ಜಲಕ್ಷಾಮ: ಬೆಂಗಳೂರು ತೊರೆಯುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳ!

ದಿನ ಕಳೆಯುತ್ತಿದ್ದಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಇದರ ಪರಿಣಾಮ ವಲಸೆ ಕಾರ್ಮಿಕರು ನಗರ ತೊರೆಯುತ್ತಿದ್ದಾರೆಂದು ತಿಳಿದುಬಂದಿದೆ.
ಕರಿಯಮ್ಮನ ಅಗ್ರಹಾರದಲ್ಲಿರುವ ವಲಸೆ ಕಾರ್ಮಿಕರ ಶೆಡ್ ಗಳು.
ಕರಿಯಮ್ಮನ ಅಗ್ರಹಾರದಲ್ಲಿರುವ ವಲಸೆ ಕಾರ್ಮಿಕರ ಶೆಡ್ ಗಳು.
Updated on

ಬೆಂಗಳೂರು: ದಿನ ಕಳೆಯುತ್ತಿದ್ದಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಇದರ ಪರಿಣಾಮ ವಲಸೆ ಕಾರ್ಮಿಕರು ನಗರ ತೊರೆಯುತ್ತಿದ್ದಾರೆಂದು ತಿಳಿದುಬಂದಿದೆ.

ಕುಡಿಯುವ ಹಾಗೂ ಇತರೆ ಅಗತ್ಯಗಳ ಬಳಕೆಯ ನೀರಿಗೆ ಹಣ ನೀಡಲು ಸಾಧ್ಯವಾಗದೆ ಸಾಧ್ಯವಾಗದೆ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಅಥವಾ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಕರಿಯಮ್ಮನ ಅಗ್ರಹಾರದ ಐಟಿ ಹಬ್‌ಗಳು ಮತ್ತು ಬಹುಮಹಡಿ ವಸತಿ ಕಟ್ಟಡಗಳಲ್ಲದೆ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಅಸ್ಸಾಂನಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ನೆಲೆಯಾಗಿದೆ. ಆದರೆ, ತೀವ್ರ ನೀರಿನ ಕೊರತೆಯಿಂದಾಗಿ ಈ ಕಾರ್ಮಿಯಕರು ಇತರ ನಗರಗಳಲ್ಲಿ ಜೀವನೋಪಾಯವನ್ನು ಹುಡುಕುವಂತಾಗಿದೆ.

ನಾವು ವಾಸಿಸುವ ಪ್ರತೀ ಶೆಡ್ ಮುಂದೆ ನೀರಿನ ಡ್ರಮ್ ಗಳನ್ನು ಇರಿಸಲಾಗಿದೆ. ಮೂರು ದಿನಕ್ಕೊಮ್ಮೆ 40 ಡ್ರಮ್ ಗಳ ಪೈಕಿ 14 ಡ್ರಮ್ ಗಳನ್ನು ಮಾತ್ರ ತುಂಬಿಸಲು ಸಾಧ್ಯವಾಗುತ್ತಿವೆ. ಸುಮಾರು 60 ಮಂದಿ ವಲಸೆ ಕಾರ್ಮಿಕರ ಕುಟುಂಬ ಇಲ್ಲಿ ನೆಲೆಸಿವೆ ಎಂದು ಕಾರ್ಮಿಕರು ಹೇಳಿದ್ದಾರೆ.

ಕರಿಯಮ್ಮನ ಅಗ್ರಹಾರದಲ್ಲಿರುವ ವಲಸೆ ಕಾರ್ಮಿಕರ ಶೆಡ್ ಗಳು.
ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್; ಅಪಘಾತದಲ್ಲಿ ಮೂವರು ವಲಸೆ ಕಾರ್ಮಿಕರು ಸಾವು

ನಮಾಜ್ ಗೂ ಮುನ್ನ ಶುಭ್ರತೆ ಮುಖ್ಯ. ರಂಜಾನ್ ಉಪವಾಸ ಸಂದರ್ಭದಲ್ಲಿ ಶುದ್ಧ ನೀರಿಗಾಗ ಪ್ರತಿ ದಿನ ರೂ.120ರೂಗಳನ್ನು ಪಾವತಿ ಮಾಡಿದ್ದೇವೆ. ಇಲ್ಲಿನ ನಲ್ಲಿಗಳು ಕೇವಲ ಶೋಪೀಸ್ ಗಳಾಗಿವೆ. ಕಳೆದ ಎರಡು ತಿಂಗಳಿನಿಂದ ನೀರು ಬಂದಿಲ್ಲ. ಬೋರ್‌ವೆಲ್‌ಗಳು ಬತ್ತಿ ಹೋಗಿವೆ, ಆರ್‌ಒ ಯೂನಿಟ್‌ಗಳಲ್ಲಿ ಪ್ರತಿ 10 ಲೀಟರ್ ಕ್ಯಾನ್‌ ನೀರಿನ ಬೆಲೆ 10 ರಿಂದ 30 ರೂ.ಗೆ ಏರಿದೆ. ನೀರಿನ ಟ್ಯಾಂಕರ್‌ಗಳು 4,000 ಲೀಟರ್ ಲೋಡ್‌ಗೆ ದರವನ್ನು 500 ರಿಂದ 1,500 ರೂ.ಗೆ ಹೆಚ್ಚಿಸಿವೆ. ಇದರಿಂತ ಮನೆಗೆ ಕಳುಹಿಸುವ ಹಣವನ್ನು ನೀರು ಖರೀದಿಗೆ ಬಳಸುವಂತಾಗಿದೆ. ಹೀಗಾಗಿ ಇಲ್ಲಿರುವ 70 ಕುಟುಂಬಗಳ ಪೈಕಿ ಸುಮಾರು 10 ಕುಟುಂಬಗಳು ಉತ್ತರ ಭಾರತದ ತಮ್ಮ ಊರುಗಳಿಗೆ ಮರಳಿದ್ದಾರೆ ಎಂದು ಅಸ್ಸಾಂ ಮೂಲದ ನಗ್ಮಾ ಎಂಬುವವರು ಹೇಳಿದ್ದಾರೆ.

ಬೆಳ್ಳಂದೂರಿನಲ್ಲಿ ಮನೆಕೆಲಸಗಾರರಾಗಿ ಕೆಲಸ ಮಾಡುವ ಬೋರಾಹ್ ಎಂಬುವವರು ಮಾತನಾಡಿ, ವಾರಕ್ಕೊಮ್ಮೆ ಮಾತ್ರ ನೀರನ್ನು ಖರೀದಿಸಲು ಶಕ್ತರಾಗಿದ್ದೇವೆ. ಆರ್‌ಒ ಘಟಕ ವಾರಕ್ಕೆ ಮೂರು ಬಾರಿ ಮಾತ್ರ ತೆರೆದಿರುತ್ತದೆ. ನಮ್ಮಲ್ಲಿ ಅಕ್ಕಿಯನ್ನು ಬೇಯಿಸಲು ಕೂಡ ನೀರಿಲ್ಲದಂತಾಗಿದೆ,. ಕೊಳವೆಬಾವಿ ನೀರು ಪೂರೈಕೆ ಇಲ್ಲ. ಜಮೀನು ಮಾಲೀಕರು ಮತ್ತು ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

2 ವರ್ಷಗಳಿಂದ ನಗರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಪಶ್ಚಿಮ ಬಂಗಾಳದ ಹೌರಾ ಮೂಲದ ವಿಜಯ್ ಎಂಬುವವವರು ಮಾತನಾಡಿ, ನನ್ನೂರಿನಲ್ಲಿ ದಿನಗೂಲಿಯಾಗಿ ರೂ.750 ಸಿಗುತ್ತಿತ್ತು. ಆದರೆ, ನಗರದಲ್ಲಿ 1,100 ನೀಡಲಾಗುತ್ತಿದೆ. ನನಗೆ 5 ಮತ್ತು 8 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಪ್ರತಿ ದಿನವೂ ನೀರಿಗಾಗಿ ಹೆಚ್ಚಿನ ಹಣ ಪಾವತಿಸಬೇಕಾಗುತ್ತಿದೆ. ಬಳಕೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಚಿಂತಿಸುತ್ತಲೇ ಇರುತ್ತೇವೆ. ಇದರಿಂದ ಸ್ನಾನ ಮತ್ತು ಬಟ್ಟೆಯಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಐದು ಜನರ ಕುಟುಂಬವಾಗಿರುವ ನಮಗೆ ಪ್ರತಿ ವಾರ ಕನಿಷ್ಠ 40 ಲೀಟರ್ ಕುಡಿಯುವ ನೀರು ಬೇಕು. RO ಘಟಕವು ಕೆಲವೇ ಮೀಟರ್ ದೂರದಲ್ಲಿದೆ. ಆದರೆ, ಅದು ಇಡೀ ದಿನ ತೆರೆದಿರುವುದಿಲ್ಲ ಎಂದು ಹೇಳಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com