Cybercrime ಹೆಚ್ಚಳ: ಕೇವಲ ಎರಡು ತಿಂಗಳಲ್ಲಿ ಬೆಂಗಳೂರಿಗರು ಕಳೆದುಕೊಂಡಿದ್ದು 240 ಕೋಟಿ ರೂ.!

ಸೈಬರ್ ಕ್ರೈಂ, ಹೆಸರು ಕೇಳಿದರೇ ನಡುಕ ಹುಟ್ಟುವ ಸ್ಥಿತಿ ಇತ್ತೀಚೆಗೆ ಉಂಟಾಗಿದೆ. ನಗರ ಪ್ರದೇಶಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇವಲ ಎರಡು ತಿಂಗಳಲ್ಲಿ, ಸೈಬರ್ ಕ್ರೈಮ್‌ನಿಂದ ಬೆಂಗಳೂರಿಗರು 240 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೈಬರ್ ಕ್ರೈಂ, ಹೆಸರು ಕೇಳಿದರೇ ನಡುಕ ಹುಟ್ಟುವ ಸ್ಥಿತಿ ಇತ್ತೀಚೆಗೆ ಉಂಟಾಗಿದೆ. ನಗರ ಪ್ರದೇಶಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇವಲ ಎರಡು ತಿಂಗಳಲ್ಲಿ, ಸೈಬರ್ ಕ್ರೈಮ್‌ನಿಂದ ಬೆಂಗಳೂರಿಗರು 240 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ, ಅವುಗಳಲ್ಲಿ ಕೇವಲ 56 ಕೋಟಿ ರೂಪಾಯಿ ಅಂದರೆ ಶೇಕಡಾ 23.6 ರಷ್ಟು ಮಾತ್ರ ವಸೂಲಿಯಾಗಿದೆ. ಸೈಬರ್ ಅಪರಾಧಗಳ ಪತ್ತೆ ಪ್ರಮಾಣವು ಕ್ಷೀಣಿಸುತ್ತಿದೆ ಎಂದು ಗೊತ್ತಾಗಿದೆ.

2022 ರಲ್ಲಿ, ಬೆಂಗಳೂರು ನಗರದಲ್ಲಿ ಸೈಬರ್ ಅಪರಾಧ ಪ್ರಕರಣ ಪತ್ತೆಹಚ್ಚುವಿಕೆ ಶೇಕಡಾ 22.8ರಷ್ಟಿತ್ತು. 2023 ರಲ್ಲಿ ಅದು ಶೇಕಡಾ 8.1ಕ್ಕೆ ಇಳಿಯಿತು. 2024 ರಲ್ಲಿ ಕೇವಲ ಶೇಕಡಾ 1.36ಕ್ಕೆ ಕುಸಿಯಿತು (ಜನವರಿಯಿಂದ ಫೆಬ್ರವರಿವರೆಗೆ). 2024 ರಲ್ಲಿ 60 ದಿನಗಳಲ್ಲಿ 3,151 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 828 ಪ್ರಕರಣಗಳಲ್ಲಿ ಉದ್ಯೋಗ ವಂಚನೆ ಮತ್ತು 11 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಅಂಕಿಅಂಶಗಳ ಪ್ರಕಾರ, ಉದ್ಯೋಗ ವಂಚನೆ ಹಗರಣಗಳಿಂದ ವ್ಯಕ್ತಿಗಳು ಒಟ್ಟಾರೆಯಾಗಿ 63.8 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಸೈಬರ್ ಕ್ರೈಂ ಪ್ರಕರಣಗಳಲ್ಲಿ ಹೆಚ್ಚಳ: ಹಾಟ್ ಸ್ಪಾಟ್'ಗಳ ಪತ್ತೆಗೆ 7 ತಂಡಗಳ ರಚಿಸಿದ ಕೇಂದ್ರ ಸರ್ಕಾರ!

ಪ್ರತಿ ಸೈಬರ್ ಅಪರಾಧದಲ್ಲಿ, ಕನಿಷ್ಠ 200 ನಕಲಿ ಬ್ಯಾಂಕ್ ಖಾತೆಗಳು (ಇತರರ ಪರವಾಗಿ ಅಕ್ರಮವಾಗಿ ಸಂಪಾದಿಸಿದ ಹಣವನ್ನು ವರ್ಗಾಯಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ) ಒಳಗೊಂಡಿರುತ್ತವೆ. ಈ ಹಿಂದೆ, ಸಂತ್ರಸ್ತರಿಗೆ ಕಡಿಮೆ ಮೊತ್ತದ ಹಣದಿಂದ ವಂಚನೆ ಮಾಡಲಾಗುತ್ತಿತ್ತು, ಪ್ರಸ್ತುತ ಸಂತ್ರಸ್ತರಿಗೆ ಕನಿಷ್ಠ 10 ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಲಾಗುತ್ತದೆ ಎಂದು ಉದ್ಯೋಗ ವಂಚನೆಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಸಂಚಾರ (ದಕ್ಷಿಣ) ಉಪ ಪೊಲೀಸ್ ಆಯುಕ್ತ ಶಿವ ಪ್ರಕಾಶ್ ದೇವರಾಜು ಹೇಳಿದರು.

ಸೈಬರ್ ಕ್ರೈಂ ಸಂತ್ರಸ್ತರು ಒಂದು ಗಂಟೆಯೊಳಗೆ ಪ್ರಕರಣಗಳನ್ನು ವರದಿ ಮಾಡಬೇಕು: ಸೈಬರ್ ಅಪರಾಧಗಳ ವಿಷಯಕ್ಕೆ ಬಂದಾಗ, ಪ್ರವೃತ್ತಿಯು ಬದಲಾಗುತ್ತಲೇ ಇರುತ್ತದೆ. ಅಪರಾಧಗಳ ಸ್ವರೂಪ ಮತ್ತು ಸಂಕೀರ್ಣತೆಯು ವಿಕಸನಗೊಳ್ಳುತ್ತಲೇ ಇರುತ್ತದೆ. ಜೀವನಶೈಲಿಯ ಬದಲಾವಣೆಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತದೆ ಎಂದು ಡಿಸಿಪಿ ದೇವರಾಜು ಹೇಳುತ್ತಾರೆ.

ಫೆಡ್‌ಎಕ್ಸ್ ಕೊರಿಯರ್ ಹಗರಣವನ್ನು ಒಳಗೊಂಡ ಎಸ್‌ಐಟಿಯ ನೇತೃತ್ವ ವಹಿಸಿದ್ದ ಪೂರ್ವದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಸೈಬರ್ ಅಪರಾಧವನ್ನು ಭೇದಿಸಲು ಹಣಕಾಸು ಸಂಸ್ಥೆಗಳೊಂದಿಗೆ ನಿರಂತರ ಅನುಸರಣೆ ಅಗತ್ಯವಿದೆ. ಸಾಲವನ್ನು ವಿಸ್ತರಿಸುವ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವ ಕಾರ್ಯವಿಧಾನಗಳು ಕಠಿಣವಾಗಿರಬೇಕು. ಅಲ್ಲದೆ, ಸಂತ್ರಸ್ತರು ಪ್ರಕರಣ ಬೆಳಕಿಗೆ ಬಂದ ಒಂದು ಗಂಟೆಯೊಳಗೆ ಪ್ರಕರಣಗಳನ್ನು ವರದಿ ಮಾಡಬೇಕು. ಸೈಬರ್ ಕ್ರೈಮ್ ಪತ್ತೆ ಮಾಡುವುದು ಪೊಲೀಸರ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರು ಮತ್ತು ಬ್ಯಾಂಕ್‌ಗಳ ಜವಾಬ್ದಾರಿ ಕೂಡ ಆಗಿದೆ ಎನ್ನುತ್ತಾರೆ.

ಸಾಂದರ್ಭಿಕ ಚಿತ್ರ
ದೇಶದ ಭದ್ರತೆಗೆ ಸೈಬರ್ ಕ್ರೈಂ ಬೆದರಿಕೆಯಾಗಿದೆ: ಸಿಎಂ ಸಿದ್ದರಾಮಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com