ಬೆಂಗಳೂರು: ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರ ಪರ ಪ್ರಚಾರ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿರುವ ಘಟನೆ ಜೆಸಿ ನಗರದ ಪಾಳ್ಯ ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ 4:15ರ ಸುಮಾರಿಗೆ ನಡೆದಿದೆ.
ಸಾವು (ಸಾಂಕೇತಿಕ ಚಿತ್ರ)
ಸಾವು (ಸಾಂಕೇತಿಕ ಚಿತ್ರ)
Updated on

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರ ಪರ ಪ್ರಚಾರ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿರುವ ಘಟನೆ ಜೆಸಿ ನಗರದ ಪಾಳ್ಯ ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ 4:15ರ ಸುಮಾರಿಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಬೆನ್ಸನ್ ಟೌನ್ ನಿವಾಸಿ ಪತಿ ನಾಥ (52) ಎಂದು ಗುರುತಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ವ್ಯಕ್ತಿಯ ಸೋದರ ಮಾವ ಶೇಖರ್ ಅವರು, ಸಂಜೆ 5 ಗಂಟೆ ಸುಮಾರಿಗೆ ಸಾವಿನ ಬಗ್ಗೆ ಮಾಹಿತಿ ಬಂದಿತ್ತು. ಮನ್ಸೂರ್ ಅಲಿಖಾನ್ ಪರ ಪ್ರಚಾರದಲ್ಲಿ ಪತಿನಾಥ ತೊಡಗಿಕೊಂಡಿದ್ದ., ಜೆ.ಸಿ.ನಗರದಲ್ಲಿ ಅಭ್ಯರ್ಥಿ ಹಾಗೂ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳದಲ್ಲಿ ಇತರೆ ಕಾರ್ಯಕರ್ತರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಆತ ಮೃತಪಟ್ಟಿಸುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.

ಸಾವು (ಸಾಂಕೇತಿಕ ಚಿತ್ರ)
ಕೆಆರ್ ಪುರ: ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರಿನ ಡೋರ್ ತಗುಲಿ ಬೈಕ್ ಪಲ್ಟಿ; ಖಾಸಗಿ ಬಸ್ ಹರಿದು ಬಿಜೆಪಿ ಕಾರ್ಯಕರ್ತ ದುರ್ಮರಣ

ಪತಿ ನಾಥ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆಯಾಸದಿಂದಾಗಿ ಹೃದಯಾಘಾತವಾಗಿರಬಹುದು ಎಂದು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಸಂಭವಿಸಿದ ಎರಡನೇ ಸಾವು ಇದಾಗಿದೆ. ಏಪ್ರಿಲ್ 8ರಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ತಗುಲಿ ಕೆಳಗೆ ಬಿದ್ದ ವ್ಯಕ್ತಿ ಮೇಲೆ ಬಸ್ ಹರಿದು ಮೃತಪ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com