ಲೋಕ ಸಮರ 2024: ಮತದಾನ ಹೆಚ್ಚಳಕ್ಕೆ RWAಯಿಂದ ಅಭಿಯಾನ ಆರಂಭ

ಲೋಕಸಭಾ ಚುನಾವಣೆಗೆ ಇನ್ನೆರಡು ವಾರಗಳಷ್ಟೇ ಬಾಕಿಯಿದ್ದು, ಈ ನಡುವಲ್ಲೇ ಮತದಾನ ಹಚ್ಚಳಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯೂಎ) ಜಾಗೃತಿ ಅಭಿಯಾನಗಳನ್ನು ಚುರುಕುಗೊಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೆರಡು ವಾರಗಳಷ್ಟೇ ಬಾಕಿಯಿದ್ದು, ಈ ನಡುವಲ್ಲೇ ಮತದಾನ ಹಚ್ಚಳಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯೂಎ) ಜಾಗೃತಿ ಅಭಿಯಾನಗಳನ್ನು ಚುರುಕುಗೊಳಿಸಿವೆ.

ಮತದಾನದ ದಿನವನ್ನು ರಜೆ ಎಂದು ಭಾವಿಸದೆ, ತಪ್ಪದೇ ಮತಹಕ್ಕು ಚಲಾಯಿಸುವಂತೆ ನಾಗರೀಕರಿಗೆ ಮನವಿ ಮಾಡಿಕೊಂಡಿದೆ.

ಈಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರ ಶೇಕಡಾವಾರು ಪ್ರಮಾಣವನ್ನು 100ರಷ್ಟು ಮಾಡುವ ಉದ್ದೇಶದಿಂದ 250 ಕ್ಕೂ ಹೆಚ್ಚು ವಸತಿ ಕಲ್ಯಾಣ ಸಂಘಗಳು (RWAs) ಸಹ ನಿವಾಸಿಗಳ ಪ್ರಶ್ನೆ, ಗೊಂದಲ ಹಾಗೂ ದಾಖಲಾತಿಗಳ ಪಡೆಯಲು ದಿನವಿಡೀ ಸಹಾಯ ಮಾಡುತ್ತಿವೆ.

ರುಸ್ತಮ್ ಬಾಗ್ ಅಸೋಸಿಯೇಶನ್ ಫಾರ್ ವೆಲ್‌ಫೇರ್ ಮತ್ತು ಯುನೈಟೆಡ್ ಆರ್‌ಡಬ್ಲ್ಯೂಎ ಅಭಿಯಾನದ ನೇತೃತ್ವ ವಹಿಸಿರುವ ಕೋನೇನ ಅಗ್ರಹಾರದ ಯುನೈಟೆಡ್ ಆರ್‌ಡಬ್ಲ್ಯೂಎ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಮಾತನಾಡಿ, ಜನರ ಆಯ್ಕೆಗಳ ಮೇಲೆ ಪ್ರಭಾವ ಬೀರದೆ ಬೆಂಗಳೂರಿನ ಕಳಪೆ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ವ್ಯತ್ಯಾಸವನ್ನು ತರಲು ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಲೋಕ ಸಮರ 2024: ಇಂದಿನಿಂದ 85 ವರ್ಷ ಮೇಲ್ಪಟ್ಟವರಿಗೆ 'Vote from Home'ಗೆ ಅವಕಾಶ

ಮತ ಹಕ್ಕು ಚಲಾಯಿಸುವ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳದ ಹೊರತು ಮತದಾನ ಶೇಕಡಾವಾಡು ಸುಧಾರಿಸುವುದಿಲ್ಲ. ಸಾಕಷ್ಟು ಮಂದಿ ಮತದಾನದ ದಿನವನ್ನು ರಜೆಯೆಂದೇ ಭಾವಿಸು, ಮತಹಕ್ಕು ಚಲಾಯಿಸುವುದಿಲ್ಲ. ಈ ಚಿಂತನೆಗಳನ್ನು ಬದಲಾಯಿಸಲು ನಾವು ಬಯಸುತ್ತಿದ್ದೇವೆ. ಸಾಮಾನ್ಯ ಸಭೆ, ದೇವಾಲಯ, ಮಾರುಕಟ್ಟೆ ಹಾಗೂ ಸಮಾರಂಭಗಳು ಸೇರಿದಂದೆ ನಗರದ ವಿವಿಧ ಭಾಗಗಳಿಗೆ ತೆರಳಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪೋಸ್ಟರ್ ಗಳು ಹಾಗೂ ವಿಡಿಯೋಗಳನ್ನು ಟ್ವಿಟರ್ ಹಾಗೂ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಇನ್ನೂ ಕೆಲವರು ಇನ್ನೂ ಮುಂದಕ್ಕೆ ಹೆಜ್ಜೆ ಇಟ್ಟು, ಜನರ ಗುರುತಿನ ಚೀಟಿನಗಳಲ್ಲಿರು ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 2019 ಮತ್ತು 2023ರಲ್ಲಿ ನಡೆದ ಚುನಾವಣೆಯಲ್ಲಿಯೂ ಇದೇ ರೀತಿಯ ಅಭಿಯಾನ ನಡೆಸಿದ್ದೆವು. ಜನರ ಮನಸ್ಥಿತಿ ನಿಧಾನಗತಿಯಲ್ಲಿ ಬದಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾಗರಭಾವಿಯ ಎನ್‌ಜಿಇಎಫ್ ಲೇಔಟ್‌ನಲ್ಲಿರುವ ಆರ್‌ಡಬ್ಲ್ಯೂಎಗಳ ಗುಂಪು ಒಂದು ವಿಶಿಷ್ಟ ವಿಧಾನದೊಂದಿಗೆ ಅಭಿಯಾನ ನಡೆಸುತ್ತಿದೆ. ಒಣ ಹಾಗೂ ಹಸಿ ತ್ಯಾಜ್ಯವನ್ನು ಸಂಗ್ರಹಿಸುವ ಆಟೋ ಟಿಪ್ಪರ್‌ಗಳನ್ನು ಈ ಅಭಿಯಾನಕ್ಕೆ ಬಳಸಿಕೊಳ್ಳುತ್ತಿದೆ.

ಕಸ ಸಂಗ್ರಹ ವೇಳೆ ಆಟೋಗಳಲ್ಲಿ ಆಡಿಯೋ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಅಲ್ಲದೆ, ವಾಟ್ಸಾಪ್ ಮೂಲಕವೂ ಜಾಗೃತಿ ಮೂಡಿಸುತ್ತಿದ್ದೇವೆಂದು ದತ್ತಾ ಸರಾಫ್ ಎಂಬುವವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com