್ರತಿಭಟನೆ
El Nino ಸೇರಿ ಹಲವು ಕಾರಣ: 5 ತಿಂಗಳಿಂದ ಒಂದು ಹನಿ ಮಳೆಯಿಲ್ಲ; ಬಿಸಿಲಿನಿಂದ ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ!

ಬೆಂಗಳೂರು ನಗರ ಮತ್ತು ಸುತ್ತಮುತ್ತ ಜಲ ಕಾಯಗಳು ಮತ್ತು ಹಸಿರು ಹೊದಿಕೆ ಕಡಿಮೆಯಾಗಿರುವುದು ವಾಯುಗುಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಕಡಿಮೆ ತಂಪಾಗಿಸಿ ಭೂ ಮೇಲ್ಮೈ ತಾಪಮಾನದಲ್ಲಿ ಹೆಚ್ಚಳವಾಗುತ್ತದೆ. ನಗರ ಶಾಖ ಪರಿಣಾಮವು ಸುತ್ತುವರಿದ ತಾಪಮಾನ ಮತ್ತು ಆರ್ದ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಶಾಖದ ಒತ್ತಡ ಮತ್ತು ಶಾಖ-ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ ಎಂದು ಪ್ರೊ.ರಾಮಚಂದ್ರ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com