ಬೆಂಗಳೂರಿನ ಕುದುರೆಗಳಿಗೆ ಒಕ್ಕರಿಸಿರುವ Glanders disease ಮನುಷ್ಯರಿಗೂ ಹರಡುವುದೇ? ಲಕ್ಷಣಗಳೇನು?

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಪತ್ತೆಯಾಗಿರುವ ಗ್ಲಾಂಡರ್ಸ್ ರೋಗ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಎಂದು ವೈದ್ಯರು ಹೇಳಿದ್ದಾರೆ.
ಗ್ಲಾಂಡರ್ಸ್ ರೋಗ
ಗ್ಲಾಂಡರ್ಸ್ ರೋಗ

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಪತ್ತೆಯಾಗಿರುವ ಗ್ಲಾಂಡರ್ಸ್ ರೋಗ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ದೃಢಪಟ್ಟಿದ್ದು, ರೋಗಗ್ರಸ್ಥ ಕುದುರೆ ಸಾವನ್ನಪ್ಪಿದ್ದು, ಮತ್ತೊಂದು ಕುದುರೆಗೆ ಸೋಂಕು ತಗುಲಿದೆ. ಬೆಂಗಳೂರು ಉತ್ತರ ತಾಲೂಕಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿರುವ ಖಾಲಿದ್ ಷರೀಫ್ ಎಂಬುವವರಿಗೆ ಸೇರಿದ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಕಾಣಿಸಿಕೊಂಡಿದೆ.

ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರಾಣಿಗಳ ನಿಯಂತ್ರಣ ಕಾಯ್ದೆ-2009 ಅನ್ವಯ ರೋಗ ಗ್ರಸ್ಥ ಕುದುರೆ ಇದ್ದ ಕೇಂದ್ರದಿಂದ 5-ಕಿಮೀ ವ್ಯಾಪ್ತಿಯನ್ನು 'ಸೋಂಕಿತ ವಲಯ' ಎಂದು ಘೋಷಿಸಲಾಗಿದೆ ಮತ್ತು 5-25 ಕಿಮೀ ವ್ಯಾಪ್ತಿಯ ಪ್ರದೇಶವನ್ನು 'ಕಣ್ಗಾವಲು ವಲಯ' ಎಂದು ಘೋಷಿಸಲಾಗಿದೆ.

ಗ್ಲಾಂಡರ್ಸ್ ರೋಗ
ಮತ್ತೊಂದು ಸಾಂಕ್ರಾಮಿಕ ಭೀತಿ; ಕುದುರೆಗಳಲ್ಲಿ 'Glanders disease' ಪತ್ತೆ, ಡಿ.ಜೆ.ಹಳ್ಳಿ ಸುತ್ತಮುತ್ತ 'ರೋಗಪೀಡಿತ ವಲಯ' ಘೋಷಣೆ

ಏನಿದು ಗ್ಲಾಂಡರ್ಸ್ ರೋಗ

ಗ್ಲಾಂಡರ್ಸ್ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದು ಅದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳಿಗೆ ಸೋಂಕು ತರುತ್ತದೆ. ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ.

ಇದು ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಮತ್ತು ಪ್ರತ್ಯೇತ ಪ್ರಕರಣಗಳಲ್ಲಿ ಗಂಟುಗಳು ಮತ್ತು ಹುಣ್ಣುಗಳನ್ನು ಉಂಟುಮಾಡುತ್ತದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಕೂಡ ಸಂಭವಿಸುತ್ತದೆ.

ಈ ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸೋಂಕು ಪೀಡಿತ ಪ್ರಾಣಿಯ ಸಂಪರ್ಕಕ್ಕೆ ಬರುವ ಪ್ರಾಣಿ ನಿರ್ವಾಹಕರು ಅಥವಾ ಇತರರು ಸೋಂಕಿಗೆ ತುತ್ತಾಗುವ ಅಪಾಯವಿದೆ. ನಿಯಮಿತ ತಪಾಸಣೆಯ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗ್ಲಾಂಡರ್ಸ್ ರೋಗ
ಸಾಂಕ್ರಾಮಿಕ ರೋಗ ತಡೆಗೆ ಸಹಕಾರ ನೀಡಿ: BWSSB ಗೆ ಬಿಬಿಎಂಪಿ ಪತ್ರ

ಪ್ರಾಣಿ ನಿರ್ವಾಹಕರ ಕಡ್ಡಾಯ ತಪಾಸಣೆ

ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆಯಾದ ಹಿನ್ನಲೆಯಲ್ಲಿ ಜನರು ಯಾವುದೇ ರೋಗಲಕ್ಷಣಗಳನ್ನು ತೋರಿಸಿದರೆ ಮಾತ್ರ ಪರೀಕ್ಷೆಗೆ ಒಳಪಡಬೇಕು ಎಂದು ಸಚಿವಾಲಯ ಆದೇಶಿಸಿದೆ. ಆದರೂ ನಾವು ಎಲ್ಲಾ ಪ್ರಾಣಿ ಹ್ಯಾಂಡ್ಲರ್‌ಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುತ್ತೇವೆ.

ಈ ಸೋಂಕು ತಗುಲಿದರೆ ಇದು ಅವರ ಅಂಗಗಳ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು. ಬೆಂಗಳೂರಿನಲ್ಲಿ 1,200 ಕುದುರೆಗಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೇಸ್‌ಕುದುರೆಗಳ ಪರೀಕ್ಷೆಯ ವರದಿಯನ್ನು ಕೇಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com